ETV Bharat / bharat

ಅಮೆರಿಕದಲ್ಲಿ 20 ಮಿಲಿಯನ್​ ಗಡಿ ದಾಟಿದ ಕೊರೊನಾ ಕೇಸ್: ಮೂರೂವರೆ ಲಕ್ಷ ಮಂದಿ ಬಲಿ

ಪ್ರಪಂಚದ ಕೊರೊನಾ ಸಾವು-ನೋವಿನ ಶೇ.23 ರಷ್ಟು ಪಾಲು ಅಮೆರಿಕದ್ದಾಗಿದ್ದು, ದೇಶದಲ್ಲಿ ಈವರೆಗೆ 20 ಮಿಲಿಯನ್ ಕೇಸ್​ಗಳು ಹಾಗೂ 3.5 ಲಕ್ಷ ಸಾವು ವರದಿಯಾಗಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​
author img

By

Published : Jan 2, 2021, 4:52 PM IST

ಹೈದರಾಬಾದ್​: ಜಗತ್ತಿನ ಕೋವಿಡ್‌ಪೀಡಿತ 218 ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 20 ಮಿಲಿಯನ್​ (2,06,17,346) ಗಡಿ ದಾಟಿದೆ ಎಂದು ಜಾನ್​ ಹಾಪ್ಕಿನ್ಸ್​ ವಿಶ್ವವಿದ್ಯಾಲಯ ವರದಿ ಮಾಡಿದೆ. 3,56,445 ಜನರು ಸೋಂಕು ತಗುಲಿ ಪ್ರಾಣ ತೆತ್ತಿದ್ದಾರೆ.

ಪ್ರಪಂಚದಾದ್ಯಂತ ಈವರೆಗೆ ಬರೋಬ್ಬರಿ 8,43,82,650 ಜನರಿಗೆ ವೈರಸ್​ ಅಂಟಿದೆ. 18,35,39 ಸೋಂಕಿತರು ಮೃತಪಟ್ಟಿದ್ದರೆ, 2,76,73,862 ಮಂದಿ ಗುಣಮುಖರಾಗಿದ್ದಾರೆ. ಈ ಅಂಕಿಅಂಶಗಳ ಶೇ.23 ರಷ್ಟು ಪಾಲು ಅಮೆರಿಕದ್ದಾಗಿದೆ.

ಇನ್ನು ಕೇಸ್​ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 1,03,05,788 ಕೇಸ್​ಗಳು ಪತ್ತೆಯಾಗಿದ್ದು, 1,49,212 ಜನರು ವೈರಸ್​ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 77,00,578 ಪ್ರಕರಣಗಳು ಹಾಗೂ 1,95,441 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 31,86,336 ಕೇಸ್​​ಗಳಿದ್ದು, 57,555 ಜನರು ಸಾವನ್ನಪ್ಪಿದ್ದಾರೆ.

ಓದಿ: ಮಲೇರಿಯಾದಲ್ಲೂ ರೂಪಾಂತರಿ.. ಹಳೆ ಔಷಧ ವಿಧಾನವೇ ಅನುಸರಣೆ

ಅಮೆರಿಕ, ಬ್ರೆಜಿಲ್​​, ಭಾರತದ ಬಳಿಕ ಸಾವಿನ ಸಂಖ್ಯೆಯಲ್ಲಿ ಮೆಕ್ಸಿಕೋ, ಇಂಗ್ಲೆಂಡ್​ ಹಾಗೂ ಇಟಲಿ ಕ್ರಮವಾಗಿ 4,5 ಹಾಗೂ 6ನೇ ಸ್ಥಾನದಲ್ಲಿವೆ. ಕೊರೊನಾ​ ಪೀಡಿತ ವಿಶ್ವದ ಟಾಪ್​ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್​ಗಳು​ ಪತ್ತೆಯಾಗುತ್ತಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 87,093 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ. ಬ್ರಿಟನ್​ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್​ ಚೀನಾದ ವಿದ್ಯಾರ್ಥಿನಿಯೊಬ್ಬಳಿಗೆ ಅಂಟಿರುವುದು ದೃಢವಾಗಿದೆ. ಭಾರತದಲ್ಲಿ ನಿನ್ನೆಯವರೆಗೆ 29 ರೂಪಾಂತರಿ ಕೊರೊನಾ ವೈರಸ್​ ಕೇಸ್​ಗಳು ಪತ್ತೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.