ETV Bharat / bharat

ತಲೆಗೆ ಗಾಯವಾದರೆ ಲಘುವಾಗಿ ಪರಿಗಣಿಸದಿರಿ!

ದೊಡ್ಡ ಅಪಘಾತಗಳಲ್ಲಷ್ಟೇ ಅಲ್ಲ. ಆಟವಾಡುವಾಗ ಅಥವಾ ಜಿಗಿಯುವಾಗ ತಲೆಗೆ ಸಣ್ಣಪುಟ್ಟ ಗಾಯವಾದರೂ ಗಂಭೀರ ಸಮಸ್ಯೆಗಳು ಎದುರಾಗುತ್ತವೆ.

World Head Injury Awareness Day
ವಿಶ್ವ ತಲೆ ಗಾಯದ ಜಾಗೃತಿ ದಿನ
author img

By

Published : Mar 20, 2023, 2:19 PM IST

ಅಪಘಾತ ಅಥವಾ ಇತರೆ ಯಾವುದೇ ಕಾರಣದಿಂದ ತಲೆ ಅಥವಾ ಮೆದುಳಿಗೆ ಆಗುವ ಗಾಯ ಕೆಲವೊಮ್ಮೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಹೌದು, ಈ ಗಾಯ ಗಂಭೀರವಾಗಿದೆ ಅಥವಾ ಸಾಮಾನ್ಯವಾಗಿದೆ ಅಂತ ಎಂದಿಗೂ ನಿರ್ಲಕ್ಷ್ಯ ಮಾಡಬಾರದು.

ತಲೆ ಅಥವಾ ಮಿದುಳಿನ ಗಾಯದಿಂದ ಉಂಟಾಗುವ ಗಂಭೀರ ಅಪಾಯಗಳು, ವ್ಯಕ್ತಿಯ ಜೀವದ ಮೇಲೂ ಬೀರಬಹುದಾದ ಪರಿಣಾಮ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್ 20ರಂದು "ವಿಶ್ವ ತಲೆ ಗಾಯದ ದಿನ"ವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ರೀತಿಯ ಕ್ರಮಗಳಿಂದ ತಲೆ ಅಥವಾ ಮಿದುಳಿನ ಗಾಯಗಳಿಂದ ಆಗಬಹುದಾದ ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ವೈದ್ಯರು ಏನು ಹೇಳ್ತಾರೆ?: ಕ್ರೀಡೆ ಅಥವಾ ಇತರ ದೈಹಿಕ ಚಟುವಟಿಕೆಗಳಿಂದ, ರಸ್ತೆ ಅಪಘಾತಗಳಿಂದ ತಲೆಗೆ ಆಗುವ ಗಾಯಗಳಿಂದ ಜೀವಕ್ಕೆ ಮಾರಕವಾಗಬಹುದು. ತಲೆಗೆ ಗಾಯಗಳಿಂದ ಆ ವ್ಯಕ್ತಿಗಳು ಅಂಗವೈಕಲ್ಯ ಹಾಗೂ ಸಾವು ಕೂಡ ಸಂಭವಿಸಬಹುದು. ಸಾಮಾನ್ಯವಾಗಿ ತಲೆ ಅಥವಾ ಮಿದುಳಿನಲ್ಲಿ ಯಾವುದೇ ರೀತಿಯ ಗಾಯವನ್ನು ತಲೆ ಗಾಯ ಎಂದು ಕರೆಯಲಾಗುತ್ತದೆ. ತಲೆ ಗಾಯಗಳು ಸಣ್ಣ ಚಿಕ್ಕಗಾಯಗಳಿಂದ ಹಿಡಿದು ತೆಲೆಗೆ ರಕ್ಷಾಕವಚದಂತೆ ಇರುವ ಮೂಳೆ ಮುರಿತವಾದರೂ ಮೆದುಳಿನ ಭಾಗಗಳಿಗೆ ಹಾನಿಯಾಗಬಹುದು ಅಥವಾ ಗಾಯದಿಂದಾಗಿ ರಕ್ತಸ್ರಾವ ಅಥವಾ ತಲೆಯೊಳಗೆ ಊತವಾಗಬಹುದು ಎಂದು ಎಚ್ಚರಿಸುತ್ತಾರೆ ವೈದ್ಯರು.

