ನವದೆಹಲಿ: 2025ರ ವೇಳೆಗೆ 2 ಲಕ್ಷ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಜಾಲ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ.
ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಕಾರಗೊಳಿಸಲು ಮೂಲ ಸೌಕರ್ಯ ಅಭಿವೃದ್ಧಿ ಪಾತ್ರದ ಕುರಿತು ಮಾತನಾಡುತ್ತಾ, 'ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ನಾವು 22 ಗ್ರೀನ್‌ಫೀಲ್ಡ್ ಪ್ರವೇಶ ನಿಯಂತ್ರಣ ಎಕ್ಸ್‌ಪ್ರೆಸ್-ವೇ'ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಗಡ್ಕರಿ ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪ್ರಯಾಣದ ಸಮಯ ಮತ್ತು ಇಂಧನ ವೆಚ್ಚವನ್ನು ಕಡಿತಗೊಳಿಸುವುದರ ಹೊರತಾಗಿ, ಫಾಸ್ಟ್ ಟ್ರ್ಯಾಕ್ ಹೆದ್ದಾರಿಗಳು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಲಾಜಿಸ್ಟಿಕ್ಸ್ ವೆಚ್ಚವನ್ನು ಪ್ರಸ್ತುತ ಜಿಡಿಪಿಯ 14-16 ಪ್ರತಿಶತದಿಂದ 10 ಪ್ರತಿಶತಕ್ಕೆ ಇಳಿಸುವುದು ನಮ್ಮ ಆದ್ಯತೆಯಾಗಿದೆ. ಚೀನಾದಲ್ಲಿ ಶೇ. 8-10 ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಶೇ.12 ಆಗಿದೆ. ಭಾರತದಲ್ಲಿ ಶೇ 10-12ಕ್ಕೆ ಇಳಿಸಿದರೆ, ನಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಪೈಪೋಟಿ ಮಾಡಬಹುದು ಎಂದು ಅವರು ವಿವರಿಸಿದರು.
ಬಹು - ಮಾದರಿ ಸಂಪರ್ಕವು ಒಂದು ಸಾರಿಗೆ ವಿಧಾನದಿಂದ ಇನ್ನೊಂದಕ್ಕೆ ಜನರು, ಸರಕು ಮತ್ತು ಸೇವೆಗಳ ಚಲನೆಗೆ ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಇದು ಜನರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ನಿತಿನ್ ಗಡ್ಕರಿ ಹೇಳಿದರು.
ಇದನ್ನೂ ಓದಿ: ಭಾರತದ ನಕ್ಷೆ ತಪ್ಪಾಗಿ ಚಿತ್ರಿಸಿದ WHO: ಮೋದಿಗೆ ಪತ್ರ ಬರೆದ TMC ಸಂಸದ ಸಂತಾನು ಸೇನ್