ಹೈದರಾಬಾದ್: ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತದ್ದು ಶೇ.100ರ ಫಲಿತಾಂಶ. ಇಲ್ಲಿಯವರೆಗೆ ನಡೆದ ಯಾವುದೇ ಪಂದ್ಯದಲ್ಲೂ ಟೀಂ ಇಂಡಿಯಾ ಸೋಲು ಕಂಡಿಲ್ಲ. 2003ರ ವಿಶ್ವಕಪ್ನಲ್ಲೂ ಟೀಂ ಇಂಡಿಯಾ ಪಾಕ್ ವಿರುದ್ಧ ಅಬ್ಬರಿಸಿತ್ತು.
2003ರಲ್ಲಿ ಮುಖಾಮುಖಿಯಾಗಿದ್ದ ಈ ಪಂದ್ಯದಲ್ಲಿ ಪಾಕ್ ಸಯೀದ್ ಅನ್ವರ್ ಶತಕದ ನೆರವಿನಿಂದ 50 ಓವರ್ಗಳಲ್ಲಿ 273ರನ್ಗಳಿಕೆ ಮಾಡಿತ್ತು. ಇದರ ಬೆನ್ನತ್ತಲ್ಲು ಮೈದಾನಕ್ಕಿಳಿದಿದ್ದ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನ ಸಚಿನ್ಗೆ ಟಾಂಗ್ ನೀಡಿದ್ದ ಶೋಯಬ್ಗೆ ಸಚಿನ್ ಬ್ಯಾಟ್ ಮೂಲಕ ಉತ್ತರ ನೀಡಿದ್ದರು.
ಅಖ್ತರ್ ಒಂದೇ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಸೇರಿದಂತೆ 18ರನ್ಗಳಿಕೆ ಮಾಡಿದ್ದ ಸಚಿನ್,75 ಎಸೆತಗಳಲ್ಲಿ 98ರನ್ಗಳಿಕೆ ಮಾಡಿದ್ದರು. ಇದರಲ್ಲಿ 12 ಬೌಂಡರಿ ಹಾಗೂ 1 ಸಿಕ್ಸ್ ಸಹ ಇತ್ತು. ಇನ್ನು ಸಚಿನ್ ವಿಕೆಟ್ ಪತನಗೊಳ್ಳತ್ತಿದ್ದಂತೆ ಮೈದಾನಕ್ಕಿಳಿದಿದ್ದ ದ್ರಾವಿಡ್, ಯುವರಾಜ್ ತಂಡವನ್ನ ಸುಲಭವಾಗಿ ಗೆಲುವಿನ ದಡ ಸೇರಿಸಿದ್ದರು. ವಿಶೇಷವೆಂದರೆ 2003ರ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.