ಎರ್ನಾಕುಲಂ(ಕೇರಳ) : ಕೇರಳದ ಯುವಕನೋರ್ವ ಅಂತಿಮ ವರ್ಷದ ಎಂ.ಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೊರೊನಾ ಹಿನ್ನೆಲೆ ಆನ್‌ಲೈನ್ ತರಗತಿಗಳ ಏಕತಾನತೆಯಿಂದ ಹೊರಬರಲು ಎಮ್ಮೆ ಸಾಕಣೆಗೆ ಮುಂದಾಗಿದ್ದಾರೆ.
ಕೋಥಮಂಗಲಂನ ಒನ್ಯುಯಲ್ ಮಲಯಲ್ ಥಾಮಸ್ಕುಟ್ಟಿ ಮತ್ತು ಮ್ಯಾಗಿ ಅವರ ಏಕೈಕ ಪುತ್ರ ಮ್ಯಾಥ್ಯೂ ಈ ನಿರ್ಧಾರ ಮಾಡಿದ ವಿದ್ಯಾರ್ಥಿ. ಕೊರೊನಾ ಲಾಕ್‌ಡೌನ್‌ನ ಆರಂಭದಿಂದಲೂ ಇತರ ವಿದ್ಯಾರ್ಥಿಗಳಂತೆ ತನ್ನ ಆನ್‌ಲೈನ್ ತರಗತಿಗಳಲ್ಲಿ ತುಂಬಾ ಇಷ್ಟದಿಂದ ಭಾಗಿಯಾಗುತ್ತಿದ್ದ. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲಿಯೇ ಇರುವಾಗ ಆನ್‌ಲೈನ್ ತರಗತಿಗಳ ಬೇಸರ ಮತ್ತು ಏಕತಾನತೆ ಕಾಡಿದೆ. ಇದನ್ನು ನಿವಾರಿಸಿಕೊಳ್ಳಲು ಹೊಸ ಮಾರ್ಗಗಳನ್ನು ಮ್ಯಾಥ್ಯೂ ಹುಡುಕತೊಡಗಿದಾಗ ಎಮ್ಮೆ ಪಾಲನೆ ಕಡೆ ಮುಖ ಮಾಡಿದ್ದಾರೆ.
ಕೃಷಿ ಹಿನ್ನೆಲೆಯಿಂದ ಬಂದ ಮ್ಯಾಥ್ಯೂ, ತನ್ನ ನಿರ್ಧಾರದೊಂದಿಗೆ ಮುಂದುವರಿಯಲು ಯಾವುದೇ ಆತಂಕವನ್ನು ಹೊಂದಿಲ್ಲವಾದ್ದರಿಂದ ತುಂಬಾ ಯಶಸ್ವಿಯಾಗಿ ಈಗ ಎಮ್ಮೆ ಸಾಕಣೆ ಮಾಡಿಕೊಂಡು ಬರುತ್ತಿದ್ದಾರೆ. ಅವರು ಹೆಚ್ಚಿನ ರೋಗನಿರೋಧಕ ಶಕ್ತಿ ಮತ್ತು ಉತ್ತಮ ದೈಹಿಕ ಶಕ್ತಿಯನ್ನು ಹೊಂದಿರುವ ಹರಿಯಾಣದಿಂದ ಮುರ್ರಾ ತಳಿ ಎಮ್ಮೆಗಳನ್ನು ಖರೀದಿಸಿ ತಂದಿದ್ದಾರೆ. ಈ ಎಮ್ಮೆಗಳಿಗೆ ಮುಖ್ಯ ಆಹಾರವೆಂದರೆ ಸ್ವಂತ ಕೃಷಿಭೂಮಿಯಲ್ಲೇ ಬೆಳೆದ ಕಣ್ಣರಪೋಳ (ಒಂದು ರೀತಿಯ ನೀರಿನ ಸಸ್ಯ) ದ ಹುಲ್ಲು.
ನೀರಿನ ಎಮ್ಮೆಗಳಾದ ಮುರ್ರಾ ಎಮ್ಮೆಗಳ ಸ್ನಾನಕ್ಕೆ ಜಮೀನಿನ ಬಳಿ ಒಂದು ಸಣ್ಣ ಕೊಳವನ್ನು ನಿರ್ಮಾಣ ಮಾಡಲಾಗಿದೆ. ಮ್ಯಾಥ್ಯೂ ತನ್ನ ಅಧ್ಯಯನದ ಜೊತೆಗೆ ಎಮ್ಮೆ ಪಾಲನೆ ಮುಂದುವರಿಸುತ್ತಿದ್ದಾರೆ. ಇದರುಇ ತರಿಗೂ ಮಾದರಿಯಾಗಿದೆ.