ETV Bharat / bharat

ಚಿನ್ನ ಖರೀದಿಸಲು ಬಂದು ಕಳ್ಳತನ.. ಕ್ಷಣಾರ್ಧದಲ್ಲಿ ಲಕ್ಷಾಂತರ ರೂ.ಮೌಲ್ಯದ ಆಭರಣ ಕದ್ದೊಯ್ದ ಮಹಿಳಾ ಗ್ಯಾಂಗ್​

ಚಿನ್ನ ಖರೀದಿ ಮಾಡುವ ಉದ್ದೇಶದಿಂದ ಜುವೆಲ್ಲರಿ ಶಾಪ್​ಗೆ ಬಂದಿದ್ದ ಮಹಿಳಾ ಗ್ಯಾಂಗ್​ವೊಂದು ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದೊಯ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

author img

By

Published : Feb 11, 2022, 4:51 AM IST

Women gang stole a box of gold jewelry
Women gang stole a box of gold jewelry

ನಾಸಿಕ್​(ಮಹಾರಾಷ್ಟ್ರ): ಚಿನ್ನ ಖರೀದಿ ಮಾಡಲು ಜುವೆಲ್ಲರಿ ಶಾಪ್​ಗೆ ಬಂದಿದ್ದ ಮಹಿಳೆಯರ ಗುಂಪುವೊಂದು ಕ್ಷಣಾರ್ಧದಲ್ಲೇ ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದು ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದರ ಸಂಪೂರ್ಣ ದೃಶ್ಯಾವಳಿ ಶಾಪ್​ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಕ್ಷಣಾರ್ಧದಲ್ಲಿ ಲಕ್ಷಾಂತರ ರೂ.ಮೌಲ್ಯದ ಆಭರಣ ಕದ್ದೊಯ್ದ ಮಹಿಳಾ ಗ್ಯಾಂಗ್​

ಚಿನ್ನ ಖರೀದಿ ಮಾಡಲು ಮೂವರು ಮಹಿಳೆಯರು ಜುವೆಲ್ಲರಿ ಶಾಪ್​ಗೆ ಬಂದಿದ್ದು, ಈ ವೇಳೆ ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನಾಭರಣದ ಪೆಟ್ಟಿಗೆ ಕದ್ದೊಯ್ದಿದ್ದಾರೆ. ನಿನ್ನೆ ಮಧ್ಯಾಹ್ನ ಸರಾಫ್​ ಬಜಾರ್​​ನಲ್ಲಿ ಈ ಘಟನೆ ನಡೆದಿದೆ. ಪುಟ್ಟ ಬಾಲಕಿಯೊಂದಿಗೆ ಅಂಗಡಿಗೆ ಬಂದಿರುವ ಮೂವರು ಮಹಿಳೆಯರು ಚಿನ್ನಾಭರಣ ನೋಡುವ ನೆಪದಲ್ಲಿ ಬಾಕ್ಸ್​​ ಕದ್ದೊಯ್ದಿದ್ದಾರೆ. ಇದರ ಮೌಲ್ಯ 4.5 ಲಕ್ಷ ರೂ ಎಂದು ಹೇಳಲಾಗಿದೆ. ಘಟನೆ ಸಂಪೂರ್ಣ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿವೆ.

ಇದನ್ನೂ ಓದಿರಿ: ಕಾಂಗ್ರೆಸ್​ ಆಡಳಿತದ ವೇಳೆ ಭಾರತದಲ್ಲಿ 'ಕರಾಳ ಯುಗ'.. ಲೋಕಸಭೆಯಲ್ಲಿ ಸೀತಾರಾಮನ್ ವಾಗ್ದಾಳಿ

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.