ಆಪ್ಟಿಕ್ ನರಗಳು ಹಾನಿ ಸಾಧ್ಯತೆ: ತಲೆ ಗಾಯದಿಂದ ಬಲಿಪಶುವಿನ ಮಿದುಳಿನ ನರಗಳು ಮತ್ತು ಅಂಗಾಂಶಗಳು ಅನೇಕ ಬಾರಿ ಹಾನಿಗೊಳಗಾಗಬಹುದು. ಇದು ಗಾಯವನ್ನು ಗಂಭೀರವಾಗಿ ಪರಿವರ್ತಿಸಬಹುದು. ಅಲ್ಲದೇ, ಅಪಘಾತಗಳು ಅವರ ಆಪ್ಟಿಕ್ ನರಗಳನ್ನು ಹಾನಿಯಾಗಬಹುದು. ಇದು ಕೆಲವೊಮ್ಮೆ ವ್ಯಕ್ತಿಗೆ ಶಾಶ್ವತ ಅಥವಾ ತಾತ್ಕಾಲಿಕ ದೃಷ್ಟಿ ಹಾನಿಗೂ ಕಾರಣವಾಗಬಹುದು. ಬೇರೆ ಯಾವುದೇ ರೀತಿಯಲ್ಲಿ ಅಂಗವೈಕಲ್ಯ, ಮಾನಸಿಕ ಸ್ಥಿರತೆ ನಷ್ಟ, ದೇಹದ ಯಾವುದೇ ಭಾಗದ ವಿಘಟನೆ ಅಥವಾ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಳ್ಳಬಹುದು. ನಿಲ್ಲುವುದು, ಮಾತನಾಡುವುದು ಮತ್ತು ಯೋಚಿಸುವುದರ ಮೇಲೂ ಪರಿಣಾಮ ಬೀರಬಹುದು. ವ್ಯಕ್ತಿಯ ಸ್ಮರಣಶಕ್ತಿಯನ್ನು ಕಳೆದುಕೊಳ್ಳಬಹುದು. ಕೆಲವೊಮ್ಮೆ ತಲೆಗೆ ತೀವ್ರವಾದ ಗಾಯಗಳಿಂದ ವ್ಯಕ್ತಿ ಮೃತಪಡಬಹುದು.

ತಲೆ ಅಥವಾ ಮಿದುಳಿನ ಗಾಯಗಳಲ್ಲಿ ಸಾಮಾನ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಬೀಳುವ ವಸ್ತುಗಳಿಂದ ತಲೆಗೆ ಸ್ವಲ್ಪ ಗಾಯವಾಗುವುದು. ಆದರೆ, ತಲೆಯ ಒಳಗೆ ಅಥವಾ ಹೊರಗೆ ಯಾವುದೇ ರಕ್ತಸ್ರಾವವಾಗುವುದಿಲ್ಲ. ಅವು ಗಾಯಗಳಾಗಿ ರೂಪುಗೊಳ್ಳುವುದಿಲ್ಲ. ಎರಡನೆಯದಾಗಿ, ಇದರಲ್ಲಿ ತಲೆಗೆ ಆಂತರಿಕ ಗಾಯ, ತಲೆಬುರುಡೆಯ ಮೂಳೆಯ ಮುರಿತ ಮತ್ತು ಬಿರುಕು, ಮೆದುಳಿಗೆ ಹಾನಿ ಮತ್ತು ಅಪಘಾತ, ಕ್ರೀಡಾ ಸಮಯದಲ್ಲಿ ಅಥವಾ ಇನ್ನಾವುದೇ ಕಾರಣಕ್ಕೆ ಸಂಬಂಧಿಸಿದ ಗಾಯಗಳಿಂದ ನರಗಳಿಗೆ ಹಾನಿಯಾಗಿ ಗಂಭೀರ ಸಮಸ್ಯೆಗಳು ಎದುರಾಗಬಹುದು.

