ETV Bharat / bharat

ಗೆದ್ದು ಬಾ ಭಾರತ: ದೇಶಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ-ವಿಡಿಯೋ - ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ

World cup final-Nationwide special prayers for India: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಗೆಲುವಿಗಾಗಿ ಅಭಿಮಾನಿಗಳು ದೇಶಾದ್ಯಂತ ಪ್ರಾರ್ಥನೆ, ಪೂಜೆ, ಹವನದಲ್ಲಿ ಭಾಗಿಯಾದರು.

special prayers
ಟೀಂ ಇಂಡಿಯಾ ಗೆಲುವಿಗೆ ವಿಶೇಷ ಪೂಜೆ
author img

By ETV Bharat Karnataka Team

Published : Nov 19, 2023, 12:44 PM IST

Updated : Nov 19, 2023, 1:59 PM IST

ನವದೆಹಲಿ: ಇಡೀ ಜಗತ್ತೇ ಇಂದಿನ ವಿಶ್ವಕಪ್ ಕ್ರಿಕೆಟ್‌​ ಫೈನಲ್‌ ಪಂದ್ಯವನ್ನು ಎದುರು ನೋಡುತ್ತಿದೆ. ಸೆಮಿ ಫೈನಲ್​ನಲ್ಲಿ ಭಾರತ ತಂಡ ಕಿವೀಸ್​ ವಿರುದ್ಧ ಭರ್ಜರಿ ಜಯಗಳಿಸಿ ಫೈನಲ್​ ಪ್ರವೇಶ ಪಡೆದಿದ್ದು, ಇಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2ಗಂಟೆಗೆ ಆಸೀಸ್​ ವಿರುದ್ಧ ಕಣಕ್ಕಿಳಿಯಲಿದೆ. 2011ರ ಬಳಿಕ ಮತ್ತೆ ಪ್ರತಿಷ್ಟಿತ ವಿಶ್ವಕಪ್ ಅನ್ನು ತಮ್ಮದಾಗಿಸಿಕೊಳ್ಳುವ ಗುರಿಯತ್ತ ರೋಹಿತ್​ ಶರ್ಮಾ ನಾಯಕತ್ವದ ಭಾರತ ಸಾಕಷ್ಟು ತಯಾರಿ ನಡೆಸಿ ಮುನ್ನುಗ್ಗುತ್ತಿದೆ. ಈ ಬಾರಿ ವರ್ಲ್ಡ್​ ಕಪ್ ಗೆಲ್ಲಲೇಬೇಕೆಂದು ಭಾರತದ ಗೆಲುವಿಗಾಗಿ ವಿವಿಧ ದೇವಾಲಯಗಳಲ್ಲಿ ಕ್ರೀಡಾಭಿಮಾನಿಗಳು ವಿಶೇಷ ಪೂಜೆ, ಹವನಾದಿಗಳನ್ನು ಕೈಗೊಂಡಿದ್ದಾರೆ.

ವಿಜಯಪುರ ಹಾಗೂ ಬೆಳಗಾವಿಯ ವಿವಿಧ ದೇವಾಲಯದಲ್ಲಿ ಭಾರತದ ಗೆಲುವಿಗೆ ಪೂಜೆ

ಕರ್ನಾಟಕದ ವಿವಿಧೆಡೆ ಪ್ರಾರ್ಥನೆ: ಟೀಂ ಇಂಡಿಯಾ ಗೆಲುವಿಗಾಗಿ ಬೆಂಗಳೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗುಮ್ಮಟನಗರಿ ವಿಜಯಪುರದ ಮನಗೂಳಿ ರಸ್ತೆಯ ರಿಂಗ್‌ರೋಡ್‌ ಬಳಿಯಿರುವ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕದ ಮೂಲಕ ಭಾರತ ಕ್ರಿಕೆಟ್‌ ತಂಡಕ್ಕೆ ಶುಭ ಕೋರಲಾಯಿತು.

