ETV Bharat / briefs

ದೇವಾಲಯದಲ್ಲಿ ಕಾಲ್ತುಳಿತಕ್ಕೆ 7 ಭಕ್ತರು ಬಲಿ, 10 ಮಂದಿಗೆ ಗಂಭೀರ ಗಾಯ - ಪ್ರಧಾನಿ ಮೋದಿ

ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ದೇವಾಲಯವೊಂದರಲ್ಲಿ ಭಾರಿ ದುರಂತ ಸಂಭವಿಸಿದೆ. ದೇವಸ್ಥಾನದಲ್ಲಿ ನಾಣ್ಯ ಹಂಚಿಕೆ ಮಾಡುತ್ತಿದ್ದಂತೆ ವೇಳೆ ಏಕಾಏಕಿ ಜನದಟ್ಟಣೆಯಿಂದ ಕಾಲ್ತುಳಿತ ಸಂಭವಿಸಿದೆ. ಈ ವೇಳೆ 7 ಮಂದಿ ಸಾವನ್ನಪ್ಪಿದ್ದಾರೆ.

ಕಾಲ್ತುಳಿತಕ್ಕೆ ಸಾವು
author img

By

Published : Apr 22, 2019, 8:15 AM IST

Updated : Apr 22, 2019, 11:41 AM IST

ಚೆನ್ನೈ: ದೇವಾಯಲವೊಂದರಲ್ಲಿ ಜನಸಂದಣಿಯಿಂದಾಗಿ ಕಾಲ್ತುಳಿತ ಉಂಟಾಗಿ ಸುಮಾರು 7 ಮಂದಿ ಸಾವನ್ನಪ್ಪಿ, 10 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ತುರೈಯೂರ್​​ನಲ್ಲಿ ನಡೆದಿದೆ.

ಮುತಲಮ್ಮನಪಾಯಮ್​ ಗ್ರಾಮದ ದೇವಸ್ಥಾನದ ಉತ್ಸವದ ವೇಳೆ ಈ ದುರಂತ ನಡೆದಿದ್ದು, ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಭಕ್ತರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

ಚಿತ್ರ ಪೌರ್ಣಮಿ ಅಂಗವಾಗಿ 'ಪಿಡಿಕಾಸು' (ದೇವಾಲಯದ ನಾಣ್ಯಗಳು) ಹಂಚುವ ವೇಳೆ ಎಲ್ಲರೂ ಏಕಾಏಕಿಯಾಗಿ ಮುಗಿಬಿದ್ದ ಕಾರಣ ಘಟನೆ ಸಂಭವಿಸಿದೆ. ಪ್ರತಿ ವರ್ಷ ನಡೆಯುವ ಈ ದೇವಸ್ಥಾನದ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಿದ್ದರು.

ಪರಿಹಾರ ಘೋಷಣೆ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಅವಘಡದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ತಲಾ 2ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇತ್ತ ತಮಿಳುನಾಡು ಸಿಎಂ ಕೆ ಪಳನಿಸ್ವಾಮಿ ತಲಾ 1ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಘೋಷಿಸಿದ್ದಾರೆ.

Intro:Body:

ದೇವಾಲಯದಲ್ಲಿ ಕಾಲ್ತುಳಿತಕ್ಕೆ 7 ಸಾವು, 10 ಮಂದಿಗೆ ಗಾಯ: ಪರಿಹಾರ ಘೋಷಿಸಿದ ಪಿಎಂ

ಚೆನ್ನೈ:  ದೇವಾಯಲವೊಂದರಲ್ಲಿ ಸಂಭವಸಿರುವ ಕಾಲ್ತುಳಿತದಲ್ಲಿ ಸುಮಾರು 7 ಮಂದಿ ದುರ್ಮರಣವನ್ನಪ್ಪಿದ್ದು, 10 ಜನರು ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ತುರೈಯೂರ್​​ನಲ್ಲಿ ನಡೆದಿದೆ.

ಮುತಲಮನ್ಪಾಯಲಂ ಗ್ರಾಮದ ದೇವಸ್ಥಾನದ ಉತ್ಸವದ ವೇಳೆ ಈ ದುರ್ಘಟನೆ ನಡೆದಿದ್ದು, ನಾಲ್ವರು ಮಹಿಳೆಯರು ಕೂಡ ಘಟನೆಯಲ್ಲಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

 ಚಿತ್ರ ಪೌರ್ಣಮಿ ಅಂಗವಾಗಿ 'ಪಿಡಿಕಾಸು' (ದೇವಾಯಯದ ನಾಣ್ಯಗಳು) ಹಂಚುವ ವೇಳೆ ಎಲ್ಲರೂ ಏಕಾಏಕಿಯಾಗಿ ಮುಗಿಬಿದ್ದ ಕಾರಣ ಘಟನೆ ಸಂಭವಿಸಿದೆ. ಪ್ರತಿ ವರ್ಷ ನಡೆಯುವ ಈ ದೇವಸ್ಥಾನದ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಿದ್ದರು.

ಪರಿಹಾರ ಘೋಷಣೆ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಅವಘಡದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ತಲಾ 2ಲಕ್ಷ ರೂ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇತ ತಮಿಳುನಾಡು ಸಿಎಂ ಕೆ ಪಳನಿಸ್ವಾಮಿ ತಲಾ 1ಲಕ್ಷ ರೂ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ ಘೋಷಣೆ ಮಾಡಿದ್ದಾರೆ.

Conclusion:
Last Updated : Apr 22, 2019, 11:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.