ಮುಂಬೈ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ 300 ರನ್ಗಳ ಜೊತೆಯಾಟ ನಡೆಸಿ ವಿಶ್ವಕ್ರಿಕೆಟ್ಅನ್ನು ಬೆಚ್ಚಿ ಬೀಳಿಸಿದ್ದ ಭಾರತೀಯ ಅತ್ಯುತ್ತಮ ಜೋಡಿಗಳಾದ ಆಟಕ್ಕೆ 20 ವರ್ಷ ತುಂಬಿದೆ.
ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಒಟ್ಟಿಗೆ ಪದಾರ್ಪಣೆ ಮಾಡಿದ ಕರ್ನಾಟಕದ ರಾಹುಲ್ ದ್ರಾವಿಡ್ ಹಾಗೂ ಬೆಂಗಾಲಿ ಟೈಗರ್ ಸೌರವ್ ಗಂಗೂಲಿ 1999 ರಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿ ಬರೋಬ್ಬರಿ 318ರನ್ಗಳ ಜೊತೆಯಾಟ ನೀಡಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡದ ಆರಂಭಿಕ ಆಟಗಾರ ಸದಾಗೊಪ್ಪನ್ ರಮೇಶ್ ಕೇವಲ 5 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಆ ಸಂದರ್ಭದಲ್ಲಿ ಜೊತೆಯಾದ ಗಂಗೂಲಿ ದ್ರಾವಿಡ್ ಜೋಡಿ 2 ನೇ ವಿಕೆಟ್ಗೆ ಬರೋಬ್ಬರಿ 318 ರನ್ ಜೊತೆಯಾಟ ನಡೆಸಿ ವಿಶ್ವದಾಖಲೆ ಬರೆದಿದ್ದರು.
ಗಂಗೂಲಿ 158 ಎಸೆತಗಳಲ್ಲಿ 17 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 183 ರನ್, ದ್ರಾವಿಡ್ 129 ಎಸೆತಗಳಲ್ಲಿ 17 ಬೌಂಡರಿ 1 ಸಿಕ್ಸರ್ ಸಹಿತ 145 ರನ್ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು.
1463 ಏಕದಿನ ಪಂದ್ಯಗಳ ಇತಿಹಾಸದಲ್ಲಿ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ 300 ರನ್ಗಳ ಜೊತೆಯಾಟ ನಡೆಸಿತ್ತು. ಇದು ಯಾವುದೇ ವಿಕೆಟ್ ಜೊತೆಯಾಟದಲ್ಲಿ ದಾಖಲಾದ ಅತಿಹೆಚ್ಚುರನ್ಗಳ ದಾಖಲೆಯಾಗಿತ್ತು. ಈ ದಾಖಲೆಯನ್ನು ಅದೇ ವರ್ಷ ಸಚಿನ್ ಹಾಗೂ ದ್ರಾವಿಡ್ ಜೋಡಿ ಮುರಿದಿತ್ತು.ಆ ಪಂದ್ಯದಲ್ಲಿ ಸಚಿನ್ 186 ಹಾಗೂ ದ್ರಾವಿಡ್ 153 ರನ್ಗಳಿಸಿದ್ದರು.
ದ್ರಾವಿಡ್-ಗಾಂಗೂಲಿ ಜೋಡಿಯ 20 ವರ್ಷದ ಆ ಇನಿಂಗ್ಸ್ ಅತಿ ಹೆಚ್ಚು ರನ್ಗಳ ಜೊತೆಯಾಟ ನಡೆಸಿರುವ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ, ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ ಹಾಗೂ ಸ್ಯಾಮ್ಯುಯೆಲ್ ಇದ್ದಾರೆ. ಈ ಜೋಡಿ 2ನೇ ವಿಕೆಟ್ಗೆ 372 ರನ್ಗಳ ಜೊತೆಯಾಟ ನೀಡಿತ್ತು. ನಂತರದ ಸ್ಥಾನದಲ್ಲಿ ವಿಂಡೀಸ್ನ ಕ್ಯಾಂಪ್ಬೆಲ್-ಸೈ ಹೋಪ್ ಜೋಡಿ ಇದ್ದು, ಈ ಜೋಡಿ ಮೊದಲ ವಿಕೆಟ್ಗೆ 331 ರನ್ಗಳಿಸಿದೆ. 3 ನೇ ಸ್ಥಾನದಲ್ಲಿ ಸಚಿನ್-ದ್ರಾವಿಡ್(331) ಇದೆ.