ETV Bharat / bharat

‘ನನ್ನ ಶ್ವಾನದ ಪಕ್ಕದಲ್ಲೇ ನನ್ನನ್ನು ಅಂತ್ಯಕ್ರಿಯೆ ಮಾಡಿ’... ಆತ್ಮಹತ್ಯೆಗೆ ಶರಣಾದ ಯುವತಿಯ ಕೊನೆ ಆಸೆ! - ರಾಯಗಢ ಸುದ್ದಿ

ಸಾಕಿರುವ ಶ್ವಾನ ಸಾವನ್ನಪ್ಪಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಸಾವಿಗೂ ಮುನ್ನ ತನ್ನ ಕೊನೆ ಆಸೆಯನ್ನು ತಿಳಿಸಿರುವ ಯುವತಿಯು ಮೃತಪಟ್ಟ ತನ್ನ ಶ್ವಾನದ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸುವಂತೆ ಕೋರಿದ್ದಾಳೆ.

Young women suicide, women suicide for pet dog death, women suicide for pet dog death in Raigarh, Raigarh news, Raigarh Crime news, ಆತ್ಮಹತ್ಯೆಗೆ ಶರಣಾದ ಯುವತಿ, ಶ್ವಾನ ಸಾವನ್ನಪ್ಪಿದ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ಯುವತಿ, ರಾಯಗಢದಲ್ಲಿ ಶ್ವಾನ ಸಾವನ್ನಪ್ಪಿದ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ಯುವತಿ, ರಾಯಗಢ ಸುದ್ದಿ, ರಾಯಗಢ ಅಪರಾಧ ಸುದ್ದಿ,
ಆತ್ಮಹತ್ಯೆಗೆ ಶರಣಾದ ಯುವತಿಯ ಕೊನೆ ಆಸೆ
author img

By

Published : Nov 20, 2020, 9:21 AM IST

ರಾಯಗಢ: ತನ್ನ ಇಷ್ಟವಾದ ಸಾಕು ಶ್ವಾನ ಸಾವನ್ನಪ್ಪಿರುವುದನ್ನು ಜೀರ್ಣಿಸಿಕೊಳ್ಳದ ಯುವತಿ ನೇಣಿಗೆ ಶರಣಾಗಿರುವ ಘಟನೆ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.

21 ವರ್ಷದ ಪ್ರಿಯಾಂಶು ಸಿಂಗ್​ ಪಿಜಿ ವ್ಯಾಸಂಗ ಮಾಡುತ್ತಿದ್ದರು. ಆಕೆಯ ಮನೆಯಲ್ಲಿ ಶ್ವಾನವೊಂದನ್ನು ಸಾಕಲಾಗಿತ್ತು. ಪ್ರತಿದಿನ ಶ್ವಾನದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು ಪ್ರಿಯಾಂಶು. ಮಂಗಳವಾರ ರಾತ್ರಿ ಶ್ವಾನ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದು, ಕುಟುಂಬಸ್ಥರು ಸೇರಿ ಆ ಶ್ವಾನವನ್ನು ಅಂತ್ಯಕ್ರಿಯೆ ಮಾಡಿದ್ದರು.

ಈ ಘಟನೆಯಿಂದ ಹೊರ ಬಾರದ ಪ್ರಿಯಾಂಶು ಕುಗ್ಗಿ ಹೋಗಿದ್ದರು. ತೀವ್ರ ನೋವನಲ್ಲಿದ್ದ ಪ್ರಿಯಾಂಶು ಶ್ವಾನವನ್ನು ಅಂತ್ಯಕ್ರಿಯೆ ಮಾಡಿದ ಮರುದಿನ ಬೆಳಗ್ಗೆ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಂಬಾ ಸಮಯ ಕಳೆದ್ರೂ ಪ್ರಿಯಾಂಶು ರೂಂನಿಂದ ಹೊರ ಬಾರದ ಹಿನ್ನೆಲೆ ಪೋಷಕರು ಗಾಬರಿಗೊಂಡಿದ್ದರು. ಪ್ರಿಯಾಂಶು ರೂಂನ್ನು ತೆಗೆದು ನೋಡಿದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಪ್ರಿಯಾಂಶು ರೂಂನ್ನು ಪರಿಶೀಲನೆ ಮಾಡಿದಾಗ ಡೆತ್​ ನೋಟ್​ ಸಿಕ್ಕಿದ್ದು, ಅದರಲ್ಲಿ ‘ನನ್ನ ಶ್ವಾನವನ್ನು ಅಂತ್ಯಕ್ರಿಯೆ ಮಾಡಿದ ಪಕ್ಕದಲ್ಲೇ ನನ್ನನ್ನು ಮಣ್ಣು ಮಾಡಿ’ ಎಂದು ಬರೆದಿದ್ದಾರೆ. ಇದನ್ನು ನೋಡಿದ ಪ್ರಿಯಾಂಶು ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದರು.

ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.