ಆಗ್ರಾ(ಉತ್ತರ ಪ್ರದೇಶ): ಪ್ರೇಮಸೌಧ ತಾಜ್ ಮಹಲ್ ನೋಡಲು ಆಗಮಿಸಿದ್ದ ಯುವಕನೋರ್ವ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ತಕ್ಷಣವೇ ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ತಾಜ್ ಮಹಲ್ ನೋಡಲು ಆಗಮಿಸಿದ್ದ ಯುವಕ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದ. ಈ ವೇಳೆ ಏಕಾಏಕಿಯಾಗಿ ಪಾಕ್ ಪರವಾಗಿ ಘೋಷಣೆ ಕೂಗಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಥಳಿಸಿರುವ ಸ್ಥಳೀಯರು ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಬಂಗಾಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಎಂಸಿ ಕ್ಲೀನ್‌ಸ್ವೀಪ್: ಖಾತೆ ತೆರೆಯಲು ವಿಪಕ್ಷ ಬಿಜೆಪಿ ವಿಫಲ
ಆರೋಪಿಯನ್ನು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ನಿವಾಸಿ ಸುಹೇಲ್ (19) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 151ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ಫೆಬ್ರವರಿ 27, 28 ಮತ್ತು ಮಾರ್ಚ್ 1 ರಂದು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ತಾಜ್ ಮಹಲ್ ವೀಕ್ಷಣೆ ಮಾಡಲು ಅವಕಾಶ ನೀಡಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರೇಮಸೌಧದತ್ತ ಧಾವಿಸುತ್ತಿದ್ದಾರೆ.
ಫೆ. 28ರಂದು ತಾಜ್ ಮಹಲ್ ಬಳಿ ಅತಿ ವೇಗದಲ್ಲಿ ವಿಮಾನವೊಂದು ಹಾದು ಹೋಗಿ ಕೆಲ ನಿಮಿಷಗಳ ಕಾಲ ಆತಂಕ ಸೃಷ್ಟಿ ಮಾಡಿದ್ದ ಘಟನೆ ನಡೆದಿತ್ತು.