ಬಲ್ಲಿಯಾ (ಉತ್ತರ ಪ್ರದೇಶ): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮತ್ತೆ 'ಸಾಧು' (sadhu) ಆಗಿ ಹೋಗುತ್ತಾರೆ ಎಂದು ಭಾರತೀಯ ಜನತಾ ಪಕ್ಷದ ಮಾಜಿ ಶಾಸಕ ರಾಮ್ ಇಕ್ಬಾಲ್ ಸಿಂಗ್ (Former MLA Ram Iqbal Singh) ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಅವರು ತಕ್ಷಣ ಕೋಪಗೊಂಡು ಮತ್ತೆ ಸನ್ಯಾಸಿಯಾಗಲು ಹೋಗುತ್ತಾರೆ. ಅವರು ಗೋರಖ್‌ಪುರದ ಗೋರಖನಾಥ ದೇವಾಲಯದ ಪ್ರಧಾನ ಅರ್ಚಕರೂ ಆಗಿದ್ದರು ಎಂಬುದನ್ನು ನೆನಪಿಸಿದ್ದಾರೆ.
ಹಣದುಬ್ಬರದಿಂದಾಗಿ ಕೃಷಿ ವೆಚ್ಚ ಸಾಕಷ್ಟು ಹೆಚ್ಚಾಗಿದೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಕಾರಣ ಎಂದು ಅವರು ಇದೇ ವೇಳೆ ದೂರಿದ್ದಾರೆ. ಇನ್ನು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (SBSP) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ (Om Prakash Rajbhar) ಅವರನ್ನು ಹೊಗಳಿದ ಸಿಂಗ್, 'ರಾಜಭರ್ ಸಮುದಾಯದ ಏಕೈಕ ನಾಯಕ' ಎಂದು ಗುಣಗಾನ ಮಾಡಿದ್ದಾರೆ.
ರಾಮ್ ಇಕ್ಬಾಲ್ ಸಿಂಗ್ ಅವರು ಬಿಜೆಪಿ ಸರ್ಕಾರ( BJP government )ವನ್ನು ಟೀಕಿಸಿದ್ದಾರೆ ಮತ್ತು ಈ ಹಿಂದೆಯೂ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ, ಕಳೆದ ತಿಂಗಳು ನಡೆದ ಲಖಿಂಪುರ ಖೇರಿ ಘಟನೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಸಚಿವ ಸುಬ್ರತಾ ಸಹಾ ಮೇಲೆ ದಾಳಿ, 12 ಮಂದಿ ಪೊಲೀಸರ ವಶಕ್ಕೆ