ಮುಂಬೈ : 19 ತಿಂಗಳ ಮಗುವಿಗೆ ಬೆನ್ನುಮೂಳೆ ಸ್ನಾಯು ಕ್ಷೀಣತೆ (spinal muscular atrophy ) ಕಾಣಿಸಿಕೊಂಡಿದ್ದು, ಚಿಕಿತ್ಸೆಗೆ 16 ಕೋಟಿ ರೂ.ಅವಶ್ಯಕತೆಯಿದೆ.
ನಗರದ ಅಶ್ಫಾಕ್ ಚೌಧರಿ, ಅಮ್ರಿನ್ ಚೌಧರಿ ಎಂಬುವರ ಪುತ್ರಿ ಜೈನಾಬ್. ಈ ಮಗುವಿಗೆ 19 ತಿಂಗಳಾದರೂ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.
ತಪಾಸಣೆಗೆಂದು ಆಸ್ಪತ್ರೆಗೆ ಹೋದ ಬಳಿಕ ಮಗುವಿಗೆ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆಯಿದ್ದು, ಚಿಕಿತ್ಸೆಗೆ 16 ಕೋಟಿ ರೂ.ಅವಶ್ಯಕತೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಸ್ವಿಸ್ ಫಾರ್ಮಾ ಕಂಪನಿಯಲ್ಲಿ ಲಭ್ಯವಿರುವ ಈ ಇಂಜೆಕ್ಷನ್ ಖರೀದಿಸಲು ಕ್ರೌಡ್ ಫಂಡಿಂಗ್ ನೆರವಿನೊಂದಿಗೆ ಸಾರ್ವಜನಿಕರಿಂದ ಪೋಷಕರು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ.
ನನ್ನ ಮಗಳ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ. ದಯವಿಟ್ಟು ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದೊಂದು ಅಪರೂಪದ ಕಾಯಿಲೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದಿದ್ದರೆ, ಮಕ್ಕಳ ಪ್ರಾಣ ಹೋಗಬಹುದು. ಈ ರೋಗದಿಂದ ಮಕ್ಕಳು ಮೇಲೇಳಲು, ಕುಳಿತುಕೊಳ್ಳಲು, ನಡೆಯಲು, ಉಸಿರಾಡಲು ಸಾಧ್ಯವಾಗುವುದಿಲ್ಲ ಎಂದು ವೈದ್ಯೆ ನೆಲು ದೇಸಾಯಿ ಹೇಳಿದ್ದಾರೆ.