ನವ ದೆಹಲಿ: 2022-23ರ ಹಣಕಾಸು ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.6.9ಕ್ಕೆ ಏರಿಕೆಯಾಗುವ ಮುನ್ಸೂಚನೆಯನ್ನು ವಿಶ್ವಬ್ಯಾಂಕ್ ನೀಡಿದೆ. ಈ ಹಿಂದೆ ಅಕ್ಟೋಬರ್‌ನಲ್ಲಿ ಈ ಬೆಳವಣಿಗೆಯು ಶೇ.7.5ರಿಂದ 6.5ಕ್ಕೆ ಕುಸಿಯುವ ಮುನ್ಸೂಚನೆ ನೀಡಿತ್ತು. ಇದೀಗ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಹಣದುಬ್ಬರ ಶೇ 7.1 ನಿರೀಕ್ಷೆ: ಜಾಗತಿಕ ಪರಿಣಾಮಗಳ ನಡುವೆಯೂ ದೇಶದ ಆರ್ಥಿಕತೆ ಹೆಚ್ಚು ಚೇತರಿಸಿಕೊಳ್ಳುತ್ತಿದೆ. ಜೊತೆಗೆ ನಿರೀಕ್ಷೆಗಿಂತ ಉತ್ತಮವಾಗಿ ಆರ್ಥಿಕಾಭಿವೃದ್ಧಿ ಸಾಧ್ಯತೆ ಇದೆ ಎಂದಿದೆ. 2022-23ರಲ್ಲಿ ಜಿಡಿಪಿಯು ಶೇ 6.4ರಷ್ಟು ವಿತ್ತೀಯ ಕೊರತೆಯ ಗುರಿ ಪೂರೈಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ 7.1ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.
ಇದನ್ನೂ ಓದಿ: ಸಾಫ್ಟ್‌ವೇರ್, ಇತರೆ ಸೇವೆಗಳ ದರ ಹೆಚ್ಚಿಸಿದ ಮೈಕ್ರೋಸಾಫ್ಟ್ ಇಂಡಿಯಾ