ಜೈಪುರ (ರಾಜಸ್ಥಾನ್): ಇಲ್ಲಿ ಮೂಡಿ ಬಂದಿರುವ ಈ ಲಕ್ಷ್ಮಿ ಮತ್ತು ಗಣೇಶನ ಮೂರ್ತಿಗಳು ಮಣ್ಣಿನಿಂದ ಮಾಡಿದಂತೆ ಕಂಡರೂ ಇದರ ತಯಾರಿಯಲ್ಲಿ ವಿಶೇಷತೆ ಇದೆ. ಅದೇನು ಎಂದರೆ ಈ ಮೂರ್ತಿಗಳು ಗೋವಿನ ಸಗಣಿಯಿಂದ ಮಾಡಲ್ಪಟ್ಟಿದೆ.
ಜೈಪುರದ ವೈಶಾಲಿ ಗೋ ಶಾಲೆಯಲ್ಲಿ ಈ ವಿಭಿನ್ನ ಮೂರ್ತಿಗಳು ತಯಾರಾಗುತ್ತಿದೆ. ಗೋವಿನ ಸಗಣಿಯನ್ನ ಒಂದು ಉದ್ಯಮವನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದೊಂದು ಲಾಭದಾಯಕ ಉದ್ಯಮವಾಗಿ ಮಾರ್ಪಟ್ಟಿದೆ.
ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಪರಿಸರ ಸ್ನೇಹಿ ಪ್ರತಿಮೆಗಳ ನಿರ್ಮಾಣಕ್ಕೂ ಕರೆ ನೀಡಿದ್ದರು. ಇದರ ನಂತರ ಗೋ ಸೇವಕರು ಒಟ್ಟಾಗಿ ಈ ಉದ್ಯಮ ನಡೆಸುತ್ತಿದ್ದು, ಹಸುವಿನ ಸಗಣಿಯಿಂದ ದೊಡ್ಡ ಪ್ರಮಾಣದಲ್ಲಿ ಗಣೇಶನ ಹಾಗೂ ಲಕ್ಷ್ಮಿ ದೇವಿಯ ವಿಗ್ರಹ ತಯಾರಿಕೆಯನ್ನ ಅಭಿಯಾನದ ರೀತಿ ಆರಂಭಿಸಿದ್ದಾರೆ.
ಈ ರೀತಿ ಹಿಟ್ಟಿನಂತೆ ತಯಾರಾದ ಮಿಶ್ರಣವನ್ನ ಯಂತ್ರದಲ್ಲಿ ಹಾಕಲಾಗುತ್ತದೆ. ಬಳಿಕ ಗಾತ್ರ ಹಾಗೂ ವಿವಿಧ ಡೈ ಬಳಸಿ ವಿಗ್ರಹ ತಯಾರಿಸಲಾಗುತ್ತದೆ. ಇದಾದ ಬಳಿಕ ಅವುಗಳಿಂದ ರಂಗು ರಂಗಿನ ಬಣ್ಣದಿಂದ ಹೊಸ ಆಕಾರ ನೀಡಲಾಗುತ್ತದೆ. ಮೂರ್ತಿಗಳು ವರ್ಣರಂಜಿತ ಬಣ್ಣಗಳಿಂದ ಅಂತಿಮ ಹಂತ ತಲುಪಿದ ಬಳಿಕ ಅವುಗಳನ್ನು ಪ್ಯಾಕಿಂಗ್ ಮಾಡಲಾಗುತ್ತದೆ.
ವಾಸ್ತವವಾಗಿ, ರಾಜಸ್ಥಾನದಲ್ಲಿ ನೂರಾರು ಗೋಶಾಲೆಗಳಿದ್ದು, ಸರ್ಕಾರದ ಅನುದಾನದಿಂದಲೇ ಬಹುತೇಕ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಎಲ್ಲ ಗೋಶಾಲೆಯಲ್ಲೂ ಇಂತಹ ಯಂತ್ರ ಅಳವಡಿಕೆಯಾದರೆ ಗೋಶಾಲೆಗಳು ಸ್ವ - ಉದ್ಯೋಗ ಕೇಂದ್ರವಾಗಿ ಮಾರ್ಪಡುತ್ತವೆ.
ಅನೇಕರು ಗೋವು ಉಪಯೋಗಕ್ಕೆ ಬಾರದು ಎಂಬ ಸಮಯದಲ್ಲಿ ರಸ್ತೆಗೆ ಬಿಟ್ಟುಬಿಡುತ್ತಾರೆ. ಇಂತಹ ವೇಳೆ ಕೆಲವರು ಗೋವುಗಳ ರಕ್ಷಣೆಗೂ ಇಳಿಯುತ್ತಾರೆ. ಇಂತಹ ಉದ್ಯಮವೊಂದು ಜಿಲ್ಲೆಯಲ್ಲಿ ತಲೆ ಎತ್ತಿದರೆ ರಸ್ತೆ ಮೇಲಿನ ಹಸುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಜೊತೆಗೆ ಒಂದಿಷ್ಟು ಜನರಿಗೆ ಉದ್ಯೋಗ ದೊರೆತಂತಾಗುತ್ತದೆ. ಹೀಗಾಗಿ ಜೈಪುರದ 50 ಸಾವಿರ ಮನೆಗಳಿಗೆ ಈ ಮೂರ್ತಿಗಳ ತಲುಪಿಸುವ ಗುರಿ ಹೊಂದಲಾಗಿದೆ.