ಹೈದರಾಬಾದ್: ಇಂದು(ಜುಲೈ 11) ವಿಶ್ವ ಜನಸಂಖ್ಯಾ ದಿನ. ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.
ಜನಸಂಖ್ಯಾ ದಿನದ ಉದ್ದೇಶ..
ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಕಡೆಗೆ ಗಮನ ಸೆಳೆಯುವುದು ಈ ದಿನದ ಆಚರಣೆಯ ಉದ್ದೇಶ. ಜನಸಂಖ್ಯಾ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಲು ಮತ್ತು ಇತರೆ ಏಜೆನ್ಸಿಗಳೊಂದಿಗೆ ಕೆಲಸ ಮಾಡಲು ವಿಶ್ವಸಂಸ್ಥೆ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ) ಸ್ಥಾಪಿಸಿದೆ.
ಈ ದಿನದ ಇತಿಹಾಸ..
ವಿಶ್ವ ಜನಸಂಖ್ಯಾ ದಿನವನ್ನು ವಿಶ್ವಸಂಸ್ಥೆಯು 1989 ರಲ್ಲಿ ಪ್ರಾರಂಭಿಸಿತು. ಆದರೆ, ಅಧಿಕೃತವಾಗಿ 1990 ಜುಲೈ 11 ರಂದು ಈ ನೀತಿಯನ್ನು ಜಾರಿಗೆ ತರಲಾಯಿತು. 1990 ರ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನ ಆಚರಿಸುವುದನ್ನು ನಿರ್ಧರಿಸಲಾಯಿತು.
ವಿಶ್ವ ಜನಸಂಖ್ಯಾ ದಿನದ ಮಹತ್ವ..
ಅಧಿಕ ಜನಸಂಖ್ಯೆಯಿಂದ ಉಂಟಾಗುವ ತೊಂದರೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮತ್ತು ಅಧಿಕ ಜನಸಂಖ್ಯೆಯು ಪರಿಸರ ವ್ಯವಸ್ಥೆಗೆ ಹೇಗೆ ಹಾನಿಯಾಗಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸುವ ಗುರಿಯೊಂದಿಗೆ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ.
2019 ರ ವಿಶ್ವಸಂಸ್ಥೆಯ ವರದಿ ಪ್ರಕಾರ ಮುಂದಿನ 30 ವರ್ಷಗಳಲ್ಲಿ ಜನಸಂಖ್ಯೆಯು 2 ಬಿಲಿಯನ್ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ 7.7 ಬಿಲಿಯನ್ಯಿದೆ.
ಜನಸಂಖ್ಯೆ ಏರಿಕೆಗೆ ಕಾರಣ
ಕುಟುಂಬ ಯೋಜನೆ ಇಲ್ಲದೆ ಇರೋದು
ಲಿಂಗ ಅಸಮಾನತೆ
ಬಾಲ್ಯವಿವಾಹ
ಮಾನವ ಹಕ್ಕುಗಳು
ಆರೋಗ್ಯದ ಹಕ್ಕು
ಮಗುವಿನ ಆರೋಗ್ಯ ಇತ್ಯಾದಿ.
ಜನರಲ್ಲಿ ಲೈಂಗಿಕತೆ, ಸಂತಾನೋತ್ಪತ್ತಿ ಹಾಗೂ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದುದು ಇಂದಿನ ಅನಿವಾರ್ಯವಾಗಿದೆ.
ಇದನ್ನೂ ಓದಿ:ಯೋಗಿ ಸರ್ಕಾರದಿಂದ ಇಂದು ಜನಸಂಖ್ಯಾ ನೀತಿ 2021-2030 ಬಿಡುಗಡೆ
ಲಾಕ್ಡೌನ್ ಎಫೆಕ್ಟ್
ಲಾಕ್ಡೌನ್ ಹಿನ್ನೆಲೆ ಗರ್ಭನಿರೋಧಗಳ ಅಲಭ್ಯತೆ ಹಿನ್ನೆಲೆ, ಗರ್ಭಧಾರಣೆ ಹೆಚ್ಚಾಗಿದ್ದು, ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಯುಎನ್‌ಎಫ್‌ಪಿಎಯ ಇತ್ತೀಚಿನ ಸಂಶೋಧನೆಯ ಪ್ರಕಾರ ಲಾಕ್ಡೌನ್ ಸಮಯದಲ್ಲಿ ಕೌಟುಂಬಿಕ ಹಿಂಸೆಗಳು ಹೆಚ್ಚಾಗಿವೆ. ಅಲ್ಲದೆ, ಲಿಂಗ ಆಧಾರಿತ (ಗಂಡು ಅಥವಾ ಹೆಣ್ಣು ಮಕ್ಕಳು ಬೇಕೆಂದು) 31 ಮಿಲಿಯನ್ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಲಾಕ್ಡೌನ್ ಅವಧಿಯಲ್ಲಿ ಅಂದಾಜು 2 ಲಕ್ಷ ಬಾಲ್ಯವಿವಾಹಗಳು ನಡೆದಿವೆ.
ಹೀಗೆಯೇ ಮುಂದುವರಿದರೆ, ಜನಸಂಖ್ಯಾ ಸ್ಫೋಟವಾಗಿ ಜಗತ್ತು ಹಿಂದೆಂದೂ ಕಾಣದ ಬಿಕ್ಕಟ್ಟು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.