ಹೈದರಾಬಾದ್ (ತೆಲಂಗಾಣ): ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಪಹರಿಸಿ, ಅವರ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಯೂಟ್ಯೂಬ್ ಪತ್ರಕರ್ತ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಯೂಟ್ಯೂಬ್ ಚಾನಲ್ 'ಕ್ಯೂ ನ್ಯೂಸ್'ನ ವಾರ್ತಾ ವಾಚಕ ಚಿಂತಪಂಡು ನವೀನ್ ಕುಮಾರ್ ಎಂಬಾತನೇ ಬಂಧಿತ ಪ್ರಮುಖ ಆರೋಪಿ.
ಇಲ್ಲಿನ ಪೀರ್ಜಾಡಿಗುಡಾದಲ್ಲಿ ಮಂಗಳವಾರ ರಾತ್ರಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಲಾಠಿಗಳೊಂದಿಗೆ ಮೂವರು ವ್ಯಕ್ತಿಗಳು ಬಂದು ದೊಣ್ಣೆಗಳನ್ನು ಹಿಡಿದುಕೊಂಡು ಬಂದಿದ್ದರು. ಆಗ ಇಬ್ಬರೂ ಪೊಲೀಸರನ್ನು ಸಂಪರ್ಕಿಸಿ ಬಲವಂತವಾಗಿ ಕ್ಯೂ ನ್ಯೂಸ್ ಕಚೇರಿಗೆ ಕರೆದೊಯ್ದಿದ್ದರು. ಅಲ್ಲದೇ, ಕಚೇರಿಯಲ್ಲಿ ಕಾನ್ಸ್ಟೇಬಲ್ಗಳನ್ನು ಕೂಡಿ ಹಾಕಿ ಥಳಿಸಲಾಗಿತ್ತು. ಇಷ್ಟೇ ಅಲ್ಲ, ಅವರ ಸೆಲ್ ಫೋನ್‌ಗಳನ್ನೂ ಈ ಗ್ಯಾಂಗ್ ಕಿತ್ತುಕೊಂಡಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ವೈರಲ್ ವಿಡಿಯೋ ಪ್ರಕರಣ: ಯೂಟ್ಯೂಬರ್ ಮನೀಶ್ ಕಶ್ಯಪ್ ಶರಣಾಗತಿ
ಈ ಅಪರಾಧದ ಸುಳಿವು ಸಿಕ್ಕ ನಂತರ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ, ಸಹೋದ್ಯೋಗಿಗಳನ್ನು ರಕ್ಷಣೆ ಮಾಡಿದ್ದರು. ಮತ್ತೊಂದೆಡೆ, ಈ ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರ ಆಧಾರದ ಮೇಲೆ 'ಕ್ಯೂ ನ್ಯೂಸ್'ನ ವಾರ್ತಾ ವಾಚಕ, ತೀನ್ಮಾರ್ ಮಲ್ಲಣ್ಣ ಎಂದೇ ಖ್ಯಾತಿ ಪಡೆದ ಚಿಂತಪಂಡು ನವೀನ್ ಕುಮಾರ್ ಮತ್ತು ಯೂಟ್ಯೂಬ್ ಚಾನಲ್ನ ಸಂಪಾದಕ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಪೊಲೀಸರ ಮೇಲೆ ಮಲ್ಲಣ್ಣ ಕೂಡ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ರಾಚಕೊಂಡ ಕಮಿಷನರೇಟ್ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಕೆಲವು ಹಾರ್ಡ್ಡಿಸ್ಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ನಂತರ ತೀನ್ಮಾರ್ ಮಲ್ಲಣ್ಣನನ್ನು ಬೆಂಬಲಿಸಿ ಕೆಲ ಸ್ಥಳೀಯ ಪತ್ರಕರ್ತರು ಮೇಡಿಪಲ್ಲಿ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್, ಮಾಜಿ ಶಾಸಕ ಎನ್ವಿಎಸ್ಎಸ್ ಪ್ರಭಾಕರ್ ಮಂಗಳವಾರ ಅರ್ಧರಾತ್ರಿ ತೀನ್ಮಾರ್ ಮಲ್ಲಣ್ಣ ಮನೆಗೆ ಭೇಟಿ ನೀಡಿ, ಅವರ ಪತ್ನಿಗೆ ಧೈರ್ಯ ಹೇಳಿದ್ದಾರೆ.
ಬಿಹಾರ ಯೂಟ್ಯೂಬರ್ ಬಂಧನ ಪ್ರಕರಣ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋಗಳನ್ನು ಹರಿಬಿಟ್ಟ ಆರೋಪದ ಮೇಲೆ ಬಿಹಾರದ ಯೂಟ್ಯೂಬರ್ ಮನೀಶ್ ಕಶ್ಯಪ್ ಎಂಬಾತನನ್ನು ಬಿಹಾರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ವದಂತಿ ಪ್ರಕರಣವು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಿಹಾರದ ವಿಧಾನಸೌಧದಲ್ಲೂ ಈ ವಿಷಯವನ್ನು ಪ್ರತಿಪಕ್ಷ ಬಿಜೆಪಿ ಪ್ರಸ್ತಾಪಿಸಿ ಗದ್ದಲ ಉಂಟು ಮಾಡಿತ್ತು. ಹೀಗಾಗಿಯೇ ವಸ್ತು ಸ್ಥಿತಿಯನ್ನು ಅರಿಯಲು ತಮಿಳುನಾಡು ಮತ್ತು ಬಿಹಾರ ಸರ್ಕಾರಗಳ ನಡುವೆ ಉನ್ನತ ಮಟ್ಟದ ಮಾತುಕತೆ ನಡೆಸಲಾಗಿತ್ತು. ಕಾರ್ಮಿಕರ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಡಿ ದೈನಿಕ್ ಭಾಸ್ಕರ್ ಸಂಪಾದಕ, ತನ್ವೀರ್ ಪೋಸ್ಟ್ ಸಂಪಾದಕ ಮೊಹಮ್ಮದ್ ತನ್ವೀರ್ ಮತ್ತು ತೂತುಕುಡಿಯ ಪ್ರಶಾಂತ್ ಉಮಾ ರಾವ್ ಸೇರಿ ಹಲವರು ತಮಿಳುನಾಡು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ವಲಸೆ ಕಾರ್ಮಿಕರ ಬಗ್ಗೆ ಫೇಸ್‌ಬುಕ್‌ನಲ್ಲಿ ಸುಳ್ಳು ಪೋಸ್ಟ್: ತಮಿಳುನಾಡು ಪೊಲೀಸರಿಂದ ಬಿಹಾರದ ವ್ಯಕ್ತಿಯ ಸೆರೆ