ETV Bharat / bharat

2021: ಭಾರತಕ್ಕೆ ಕೊರೊನಾ ಪೆಟ್ಟು, ದಾಖಲೆ ಲಸಿಕೆಯ ತಿರುಗೇಟು - 2021ರ ನೆನಪಿನ ಬುತ್ತಿ

2021 ರಲ್ಲಿ ನಡೆದ ಘಟನಾವಳಿಗಳ ಮೆಲುಕು.. ಕೊರೊನಾ ಹಿಮ್ಮೆಟ್ಟಿಸಲು 100 ಕೋಟಿ ಕೋವಿಡ್​ ವ್ಯಾಕ್ಸಿನೇಷನ್​ ಸಾಧನೆ ಒಂದೆಡೆಯಾದರೆ, ಭಾರತದ ಮೂರು ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ(ಸಿಡಿಎಸ್​) ಬಿಪಿನ್ ರಾವತ್, ಸೇರಿದಂತೆ ಸೇನಾಧಿಕಾರಿಗಳ ದುರಂತ ಅಂತ್ಯ ಕಹಿ ಘಟನೆಯಾಗಿಯೇ ಉಳಿಯಲಿದೆ.

year ender
ದಾಖಲೆ ಲಸಿಕೆಯ ತಿರುಗೇಟು
author img

By

Published : Dec 27, 2021, 9:24 PM IST

ಕೆಲವೇ ದಿನಗಳಲ್ಲಿ 2022ನೇ ವರ್ಷ ಪ್ರಾರಂಭವಾಗಲಿದೆ. 2021 ರಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರೆ, ಕೋವಿಡ್​ ನಿಯಂತ್ರಿಸಿದ್ದು, ನೂರು ಕೋಟಿ ಕೊರೊನಾ ಲಸಿಕಾಕರಣ ಮಾಡಿದ್ದು ದೇಶದ ಸಾಧನೆ ಆಯಿತು. ಭಾರತದ ಮೂರು ಪಡೆಗಳ ಮುಖ್ಯಸ್ಥರಾಗಿದ್ದ(ಸಿಡಿಎಸ್​) ಬಿಪಿನ್ ರಾವತ್ ಸೇರಿದಂತೆ ಸೇನಾಧಿಕಾರಿಗಳ ದುರಂತ ಅಂತ್ಯ ಕಹಿ ಘಟನೆಯಾಗಿಯೇ ಉಳಿದಿದೆ.

ದೇಶದಲ್ಲಿ ಕೊರೊನಾ ಲಸಿಕಾಕರಣ ಪ್ರಾರಂಭ..

ದೇಶವನ್ನೇ ತಲ್ಲಣಗೊಳಿಸಿದ್ದ ಕೊರೊನಾ ವೈರಸ್​ಗೆ ದೇಶೀಯವಾಗಿ ತಯಾರಿಸಿದ ಕೊವ್ಯಾಕ್ಸಿನ್​ ಮತ್ತು ಕೋವಿಶೀಲ್ಡ್​ ಅನ್ನು ಜನವರಿ 16 ರಿಂದ ದೇಶದ ನಾಗರಿಕರಿಗೆ ನೀಡುವ ಬೃಹತ್ ಲಸಿಕಾ ಅಭಿಯಾನವನ್ನು ಆರಂಭಿಸಲಾಯಿತು. ಇದು ವಿಶ್ವದಲ್ಲಿಯೇ ಅತಿದೊಡ್ಡ ಲಸಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದರಲ್ಲಿ 141 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಒದಗಿಸಲಾಗಿದೆ.

ದೇಶದ ಅತಿದೊಡ್ಡ ಕ್ರಿಕೆಟ್​ ಮೈದಾನ ಉದ್ಘಾಟನೆ..

ಗುಜರಾತ್​ನ ಅಹಮದಾಬಾದ್​ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆ ಮಾಡಲಾಯಿತು. ಈ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡಲಾಗಿದೆ. ಇದನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿದರು. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ 1.3 ಲಕ್ಷ ಜನರು ಕುಳಿತುಕೊಳ್ಳಬಹುದಾಗಿದೆ.

ಕೊರೊನಾ 2 ನೇ ಅಲೆ ಅಟ್ಟಹಾಸ..

ಕೊರೊನಾದ ಎರಡನೇ ಮತ್ತು ಮೂರನೇ ಅಲೆ ಪ್ರಪಂಚದಾದ್ಯಂತ ಕಾಣಿಸಿಕೊಂಡಿತು. ಈ ವೇಳೆ ಮಾರ್ಚ್ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೊನಾದ ಎರಡನೇ ಅಲೆ ಕಂಡುಬಂತು. ಕೊರೊನಾ ಅಟ್ಟಹಾಸಕ್ಕೆ ಅಪಾರ ಪ್ರಮಾಣದ ಜನರು ಪ್ರಾಣ ಕಳೆದುಕೊಂಡರು. ಇದು ದೇಶದ ಇತಿಹಾಸದಲ್ಲಿಯೇ ಕರಾಳ ಅಧ್ಯಾಯವಾಗಿದೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ದಾಖಲೆ..

ಜಪಾನ್​ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದರು. ಇದು ಭಾರತಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು. ಇದು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಏಕೈಕ ಚಿನ್ನದ ಪದಕವಾಗಿತ್ತು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಭಾರತದ ಎರಡನೇ ಆಟಗಾರ ನೀರಜ್​ ಛೋಪ್ರಾ ಆಗಿದ್ದಾರೆ.

