ETV Bharat / bharat

ದಾಖಲೆಯ ಏರಿಕೆ ಕಂಡ ಯಮುನಾ ನದಿ ನೀರಿನ ಮಟ್ಟ; ದೆಹಲಿಯ ಹಲವು ಪ್ರದೇಶಗಳು ಮುಳುಗಡೆ- ವಿಡಿಯೋ - ಕೇಂದ್ರ ಜಲ ಆಯೋಗ

ದೆಹಲಿಯ ಯಮುನಾ ನದಿ ಮೈದುಂಬಿ ಹರಿಯುತ್ತಿದೆ. ನದಿಪಾತ್ರದಲ್ಲಿರುವ ಜನರು ಶೀಘ್ರದಲ್ಲೇ ಸ್ಥಳಾಂತರಗೊಳ್ಳುವಂತೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸೂಚನೆ ನೀಡಿದ್ದಾರೆ.

evacuate-immediately-kejriwal-urges-people-in-low-lying-areas-as-yamuna-swells-to-record-level
ಯಮುನಾ ನದಿಯಲ್ಲಿ ದಾಖಲೆಯ ನೀರಿನ ಮಟ್ಟ..ನದಿಪಾತ್ರದ ಜನರಿಗೆ ಶೀಘ್ರದಲ್ಲೇ ಸ್ಥಳಾಂತರಗೊಳ್ಳುವಂತೆ ಕೇಜ್ರಿವಾಲ್​ ಮನವಿ
author img

By

Published : Jul 13, 2023, 11:47 AM IST

Updated : Jul 13, 2023, 12:48 PM IST

ನವದೆಹಲಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೆಹಲಿಯ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ತಗ್ಗು ಪ್ರದೇಶಗಳಲ್ಲಿರುವ ಜನರು ಶೀಘ್ರವಾಗಿ ಸ್ಥಳಾಂತರಗೊಳ್ಳುವಂತೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮನವಿ ಮಾಡಿದ್ದಾರೆ. ಯಮುನಾ ನದಿ ತುಂಬಿ ಹರಿಯುತ್ತಿದ್ದು, ನೀರು ದಾಖಲೆಯ 208.48 ಮೀಟರ್ ಮಟ್ಟ ತಲುಪಿದೆ. ಈ ಮೂಲಕ 45 ವರ್ಷಗಳ 207.49 ಮೀ ನೀರಿನ ಮಟ್ಟದ ದಾಖಲೆಯನ್ನು ಮುರಿದಿದೆ. ಇದರಿಂದಾಗಿ ನದಿ ಪಾತ್ರದ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

  • #WATCH | Severe flooding in Chandgi Ram Akhada Chowk area of Delhi. Several areas of the city are reeling under flood or flood-like situations due to rise in the water level of River Yamuna. pic.twitter.com/sMgoOqXyKW

    — ANI (@ANI) July 13, 2023 " class="align-text-top noRightClick twitterSection" data=" ">

ದೆಹಲಿ ಶಾಲಾ, ಕಾಲೇಜುಗಳಿಗೆ ರಜೆ : ಯಮುನಾ ನದಿಯಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ನಗರದ ಹಲವೆಡೆ ನೀರು ನುಗ್ಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್, ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಪ್ರವಾಹದಿಂದಾಗಿ ಜಲಾವೃತಗೊಂಡಿರುವ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.​

ನಿಷೇಧಾಜ್ಞೆ ಜಾರಿ: ಯಮುನಾ ನದಿಯಲ್ಲಿ ನಿರಂತರವಾಗಿ ನೀರು ಏರಿಕೆಯಾಗುತ್ತಿದ್ದು ಲೆಫ್ಟಿನೆಂಟ್​ ಗವರ್ನರ್​​ ವಿ.ಕೆ.ಸಕ್ಸೇನಾ ಅವರು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ನದಿ ಪಾತ್ರದಲ್ಲಿರುವ ಮನೆಗಳಿಗೆ ಮತ್ತು ಮಾರುಕಟ್ಟೆಗಳಿಗೆ ನೀರು ನುಗ್ಗಿದ್ದರಿಂದ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ನಗರದ ರಿಂಗ್​ ರೋಡ್​, ವಾಜಿರಾಬಾದ್​ನ ಮಜ್ನುನಾ ಕಾ ತಿಲಾ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳು ಜಲಾವೃತಗೊಂಡಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಸಂಬಂಧ ಮುಂಜಾಗೃತಾ ಕ್ರಮವಾಗಿ ಪೊಲೀಸರು ನೆರೆ ಪ್ರದೇಶಗಳಲ್ಲಿ ಸಿಆರ್​ಪಿಸಿ ಸೆಕ್ಷನ್​ 144 ವಿಧಿಸಿದ್ದಾರೆ. ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚು ಜನರು ಸಂಚರಿಸುವುದು, ಗುಂಪು ಸೇರುವುದು ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ.

