ಚಿತ್ರದುರ್ಗ: ಶ್ರೀಲಂಕಾದ ಕೊಲಂಬೊದಲ್ಲಿ ಮೇ1 ರಿಂದ 5 ರವರೆಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಯನೈಟೆಡ್ ಇಂಡಿಯಾ ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿತ್ರದುರ್ಗದ ಹುಡುಗ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹಿರಿಯೂರಿನ ಮಹಮ್ಮದ್ ಜೀಶಾನ್ 100 ಮೀಟರ್ (19 ವರ್ಷದೊಳಗಿನ) ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದರು.
ಮಹಮ್ಮದ್ ಜೀಶಾನ್, ಹಿರಿಯೂರಿನ ಬಂಬೂ ಬಜಾರ್ ರಸ್ತೆಯ ನಿವಾಸಿ ಮಹಮ್ಮದ್ ಜಫ್ರುದ್ದೀನ್ ಹಾಗೂ ಮುಷೀರಾಜಾನ್ ದಂಪತಿಯ ಪುತ್ರ.
ಜೀಶಾನ್ ಅಂತರಾಷ್ಟ್ರೀಯ ಮಟ್ಟದ ಸಾಧನೆಗೆ ಅನೇಕ ಸಂಘ ಸಂಸ್ಥೆಗಳು ಶುಭಾಶಯ ಕೋರಿವೆ.