ETV Bharat / bharat

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ಗೆ 22-24 ಸದಸ್ಯರ ತಂಡ ಪ್ರಕಟಿಸಲು ಚಿಂತನೆ - 22 ಸದಸ್ಯರ ಭಾರತ ತಂಡ

ಚೊಚ್ಚಲ ಚಾಂಪಿಯನ್​ಶಿಪ್​ಗಾಗಿ ಟೀಮ್ ಇಂಡಿಯಾ ಸೆಲೆಕ್ಟರ್‌ಗಳು ಜಂಬೋ ತಂಡವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು 22-24 ಆಟಗಾರರನ್ನು ಆಯ್ಕೆ ಮಾಡಲು ಆಲೋಚಿಸುತ್ತಿದ್ದು, ಅದಕ್ಕಾಗಿ ಈಗಾಗಲೇ 35 ಸಂಭವನೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ಮುಂದಿಟ್ಟಿದೆ ಎಂದು ತಿಳಿದುಬಂದಿದೆ.

ವಿಶ್ವಟೆಸ್ಟ್ ಚಾಂಪಿಯನ್​ಶಿಪ್​
ವಿಶ್ವಟೆಸ್ಟ್ ಚಾಂಪಿಯನ್​ಶಿಪ್​
author img

By

Published : May 6, 2021, 8:54 PM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ ಅನಿರ್ದಿಷ್ಟವಾಗಿ ಮುಂದೂಡುವುದರೊಂದಿಗೆ, ಎಲ್ಲಾ ಕಣ್ಣುಗಳು ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನತ್ತ ಮುಖ ಮಾಡಿವೆ.

ಚೊಚ್ಚಲ ಚಾಂಪಿಯನ್​ಶಿಪ್​ಗಾಗಿ ಟೀಮ್ ಇಂಡಿಯಾ ಸೆಲೆಕ್ಟರ್‌ಗಳು ಜಂಬೋ ತಂಡವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು 22-24 ಆಟಗಾರರನ್ನು ಆಯ್ಕೆ ಮಾಡಲು ಆಲೋಚಿಸುತ್ತಿದ್ದು, ಅದಕ್ಕಾಗಿ ಈಗಾಗಲೇ 35 ಸಂಭವನೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ಮುಂದಿಟ್ಟಿದೆ ಎಂದು ತಿಳಿದುಬಂದಿದೆ.

ಮುಂದಿನ ವಾರದ ಅಂತ್ಯದ ವೇಳೆಗೆ ಅಂತಿಮ ತಂಡವನ್ನು ನಿರ್ಧರಿಸುವ ಸಾಧ್ಯತೆ ಇದೆ. ಪ್ರಸ್ತುತ, ಭಾರತದಿಂದ ವಿಮಾನ ಪ್ರಯಾಣದ ಮೇಲೆಯೇ ನಿರ್ಬಂಧ ಹೇರಿರುವುದರಿಂದ ಬಿಸಿಸಿಐ ಭಾರತ ತಂಡವನ್ನು ವಿಶೇಷ ವಿಮಾನದಲ್ಲಿ ಇಂಗ್ಲೆಂಡ್‌ಗೆ ಕಳುಹಿಸಲಿದೆ. ಅಲ್ಲಿಗೆ ತೆರಳಿದ ನಂತರ ಆಟಗಾರರು ಬ್ರಿಟನ್‌ನಲ್ಲಿ ಹತ್ತು ದಿನಗಳ ಕಾಲ ಕ್ವಾರಂಟೈನ್​ ಮಾಡಲಿದ್ದಾರೆ.

ಜೂನ್ 18 ರಿಂದ 22 ರವರೆಗೆ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೌತಾಂಪ್ಟನ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಇದರ ನಂತರ ಆಗಸ್ಟ್ 4 ರಿಂದ ಸೆಪ್ಟೆಂಬರ್ 14 ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ.

ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಸುಮಾರು ಒಂದು ತಿಂಗಳು ದೂರದಲ್ಲಿದೆ. ಆದರೆ ನ್ಯೂಜಿಲೆಂಡ್ ಈಗಾಗಲೇ ಜೂನ್ 2 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ 20 ಮಂದಿಯ ತಂಡವನ್ನು ಪ್ರಕಟಿಸಿದೆ.

ಇದನ್ನು ಓದಿ:ಅರ್ಧಕ್ಕೆ ನಿಂತ ಐಪಿಎಲ್ ನಡೆಸಿಕೊಡಲು ಆಫರ್ ನೀಡಿದ ಇಂಗ್ಲೆಂಡ್ ಕೌಂಟಿ ಕ್ಲಬ್ಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.