  • #WATCH | Delhi | Massive traffic snarl seen in Sarai Kale Khan area today, due to traffic diversion following waterlogging in different parts of the city. pic.twitter.com/VQdNw4noDQ

ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಪ್ರವಾಹ ವೀಕ್ಷಣೆ ಪೋರ್ಟಲ್​ ಮಾಹಿತಿ ಪ್ರಕಾರ, ಹಳೆ ರೈಲ್ವೆ ಸೇತುವೆಯಲ್ಲಿ ಬುಧವಾರ ಬೆಳಿಗ್ಗೆ 4 ಗಂಟೆಗೆ ನೀರಿನ ಮಟ್ಟ 207 ಮೀ ಏರಿಕೆ ಆಗಿದೆ. 2013ರ ನಂತರ ಇದೇ ಮೊದಲ ಬಾರಿಗೆ ಇಷ್ಟು ಗರಿಷ್ಟ ಮಟ್ಟ ತಲುಪಿತ್ತು. ರಾತ್ರಿ 10 ಗಂಟೆಯ ವೇಳೆಗೆ ನೀರಿನ ಮಟ್ಟ 208.05 ಮೀ ಏರಿಕೆ ಕಂಡಿತ್ತು. ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ 208.30 ಮೀ ಹೆಚ್ಚಳ ಉಂಟಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ 208.48 ಮೀ​​ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಉತ್ತರಾಖಂಡ್​ನಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಗ್ಗು ಪ್ರದೇಶಗಳಿಂದ ಸ್ಥಳಾಂತರಗೊಳ್ಳುವಂತೆ ಸಿಎಂ ಮನವಿ : ಯಮುನಾ ನದಿಪಾತ್ರದಲ್ಲಿರುವ ಜನರು ತಗ್ಗು ಪ್ರದೇಶಗಳಿಂದ ಸ್ಥಳಾಂತರಗೊಳ್ಳುವಂತೆ ಸಿಎಂ ಅರವಿಂದ್​ ಕೇಜ್ರಿವಾಲ್​ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರವು ತುರ್ತು ಕ್ರಮ ಕೈಗೊಳ್ಳುವಂತೆ ಕೇಜ್ರಿವಾಲ್​ ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್​, ಸಾಧ್ಯವಾದರೆ ಹರ್ಯಾಣದ ಹತ್ನಿಕುಂಡ್​ ಬ್ಯಾರೇಜ್​ನಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡಿ. ದೆಹಲಿಯಲ್ಲಿ ಕೆಲವೇ ವಾರಗಳಲ್ಲಿ ಜಿ 20 ಶೃಂಗಸಭೆಯ ಸಭೆ ನಡೆಯಲಿದೆ. ದೇಶದ ರಾಜಧಾನಿಯಲ್ಲಿ ಪ್ರವಾಹದ ಪರಿಸ್ಥಿತಿ ಜಗತ್ತಿಗೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ನಾವೆಲ್ಲ ಒಟ್ಟಾಗಿ ದೆಹಲಿಯ ಜನರನ್ನು ಈ ಪರಿಸ್ಥಿತಿಯಿಂದ ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಜೇಂದ್ರ ಶೇಖಾವತ್, ಯಮುನಾ ನದಿಯಲ್ಲಿ ನೀರು ಏರಿಕೆ ಉಂಟಾಗುತ್ತಿರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ದೇಶಾದ್ಯಂತ ಮುಂದುವರೆದ ಮಳೆಯ ಆರ್ಭಟ: ರಣಭೀಕರ ಮಳೆಗೆ ಉತ್ತರ ತತ್ತರ

Last Updated : Jul 13, 2023, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.