ಕಾಮಾರೆಡ್ಡಿ( ತೆಲಂಗಾಣ): ಆಸ್ತಿ ಸಂಬಂಧ ಅಕ್ಕಳ ಮೇಲೆ ಪೆಟ್ರೋಲ್ ಸುರಿದು ಕಿರಿಯ ಸಹೋದರಿ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯನ್ನು ಬೆರಗುಗೊಳಿಸಿದೆ. ಜಿಲ್ಲೆಯ ಚಿನ್ನಮಲ್ಲಾರೆಡ್ಡಿ ನಿವಾಸಿ ಧರ್ಮಗೌನಿ ರಾಜಾಗೌಡರಿಗೆ ನಾಲ್ಕು ಹೆಣ್ಣು ಮಕ್ಕಳು.
ಇವರೆಲ್ಲರಿಗೂ ಮದುವೆಯಾಗಿದೆ. ಇವರಲ್ಲಿ ಒಬ್ಬರಾದ ವರಲಕ್ಷ್ಮಿ ವಡಿಯಾರಂ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತವರು ಮನೆ ಆಸ್ತಿ ವಿಚಾರದಲ್ಲಿ ಅಕ್ಕ- ತಂಗಿಯರ ಮಧ್ಯೆ ವಾಗ್ವಾದ ನಡೆಯುತ್ತಿತ್ತು ಎನ್ನಲಾಗುತ್ತಿದೆ.
ಸೋಮವಾರ ವರಲಕ್ಷ್ಮಿ ಮನೆಗೆ ಸಹೋದರಿ ರಾಜೇಶ್ವರಿ ತೆರಳಿದ್ದಾರೆ. ಅವರಿಬ್ಬರ ಮಧ್ಯೆ ಆಸ್ತಿ ವಿಚಾರಕ್ಕಾಗಿ ಜಗಳ ನಡೆದಿದೆ. ಆವೇಶಕ್ಕೊಳಗಾದ ರಾಜೇಶ್ವರಿ ತನ್ನ ಜೊತೆ ತಂದಿದ್ದ ಪೆಟ್ರೋಲ್ನ್ನು ವರಲಕ್ಷ್ಮಿ ಮೇಲೆ ಸುರಿದು ಬೆಂಕಿ ಹಚ್ಚಿದ್ದಾರೆ. ಇಷ್ಟಾದರೂ ಸುಮ್ಮನಾಗದ ವರಲಕ್ಷ್ಮಿ ತನ್ನ ಮೈ ಬೆಂಕಿಯಿಂದ ಉರಿಯುತ್ತಿದ್ದರೂ ಸಹ ಸಹೋದರಿ ರಾಜೇಶ್ವರಿಯನ್ನು ಅಪ್ಪಿಕೊಂಡಿದ್ದಾರೆ.
ಮನೆಯಲ್ಲಿದ್ದ ವರಲಕ್ಷ್ಮಿ ಮಕ್ಕಳು ಕೂಗಾಡಿದ್ದಾರೆ. ಮಕ್ಕಳ ಧ್ವನಿ ಕೇಳಿದ ನೆರೆಹೊರೆಯವರು ಇಬ್ಬರಿಗೂ ಬೆಂಕಿ ಹೊತ್ತಿಕೊಂಡಿರುವುದು ತಿಳಿದು ಬಂದಿದೆ. ಕೂಡಲೇ ಅಕ್ಕ- ಪಕ್ಕದವರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಹೀಗಾಗಿ ಇಬ್ಬರು ಸುಟ್ಟಗಾಯಗಳಿಂದ ಬಳಲುತ್ತಿದ್ದು, ಸಾವು - ಬದುಕಿನ ಮಧ್ಯ ಹೊರಾಟ ನಡೆಸಿದ್ದಾರೆ. ಹೈದರಾಬಾದ್ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ರಾಷ್ಟ್ರಪತಿ ಕೋವಿಂದ್ ಭೇಟಿ