ರಂಗಾರೆಡ್ಡಿ(ತೆಲಂಗಾಣ): ವೈಎಸ್ಆರ್ಟಿಪಿ ಮುಖಂಡನೊಬ್ಬ ಬೆಕ್ಕಿನ ಮರಿ ಎಂದು ರಕ್ಷಣೆ ಮಾಡಲು ಹೋಗಿ ಚಿರತೆ ಮರಿ ಕೈಯಲ್ಲಿ ಹಿಡಿದುಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದ್ದು, ಇದರಿಂದ ಅವರು ಕೆಲ ನಿಮಿಷ ಆಘಾತಕ್ಕೊಳಗಾಗಿದ್ದಾರೆ.
ಇದನ್ನೂ ಓದಿರಿ: ಜೈಲಿನಲ್ಲಿರುವ ಆರ್ಯನ್ ಖಾನ್ಗೆ ₹4,500 ಮನಿ ಆರ್ಡರ್, ಪೋಷಕರೊಂದಿಗೆ ವಿಡಿಯೋ ಕಾಲ್!
ತಲೆ ಭಾಗಕ್ಕೆ ನೀರಿನ ಕೊಡ ಸಿಲುಕಿಕೊಂಡಿದ್ದರಿಂದ ಚಿರತೆ ಮರಿ ಆಹಾರ ಸೇವಿಸಲು ತೊಂದರೆ ಅನುಭವಿಸುತ್ತಿತ್ತು. ಜೊತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿತ್ತು. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವೈಎಸ್ಆರ್ಟಿಪಿ ಮುಖಂಡ ತಕ್ಷಣವೇ ವಾಹನ ನಿಲ್ಲಿಸಿ, ಬೆಕ್ಕಿನ ಮರಿ ಎಂದು ಅದಕ್ಕೆ ರಕ್ಷಣೆ ಮಾಡಲು ಹೋಗಿದ್ದಾರೆ. ಈ ವೇಳೆ, ಅದನ್ನ ಮೇಲೆತ್ತಿಕೊಂಡಿದ್ದಾರೆ. ಈ ವೇಳೆ ಅದು ಬೆಕ್ಕಲ್ಲ, ಚಿರತೆ ಮರಿ ಎಂಬುದನ್ನ ಅರಿತು ಒಂದು ಕ್ಷಣ ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಅದನ್ನ ಕೆಳಗೆ ಚೆಲ್ಲಿದ್ದಾರೆ. ಇದಾದ ಬಳಿಕ ನೇರವಾಗಿ ಆಸ್ಪತ್ರೆಗೆ ತೆರಳಿ ಟಿಟಿ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ.
ಇದಾದ ಬಳಿಕ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಚಿರತೆ ಮರಿ ಹಿಡಿಯಲು ತಂಡ ರಚನೆ ಮಾಡಿದ್ದು, ಇವುಗಳಿಂದ ದೂರ ಇರುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.