ಟಾಟಾ ಸನ್ಸ್​ಗೆ ಏರ್​ ಇಂಡಿಯಾ ಸ್ವಾಮ್ಯ..

ಭಾರತದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಬಹಳ ದಿನಗಳಿಂದ ನಷ್ಟದಲ್ಲಿ ಸಾಗಿತ್ತು. ಈ ವೇಳೆ ಸರ್ಕಾರ ಅದನ್ನು ಹರಾಜು ಮಾಡಲು ನಿರ್ಧರಿಸಿತು. ಟಾಟಾ ಸನ್ಸ್ ಕಂಪನಿ ಏರ್ ಇಂಡಿಯಾವನ್ನು 18 ಸಾವಿರ ಕೋಟಿ ರೂಪಾಯಿ ಬಿಡ್​ ಹೂಡಿ ಖರೀದಿಸಿತು. ರತನ್ ಟಾಟಾ ಅವರು ಏರ್ ಇಂಡಿಯಾವನ್ನು ಮರಳಿ ತಮ್ಮ ಸಂಸ್ಥೆಗೆ ಸೇರಿಸಿಕೊಂಡರು.

ದಾಖಲೆಯ 100 ಕೋಟಿ ಲಸಿಕೆ ಡೋಸ್..​

ಭಾರತದಲ್ಲಿ ಲಸಿಕಾಕರಣ ಆರಂಭವಾದ ಬಳಿಕ ಅಕ್ಟೋಬರ್​ನಲ್ಲಿ ದೊಡ್ಡ ದಾಖಲೆಯನ್ನೇ ನಿರ್ಮಿಸಲಾಯಿತು. ಅಕ್ಟೋಬರ್ 21 ರಂದು ಭಾರತವು ವ್ಯಾಕ್ಸಿನೇಷನ್‌ನಲ್ಲಿ 100 ಕೋಟಿ ಲಸಿಕೆ ಡೋಸ್ ಅನ್ನು ಜನರಿಗೆ ನೀಡಲಾಗಿತ್ತು. ಇದು ವಿಶ್ವದಲ್ಲಿಯೇ 2 ನೇ ಅತ್ಯಧಿಕ ಸಾಧನೆಯಾಗಿದೆ.

ಕೃಷಿ ಕಾನೂನುಗಳ ಹಿಂಪಡೆದ ಪ್ರಧಾನಿ ಮೋದಿ..

ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯಬೇಕು ಎಂದು 1 ವರ್ಷದಿಂದ ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ನಲ್ಲಿ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು ದೇಶದ ಅನ್ನದಾತರಿಗೆ ಸಿಕ್ಕ ಬಹುದೊಡ್ಡ ಜಯ ಎಂದೇ ಹೇಳಲಾಗುತ್ತಿದೆ.

ಕರ್ನಾಟಕದ ಮೂಲಕ ಭಾರತಕ್ಕೆ ಒಮಿಕ್ರಾನ್..​

ದಕ್ಷಿಣ ಆಫ್ರಿಕಾದ ದೇಶದಲ್ಲಿ ಅತಿ ವೇಗವಾಗಿ ಹಬ್ಬುವ ಕೊರೊನಾ ರೂಪಾಂತರಿ ಒಮಿಕ್ರಾನ್​ ಅನ್ನು ಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು. ಇದು ಡಿಸೆಂಬರ್​ 2 ರಂದು ಕರ್ನಾಟಕದಲ್ಲಿ ಪತ್ತೆಯಾಗುವ ಮೂಲಕ ಭಾರತಕ್ಕೆ ಕಾಲಿಟ್ಟಿತು.

ರೈತರ ಸುದೀರ್ಘ ಪ್ರತಿಭಟನೆ ವಾಪಸ್​

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ನಂತರ ಡಿಸೆಂಬರ್ 11 ರಂದು ರೈತರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ದೇಶದ ಇತಿಹಾಸದಲ್ಲಿಯೇ ನಡೆದ ಸುದೀರ್ಘ ಪ್ರತಿಭಟನೆ ಕೊನೆಗೂ ಅಂತ್ಯ ಕಂಡಿತು. ಬಳಿಕ ರೈತರು ತಮ್ಮ ಮನೆಗಳಿಗೆ ತೆರಳಲಾರಂಭಿಸಿದರು.

ಇದನ್ನೂ ಓದಿ: ₹257 ಕೋಟಿ, 23 ಕೆಜಿ ಚಿನ್ನದ ಒಡೆಯ.. ಹಳೇ ಸ್ಕೂಟರ್​​, ರಬ್ಬರ್​ ಚಪ್ಪಲಿ ಧರಿಸುತ್ತಿದ್ದ ಪಿಯೂಷ್​​ ಜೈನ್​!

ಇದನ್ನೂ ಓದಿ: 100 ಕೋಟಿ ಭ್ರಷ್ಟಾಚಾರ ಆರೋಪ: ಅನಿಲ್ ದೇಶಮುಖ್​ ನ್ಯಾಯಾಂಗ ಬಂಧನ ಮತ್ತೆ 14 ದಿನಕ್ಕೆ ವಿಸ್ತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.