ನವದೆಹಲಿ: ಜಮ್ಮು ಮತ್ತು ಕಾಶ್ಮೀರವನ್ನು 'ಪ್ರತ್ಯೇಕ' ವಾಗಿಸಬೇಕೆಂದು ಹೋರಾಡುತ್ತಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್, ಈಗ ತನ್ನ ಉಳಿದ ಜೀವನವನ್ನು ಏಕಾಂಗಿಯಾಗಿ ಕಳೆಯಬೇಕಾಗಿದೆ. ಎಲ್ಲ ಸಂಪರ್ಕಗಳನ್ನು ಕಳೆದುಕೊಂಡು, ಎಲ್ಲರಿಂದ 'ಬೇರ್ಪಟ್ಟು' ತಿಹಾರ್ ಜೈಲಿನ 7 ಕೊಠಡಿಯಲ್ಲಿ ಕಾಲ ಕಳೆಯಬೇಕಾಗಿದೆ. 56 ವರ್ಷದ ಮಲಿಕ್‌ಗೆ ದೆಹಲಿಯ ವಿಶೇಷ ಎನ್‌ಐಎ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಹಿಂದೆ ವಿಚಾರಣೆ ನಡೆಸುವಾಗ ಮಲಿಕ್ ತನ್ನ ವಿರುದ್ಧದ ಆರೋಪಗಳನ್ನು ಅಲ್ಲಗೆಳೆಯುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ. ಆತ ಸ್ವತಃ ತಪ್ಪೊಪ್ಪಿಕೊಂಡಿದ್ದ. ಹಾಗಾಗಿ ನ್ಯಾಯಾಲಯ ಮಲಿಕ್ನನ್ನು ತಪ್ಪಿತಸ್ಥ ಎಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೀಗಾಗಿ ಮಲಿಕ್ ತನ್ನ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯಬೇಕಾಗಿದೆ. ಈ ವೇಳೆ ಮಲಿಕ್ ಕೇವಲ ಹೊರಗಿನ ಪ್ರಪಂಚದಿಂದ ಬೇರ್ಪಡುವುದಲ್ಲದೇ, ಸುಮಾರು 13,000 ಕೈದಿಗಳಿಂದ ದೂರವಿರುವ ಜೈಲಿನೊಳಗೆ ಏಕಾಂಗಿಯಾಗಿ ಇರಲಿದ್ದಾನೆ. ಅವನು ಸೆಲ್‌ನಲ್ಲಿ ಒಬ್ಬಂಟಿಯಾಗಿದ್ದಾನೆ ಎಂದು ಮಹಾನಿರ್ದೇಶಕ ಸಂದೀಪ್ ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆಗೆ ನೆರವು: ಯಾಸಿನ್ ಮಲಿಕ್ 'ದೋಷಿ' ಎಂದು ದೆಹಲಿ ವಿಶೇಷ ಕೋರ್ಟ್ ತೀರ್ಪು
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಮಾಜಿ ಕೇಂದ್ರ ಸಚಿವ ಎ. ರಾಜಾ, ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್, ಕ್ರಿಶ್ಚಿಯನ್ ಮೈಕೆಲ್ ಸೇರಿದಂತೆ ಹಲವಾರು ಉನ್ನತ ಕೈದಿಗಳನ್ನು ಜೈಲಿನ ಇದೇ ಕೊಠಡಿಯಲ್ಲಿ ಇರಿಸಿದ್ದರಿಂದ ಇದು ತುಂಬಾ ಹೆಸರುವಾಸಿಯಾಗಿದೆ. ಬುಧವಾರದ ಶಿಕ್ಷೆಯಲ್ಲಿ ನ್ಯಾಯಾಲಯವು ಅಪರಾಧಿಗೆ 10 ಲಕ್ಷ ರೂ. ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತ್ತು.
ನ್ಯಾಯಾಲಯದ ಆದೇಶದ ಹೊರತಾಗಿಯೂ, ಮಲಿಕ್‌ಗೆ ಜೈಲಿನೊಳಗೆ ಯಾವುದೇ ಕೆಲಸ ನೀಡಲಾಗುವುದಿಲ್ಲ. ಭದ್ರತಾ ಕಾರಣಗಳಿಂದ ಅವರಿಗೆ ಕೆಲಸವನ್ನು ನಿಯೋಜಿಸಲಾಗುವುದಿಲ್ಲ. ಭದ್ರತೆ ಇರುವ ಕೆಲಸಕ್ಕೆ ಆತನನ್ನು ನಿಯೋಜಿಸಲಾಗಿದೆ ಮತ್ತು ಜೈಲು ನಿಯಮಗಳ ಪ್ರಕಾರ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜೈಲಿನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.