ಈ ಗಾಯಗಳನ್ನು ಸಾಮಾನ್ಯವಾಗಿ ಹೆಮಟೋಮಾ, ಹೆಮರೇಜ್, ಕನ್ಕ್ಯುಶನ್, ಎಡಿಮಾ, ತಲೆಬುರುಡೆ ಮುರಿತ ಸೇರಿದಂತೆ ಇತ್ಯಾದಿ ಎಂದು ಕರೆಯಲಾಗುತ್ತದೆ. ಈ ಗಾಯಗಳು ಸಾಮಾನ್ಯವಾಗಿ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಕ್ರೀಡೆ, ಮೋಟಾರು ಮತ್ತು ವಾಹನ-ಪಾದಚಾರಿ ಅಪಘಾತಗಳ ಜೊತೆಗೆ ಬೀಳುವಿಕೆ, ಸಾಮಾನ್ಯ ಹಿಂಸಾಚಾರ ಮತ್ತು ಕೌಟುಂಬಿಕ ಹಿಂಸಾಚಾರ, ಚಿಕ್ಕ ವಯಸ್ಸಿನಲ್ಲಿ ತಲೆಯ ಮೇಲೆ ಹೊಡೆತ ಬೀಳುವುದು, ಕ್ರೀಡೆಯ ಹೊರತಾಗಿ, ತಲೆಗೆ ಗಾಯಗಳಾಗಲು ಸಹ ಕಾರಣಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರತಿವರ್ಷ 80,000 ಸಾವು!: ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 80,000 ಜನರು ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಾರೆ. ಇದು ಪ್ರಪಂಚದಾದ್ಯಂತದ ಸಾವಿನ ಪ್ರಮಾಣ ಸುಮಾರು ಶೇ 13ರಷ್ಟಿದೆ. ಜಗತ್ತಿನಲ್ಲಿ ಪ್ರತೀ ನಾಲ್ಕು ನಿಮಿಷಗಳಿಗೊಮ್ಮೆ ತಲೆಗೆ ಆಗುವ ಗಾಯದಿಂದಲೇ ಒಂದು ಸಾವು ಸಂಭವಿಸುತ್ತದೆ. ಭಾರತದಲ್ಲಿ ಪ್ರತೀ ಏಳು ನಿಮಿಷಕ್ಕೆ ಒಂದು ಸಾವಿನ ಪ್ರಕರಣ ನಡೆಯುತ್ತದೆ. ಜನರು ಸಾಮಾನ್ಯವಾಗಿ ಬೀಳುವಿಕೆ, ಏನನ್ನಾದರೂ ಹೊಡೆಯುವುದು ಮತ್ತು ತಲೆಗೆ ಗಾಯವಾಗುವಂತಹ ಘಟನೆಗಳನ್ನು ನಿರ್ಲಕ್ಷಿಸುತ್ತಾರೆ. ಸಾಮಾನ್ಯವಾಗಿ, ತಲೆ ಅಥವಾ ಮಿದುಳಿನ ಗಾಯಗಳು ಮಾತ್ರ ದೊಡ್ಡ ಅಪಘಾತದಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಎದುರಾಗುತ್ತವೆ ಎಂದು ಜನರು ಭಾವಿಸುತ್ತಾರೆ, ಆದರೆ ಅದು ತಪ್ಪು.

ಸಮಸ್ಯೆ ಗಂಭೀರವಾಗುವ ಮುನ್ನವೇ ತಡೆಯಿರಿ: ಕೆಲವೊಮ್ಮೆ ತಲೆಯ ಅತ್ಯಂತ ಸೂಕ್ಷ್ಮ ಭಾಗಕ್ಕೆ ಸ್ವಲ್ಪ ಗಾಯ ಅಥವಾ ತಲೆಗೆ ಪೆಟ್ಟು ಬಿದ್ದರೆ, ತಲೆ ಮತ್ತು ಮೆದುಳಿಗೆ ತೀವ್ರ ಹಾನಿಯಾಗಬಹುದು. ಇದರಿಂದ ವಿಶ್ವ ತಲೆ ಗಾಯದ ಜಾಗೃತಿ ದಿನವು ತಲೆ ಗಾಯಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಗತಿಗಳ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ. ಇದರಿಂದ ಯಾವುದೇ ತಲೆ ಗಾಯವನ್ನು ಲಘುವಾಗಿ ಪರಿಗಣಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ತಲೆಯನ್ನು ಪರೀಕ್ಷಿಸಿ, ಸಕಾಲದಲ್ಲಿ ಚಿಕಿತ್ಸೆ ಅಗತ್ಯವಿದ್ದಲ್ಲಿ ತೆಗೆದುಕೊಳ್ಳುವುದರಿಂದ ಸಮಸ್ಯೆ ಗಂಭೀರವಾಗುವ ಮುನ್ನವೇ ತಡೆಯಬಹುದು.

ಇದನ್ನೂ ಓದಿ: ಬಾಯಿ ಆರೋಗ್ಯದ ಬಗ್ಗೆ ಎಷ್ಟು ಅರಿವಿದೆ ನಿಮಗೆ? ಈ ಬಗ್ಗೆ ತಿಳುವಳಿಕೆ ಅವಶ್ಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.