  • #WATCH | Maharashtra: People perform special Aarti at Shree Siddhivinayak temple in Pune and cheer for team India's victory in the ICC World Cup final match against Australia. pic.twitter.com/PhLsrZr9Mi

    — ANI (@ANI) November 19, 2023 " class="align-text-top noRightClick twitterSection" data=" ">

ಚಿಕ್ಕೋಡಿ ವಿವಿಧ ಸುಕ್ಷೇತ್ರ, ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಇತಿಹಾಸ ಪ್ರಸಿದ್ಧ ರಾಮತೀರ್ಥ ಗ್ರಾಮದ ಸ್ವಯಂಭೂ ಉಮಾ ರಾಮೇಶ್ವರ ಹಾಗೂ ಕೋಹಳ್ಳಿ ಸಂಗಮೇಶ್ವರ ದೇವಾಲಯಲ್ಲಿ ವಿಶೇಷ ಪೂಜೆ, ಚಿಕ್ಕೋಡಿ ತಾಲೂಕಿನ ಯಡೂರ ವೀರಭದ್ರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ನೆರವೇರಿತು. ಪಂಚಮಸಾಲಿ ಸಮಾಜದ ಜಗದ್ಗುರು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಭಾರತ ಕ್ರಿಕೆಟ್‌ ತಂಡಕ್ಕೆ ಶುಭ ಹಾರೈಸಿದರು.

ಇತರೆ ರಾಜ್ಯಗಳಲ್ಲೂ ಪ್ರಾರ್ಥನೆ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಹಜರತ್ ಸೈಯದ್ ಯಾಕೂಬ್ ಸಾಹಿನ್ ಮಂದಿರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಗುಜರಾತ್​ನ ಬೋಟಾಡ್‌ನಲ್ಲಿ ಕಷ್ಟಭಂಜನ್ ದೇವ್ ಹನುಮಂಜಿ ಮಹಾರಾಜರ ವಿಶಿಷ್ಟ ದರ್ಶನ ಪಡೆದ ಕ್ರಿಕೆಟ್​ ಅಭಿಮಾನಿಗಳು ಪ್ರಾರ್ಥಿಸಿದರು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿಯೂ ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳು ಶ್ರೀ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮೊಹಮ್ಮದ್ ಶಮಿ ಅವರ ಅಮ್ರೋಹಾ ಗ್ರಾಮದಲ್ಲಿ ವಿಶ್ವಕಪ್​ಗಾಗಿ ಪ್ರಾರ್ಥನೆ ನಡೆಯಿತು. ವಾರಣಾಸಿಯ ಸಿಂಧಿಯಾ ಘಾಟ್‌ನಲ್ಲಿ ವಿಶೇಷ ಪೂಜೆ ನಡೆಯಿತು.

ತಮಿಳುನಾಡಿನ ಮಧುರೈ ಗಣೇಶ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಹಾರಾಷ್ಟ್ರದ ಪುಣೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜನರು ವಿಶೇಷ ಆರತಿ ಬೆಳಗಿ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಪ್ರಾರ್ಥಿಸಿದರು. ಟೀಮ್ ಇಂಡಿಯಾವನ್ನು ಹುರಿದುಂಬಿಸಲು ಶಿವದ್ನ್ಯಾ ಪ್ರತಿಷ್ಠಾನದ ಸದಸ್ಯರು ನಾಗಪುರದಲ್ಲಿ ಸಾಂಪ್ರದಾಯಿಕ ಮಹಾರಾಷ್ಟ್ರದ ಧೋಲ್ ಆಡಿದರು.

  • #WATCH | Uttar Pradesh: Prayers being offered in Indian pacer Mohammed Shami's village in Amroha for team India's victory in the ICC World Cup final match against Australia. pic.twitter.com/aMy8CwbQdQ

ಮಧ್ಯಪ್ರದೇಶದಲ್ಲಿ ಉಜ್ಜಯಿನಿ ಮಹಾಕಾಲ್ ದೇವಸ್ಥಾನದಲ್ಲಿ ಭಸ್ಮಾರತಿ ಮಾಡಲಾಯಿತು. ಮಹಾಕಾಲ್ ದೇವಸ್ಥಾನದ ಅರ್ಚಕ ಮಹೇಶ್ ಶರ್ಮಾ ಅರ್ಚನೆಯ ಬಳಿಕ, "ಇಂದು ನಾವು ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಭಾರತವು ಕ್ರೀಡಾ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವಿಶ್ವಗುರುವಾಗಬೇಕೆಂದು ನಾವು ಬಯಸುತ್ತೇವೆ. ಭಾರತ ಗೆಲ್ಲಲಿ ಎಂದು ಶಿಸುತ್ತೇವೆ" ಎಂದರು.

ಇದನ್ನೂ ಓದಿ: ವಿಶ್ವಕಪ್​ ಫೈನಲ್‌ನಲ್ಲಿ ಈವರೆಗೆ ದಾಖಲಾಗಿದ್ದು 6 ಶತಕ: ಇಂದಿನ ಶತಕವೀರ ಯಾರು?

Last Updated : Nov 19, 2023, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.