ETV Bharat / bharat

ಹೆರಿಗೆಗೆ ದಾಖಲಿಸದೇ ವಾಪಸ್​ ಕಳುಹಿಸಿದ ಆಸ್ಪತ್ರೆ ಸಿಬ್ಬಂದಿ.. ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ - Baby born in auto rickshaw

ಗರ್ಭಿಣಿ ಮಹಿಳೆಯೊಬ್ಬರು ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಪಠಾಣ್​ಕೋಟ್​ನಲ್ಲಿ ನಡೆದಿದೆ.

ಪಠಾಣ್​ಕೋಟ್
ಪಠಾಣ್​ಕೋಟ್
author img

By ETV Bharat Karnataka Team

Published : Sep 5, 2023, 9:06 PM IST

ಸವಿಲ್ ಸರ್ಜನ್ ಅದಿತಿ ಸಲಾರಿಯಾ

ಪಠಾಣ್​ಕೋಟ್ (ಪಂಜಾಬ್​) : ಹೆರಿಗೆಗಾಗಿ ಬಂದ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೇ ವೈದ್ಯರು ಬೇರೆ ಆಸ್ಪತ್ರೆಗೆ ಸೂಚಿಸಿದ್ದರಿಂದ ದಾರಿ ಮಧ್ಯೆಯೇ ಆಟೋ ರಿಕ್ಷಾದಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೊಮ್ಮೆ ಪಠಾಣ್​ಕೋಟ್​ ಆಸ್ಪತ್ರೆ ಸುದ್ದಿಯಾಗಿದೆ.

ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆರಿಗೆಗಾಗಿ ಅಮೃತಸರದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ಹೀಗಾಗಿ ವಾಪಸ್​ ಹೋಗುವಾಗ ಮಹಿಳೆ ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಪ್ರಕರಣವನ್ನು ಸಂಪೂರ್ಣವಾಗಿ ವಿಚಾರಣೆ ನಡೆಸುವಂತೆ ಸಿವಿಲ್​ ಸರ್ಜನ್​ ಆದೇಶಿಸಿದ್ದಾರೆ.

ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ : ಸ್ಥಳೀಯ ನಿವಾಸಿಯ ಪ್ರಕಾರ,

’’ಹೆರಿಗೆಗಾಗಿ ಕುಟುಂಬಸ್ಥರು ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಲ್ಲಿನ ವೈದ್ಯರು ಆಸ್ಪತ್ರೆಗೆ ಸೇರಿಸಿಕೊಳ್ಳದೇ ಅಮೃತಸರ​ದ ಆಸ್ಪತ್ರೆಗೆ ಸೂಚಿಸಿದ್ದಾರೆ. ಆದರೆ ಕುಟುಂಬಸ್ಥರು ಬಡವರಾದ್ದರಿಂದ ಮಹಿಳೆಯನ್ನು ಬೇರೆ ಯಾವುದೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಪುನಃ ಆಟೋದ ಮೂಲಕ ಮರಳಿ ಮನೆಗೆ ಕರೆತಂದಿದ್ದಾರೆ. ಈ ವೇಳೆ ಮಾರ್ಗ ಮಧ್ಯದಲ್ಲಿಯೇ ಮಹಿಳೆಗೆ ಹೆರಿಗೆಯಾಗಿದೆ. ಹೀಗಾಗಿ ಇದೀಗ ಸಂತ್ರಸ್ತ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನು ವಾಪಸ್​ ಕಳುಹಿಸಿದ್ದಕ್ಕೆ ಸರ್ಕಾರಿ ಆಸ್ಪತ್ರೆಯ ಆಡಳಿತದ ಬಗ್ಗೆ ದೂರು ನೀಡಿದ್ದಾರೆ. ಹೀಗಾಗಿ ಸಿವಿಲ್ ಸರ್ಜನ್​ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ’’

ಈ ಹಿಂದೆಯೂ ಇಂತಹದ್ದೇ ಪ್ರಕರಣ ಬಯಲಿಗೆ ಬಂದಿತ್ತು: ಮಹಿಳೆ ಹೆರಿಗೆಯ ಕಾರಣಕ್ಕೆ ಈ ಹಿಂದೆಯೂ ಪಠಾಣ್​ ಜಿಲ್ಲಾಸ್ಪತ್ರೆ ಸುದ್ದಿಯಾಗಿತ್ತು. ಮಹಿಳೆಯೊಬ್ಬರು ಆಸ್ಪತ್ರೆಯ ಕಟ್ಟಡದಲ್ಲಿ ಜನ್ಮ ನೀಡಿದ್ದರು. ಆಗ ಆಸ್ಪತ್ರೆ ಸಿಬ್ಬಂದಿಯ ಬೇಜವ್ದಾರಿ ಬಯಲಿಗೆ ಬಂದಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಠಾಣ್​ಕೋಟ್​ನ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಬೇಜವ್ದಾರಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಪಂಜಾಬ್ ಸರ್ಕಾರ ವಿವಿಧ ಪ್ರದೇಶಗಳಲ್ಲಿ ಮೊಹಲ್ಲಾ ಕ್ಲಿನಿಕ್​ಗಳನ್ನು ಆರಂಭಿಸುತ್ತಿದೆ. ಆದರೆ, ಇದೀಗ ಪಠಾಣ್​ಕೋಟ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆಗೆ ದಾಖಲಿಸಿಕೊಳ್ಳದೇ ಬೇರೆ ಆಸ್ಪತ್ರೆಗೆ ಸೂಚಿಸಿರುವುದು ಕಂಡು ಬಂದಿದೆ. ಹೀಗಾಗಿ ಅವರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಜಿಲ್ಲಾಸ್ಪತ್ರೆಯ ಸರ್ಜನ್ ಹೇಳಿದ್ದೇನು? :

ಈ ವಿಷಯದ ಬಗ್ಗೆ ಪಠಾನ್​ಕೋಟ್​ ಜಿಲ್ಲಾಸ್ಪತ್ರೆಯ ಸಿವಿಲ್ ಸರ್ಜನ್ ಪ್ರತಿಕ್ರಿಯಿಸಿದ್ದು, ಘಟನೆಯ ಎಲ್ಲಾ ಮಾಹಿತಿಯೂ ನಮಗೆ ತಿಳಿದು ಬಂದಿದೆ. ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಸಂತ್ರಸ್ತ ಮಹಿಳೆಯ ಕುಟುಂಬಸ್ಥರನ್ನು ಮಾತನಾಡಿಸಲಾಗಿದೆ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ತನಿಖಾ ತಂಡವನ್ನು ರಚಿಸಲಾಗಿದೆ. ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹು-ಧಾ ಪಾಲಿಕೆ ಸಭೆಗೆ ಆಗಮಿಸಿದ ಗರ್ಭಿಣಿ: ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.