ETV Bharat / bharat

20 ರೂಪಾಯಿಗೆ 50 ಕಿ.ಮೀ.​ ಪ್ರಯಾಣ​.. ವಿಶೇಷ ಬೈಕ್​​ ತಯಾರಿಸಿದ ಯುವಕ! - ರಾಜಸ್ಥಾನದ ಯುವಕನಿಂದ ವಿಶೇಷ ಬೈಕ್

ಇಂದಿನ ದುಬಾರಿ ದುನಿಯಾದಲ್ಲಿ ನಮ್ಮಿಷ್ಟದ ಬೈಕ್​ ಖರೀದಿ ಮಾಡಿ, ದೂರದ ಪ್ರಯಾಣ ಮಾಡುವುದು ಅಷ್ಟು ಸುಲಭವಲ್ಲ. ಆದರೆ, ರಾಜಸ್ಥಾನದ ಯುವಕನೋರ್ವ ಇಂತಹ ಕನಸನ್ನು ನನಸು ಮಾಡಿದ್ದಾರೆ. ಹಳೆಯ ಬೈಕ್​ಗೆ ಹೊಸ ರೂಪ ನೀಡಿದ್ದಾರೆ.

young Man made Electronic Bike
young Man made Electronic Bike
author img

By

Published : Apr 30, 2022, 7:44 PM IST

ಪಾಲಿ(ರಾಜಸ್ಥಾನ): ದಿನದಿಂದ ದಿನಕ್ಕೆ ಪೆಟ್ರೋಲ್​, ಡಿಸೇಲ್​ ಬೆಲೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಕನಸಿನ ಬೈಕ್​ ಖರೀದಿಸಿ ದೂರದ ಪ್ರಯಾಣ ಮಾಡುವುದು ಇತ್ತೀಚಿನ ದಿನಗಳಲ್ಲಿ ತುಂಬಾ ದುಬಾರಿಯಾಗ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್​ ಹಾಕ್ಬೇಕು ಎಂದು ಸಂಕಲ್ಪ ತೊಟ್ಟ ರಾಜಸ್ಥಾನದ ಯುವಕನೋರ್ವ ಕೇವಲ 15ರಿಂದ 20 ರೂಪಾಯಿ ವೆಚ್ಚದಲ್ಲಿ 50 ಕಿಲೋ ಮೀಟರ್​ ಕ್ರಮಿಸಬಲ್ಲ ಎಲೆಕ್ಟ್ರಾನಿಕ್​ ಬೈಕ್​ ತಯಾರಿಸಿದ್ದಾರೆ.

ದಿನೇಶ್ ಮಾಳವೀಯ ಈ ಬೈಕ್​​ಗೋಸ್ಕರ 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಹಳೆಯ ಬೈಕ್​ಗೆ ಹೊಸ ವಿನ್ಯಾಸ ನೀಡಿದ್ದಾರೆ. ಇದೀಗ ಕೇವಲ 15-20 ರೂಪಾಯಿಯಲ್ಲಿ 50 ರಿಂದ 55 ಕಿಲೋ ಮೀಟರ್​ ದೂರವನ್ನು ಇದರ ಮೇಲೆ ಕ್ರಮಿಸಬಹುದಾಗಿದೆ. ಈ ವಿಶೇಷ ಬೈಕ್ ನೋಡಲು ಅನೇಕ ಹಳ್ಳಿಯ ಜನ್ರು ತಂಡೋಪತಂಡವಾಗಿ ಆಗಮಿಸ್ತಿದ್ದಾರೆ.

ಕೇವಲ ಮೂರು ತಿಂಗಳಲ್ಲಿ ಈ ಬೈಕ್ ತಯಾರಿಸಲಾಗಿದ್ದು, ಇದಕ್ಕಾಗಿ ಸಾಕಷ್ಟು ಸಂಶೋಧನೆ ಸಹ ಮಾಡಲಾಗಿದೆ. ಫಾರ್ಮಸಿಯಲ್ಲಿ ಡಿಪ್ಲೋಮಾ ಮಾಡ್ತಿರುವ 26 ವರ್ಷದ ದಿನೇಶ್​ಗೆ ತಂದೆ ಸಹ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಬೈಕ್​ಗೆ ಜೋಡಿಸಿರುವ ಕೆಲವೊಂದು ಬಿಡಿ ಭಾಗಗಳನ್ನ ಆನ್​ಲೈನ್ ಮೂಲಕ ಆರ್ಡರ್ ಮಾಡಲಾಗಿದ್ದು, ಯೂಟ್ಯೂಬ್​​ನಲ್ಲಿ ಇದರ ಜೋಡಣೆ ಬಗ್ಗೆ ತಿಳಿದುಕೊಂಡು ವಿಶೇಷವಾದ ದ್ವಿಚಕ್ರ ವಾಹನ ತಯಾರಿಸಿದ್ದಾನೆ.

ಇದನ್ನೂ ಓದಿ: ಸಾವಿರ ಕೋಟಿ ಕ್ಲಬ್​​ ಸೇರಿದ ಕೆಜಿಎಫ್​​ 2: ಹಿಂದಿ ಅವತರಣಿಕೆಯಲ್ಲೇ ₹416 ಕೋಟಿ ಗಳಿಕೆ

ಹೊಸದಾಗಿ ವಿನ್ಯಾಸಗೊಂಡಿರುವ ಬೈಕ್​​ನಲ್ಲಿ ಚಾರ್ಜರ್​, ಲೈಟ್​​, ಬ್ರೇಕ್​ಗಳ ಜೊತೆಗೆ ಮೂರು ಗೇರ್​ಗಳಿವೆ. ಸ್ಪೀಡೋಮೀಟರ್​ ಸಹ ಇದ್ದು, ಸಾಮಾನ್ಯ ಬೈಕ್​ಗಳ ರೀತಿಯಲ್ಲೇ ಹೆಡ್​​ಲೈಟ್​​ ಜೋಡಿಸಲಾಗಿದೆ. ಗೇರ್​ ಬದಲಾಯಿಸಲು ಕಾಲುಗಳ ಬದಲಾಗಿ ಹೆಬ್ಬೆರಳು ಸಾಕು. ಒಂದು ಸಲ ಚಾರ್ಜ್ ಮಾಡಿದರೆ ಸುಮಾರು 50 ಕಿಲೋ ಮೀಟರ್ ಪ್ರಯಾಣ ಮಾಡಬಹುದು. ಬರುವ ದಿನಗಳಲ್ಲಿ ಮತ್ತಷ್ಟು ಹೊಸ ಆವಿಷ್ಕಾರ ಮಾಡುವ ಆಶಯ ಇದೆ ಎಂದು ದಿನೇಶ್ ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.