ಹೋಲಿಕಾ ದಹನ್ ವೇಳೆ ಯುವಕನನ್ನ ಧಗ ಧಗಿಸುವ ಬೆಂಕಿಗೆ ತಳ್ಳಿದ ವ್ಯಕ್ತಿ! - Younger man thrown alive within the blazing hearth of Holika Dahan news
ಶಿವಕುಮಾರ್ ಸಾಹ್ನಿಯನ್ನು ಆರೋಪಿ ಸುಜಿತ್ ಕುಮಾರ್ ಬೆಂಕಿಯಲ್ಲಿ ತಳ್ಳಿದ್ದು, ಆತನಿಗೆ ಸುಟ್ಟ ಗಾಯಗಳಾಗಿವೆ. ಗಾಯಗೊಂಡ ಶಿವಕುಮಾರ್ ಸಾಹ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

ವೈಶಾಲಿ(ಬಿಹಾರ) : ಬಿಹಾರದ ವೈಶಾಲಿಯಲ್ಲಿ ಯುವಕನನ್ನು ಹೋಲಿಕಾ ದಹನ್ ವೇಳೆ ಬೆಂಕಿಗೆ ನೂಕಿದ ಘಟನೆ ಬೆಳಕಿಗೆ ಬಂದಿದೆ.
ವೈಶಾಲಿ ಜಿಲ್ಲೆಯ ಮಹಾನಾರ್ ಉಪವಿಭಾಗದ ಬಳಿಯ ಗೋರಿಗಮ ಗ್ರಾಮದಲ್ಲಿ ಹೋಲಿಕಾ ದಹನ್ ಸಂದರ್ಭದಲ್ಲಿ ಯುವಕನನ್ನು ಎಳೆದೊಯ್ದು ಬೆಂಕಿಗೆ ನೂಕಿದ ವಿಡಿಯೋವೊಂದು ವೈರಲ್ ಆಗಿದೆ. ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ವಿಡಿಯೋದಲ್ಲಿ ವ್ಯಕ್ತಿವೋರ್ವ ಯುವಕನನ್ನು ಎಳೆದು ತಂದು ತಕ್ಷಣವೇ ಉರಿಯುತ್ತಿರುವ ಜ್ವಾಲೆಗೆ ತಳ್ಳಿದ್ದಾನೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿಡಿಯೋ ಆಧರಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಇದೇ ವಿಡಿಯೋ ತುಣುಕನ್ನು ಆಧರಿಸಿ ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಶಿವಕುಮಾರ್ ಸಾಹ್ನಿಯನ್ನು ಆರೋಪಿ ಸುಜಿತ್ ಕುಮಾರ್ ಬೆಂಕಿಯಲ್ಲಿ ತಳ್ಳಿದ್ದು, ಆತನಿಗೆ ಸುಟ್ಟ ಗಾಯಗಳಾಗಿವೆ. ಗಾಯಗೊಂಡ ಶಿವಕುಮಾರ್ ಸಾಹ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸುಜಿತ್ಕುಮಾರ್ ಯುವಕನನ್ನು ಬೆಂಕಿಯಲ್ಲಿ ತಳ್ಳಿದ್ದು ಯಾಕೆ ಎಂಬ ಮಾಹಿತಿ ಪೊಲೀಸರಿಂದ ವಿಚಾರಣೆ ಬಳಿಕ ತಿಳಿಯಬೇಕಿದೆ.