ETV Bharat / bharat

ಕೇವಲ 200 ರೂಪಾಯಿಗಾಗಿ ಯುವಕನ ಕೊಲೆ! - ಆನಂದ್ ಪರ್ವತ್

ಪ್ರಕರಣವೊಂದರಲ್ಲಿ ಸೆರೆವಾಸ ಅನುಭವಿಸಿ ಹೊರಬಂದಿದ್ದ ವ್ಯಕ್ತಿಯನ್ನು 200 ರೂಪಾಯಿ ವಿಚಾರಕ್ಕೆ ಯುವಕನೊಬ್ಬ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಕೇವಲ 200 ರೂಪಾಯಿಗಾಗಿ ಯುವಕನ ಕೊಲೆ
ಕೇವಲ 200 ರೂಪಾಯಿಗಾಗಿ ಯುವಕನ ಕೊಲೆ
author img

By

Published : Oct 17, 2021, 1:29 PM IST

ನವದೆಹಲಿ: ಕೇವಲ 200 ರೂಪಾಯಿಗಾಗಿ ಯುವಕನನ್ನು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದೆಹಲಿಯ ಆನಂದ್ ಪರ್ವತ್ ಪ್ರದೇಶದ ನಿವಾಸಿಗಳಾದ ಸೋನು (24) ಮತ್ತು ವಿವೇಕ್ ಎಂಬ ಯುವಕರ ನಡುವೆ ಈ ಹಿಂದೆ ಗಲಾಟೆಯಾಗಿತ್ತು. ಪ್ರಕರಣವೊಂದರಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸೋನು ಮೊನ್ನೆ ಶುಕ್ರವಾರವಷ್ಟೇ ಜೈಲಿನಿಂದ ಹೊರಬಂದಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮದುವೆಯಾದ್ರೂ ಇನಿಯನ ತೆಕ್ಕೆಯಲ್ಲಿ ಮಹಿಳೆ: ಬೆಂಗಳೂರಲ್ಲಿ ಬಿತ್ತು ಹೆಣ.. ಠಾಣೆಗೆ ಶವ ತಂದು ಆರೋಪಿಗಳು ಶರಣು

ನಿನ್ನೆ ಆನಂದ್ ಪರ್ವತ್ ಪ್ರದೇಶದಲ್ಲಿರುವ ರಾಮಲೀಲಾ ಮೈದಾನದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಸೋನು ಪತ್ತೆಯಾಗಿದ್ದನು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಸೋನು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ 200 ರೂಪಾಯಿ ವಿವಾದದಲ್ಲಿ ಸೋನು ಮತ್ತು ವಿವೇಕ್ ನಡುವೆ ಜಗಳವಾಗಿದ್ದು, ಈ ವೇಳೆ ಸೋನುಗೆ ವಿವೇಕ್​ ಚಾಕುವಿನಿಂದ ಇರಿದು ಕೊಂದಿರುವುದು ಬೆಳಕಿಗೆ ಬಂದಿತ್ತು. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿವೇಕ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.