ETV Bharat / bharat

ಅಶ್ಲೀಲ ಚಾಟ್​ ಮೂಲಕ ಹಣ ಸಂಪಾದನೆ; ಕೋರ್ಟ್‌ ಮೆಟ್ಟಿಲೇರಿದ ಮಹಿಳೆಯ ಕತೆ!

ಸೋಶಿಯಲ್​ ಮೀಡಿಯಾ ಆ್ಯಪ್​ಗಳ ಮೂಲಕ ಅಶ್ಲೀಲ ಚಾಟಿಂಗ್ ಮಾಡುತ್ತಿದ್ದ ಮಹಿಳೆಯನ್ನು ಆಕೆಯ ಗಂಡನೇ ವ್ಯಭಿಚಾರಕ್ಕೆ ತಳ್ಳಲು ಪ್ರಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

woman-used-to-porn-call-from-app-and-husband-tried-to-push-her-into-prostitution
ಅಶ್ಲೀಲ ಚಾಟ್​ ಮೂಲಕ ಹಣ ಸಂಪಾದಿಸುತ್ತಿದ್ದ ಮಹಿಳೆ
author img

By

Published : Dec 27, 2022, 8:38 PM IST

ಲಖನೌ (ಉತ್ತರ ಪ್ರದೇಶ): ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್​ ದುರ್ಬಳಕೆ ಮಾಡಿಕೊಂಡ ವಿವಾಹಿತ ಮಹಿಳೆಯೊಬ್ಬಳ ದಾಂಪತ್ಯ ಜೀವನಕ್ಕೆ ಹುಳಿ ಬಿದ್ದಿದೆ. ಪತಿಗೆ ತಿಳಿಯದೇ ಅನ್ಯರೊಂದಿಗೆ ಆಕೆ ಆನ್​ಲೈನ್​​ ಅಶ್ಲೀಲ ಚಾಟಿಂಗ್ ಮಾಡಿದ್ದಾಳೆ. ಇದರಿಂದ ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡಿದ್ದಾಳೆ. ಆದರೆ, ಇದೇ ಸಂಪಾದನೆ ಮೇಲೆ ಪತಿಯ ಕಣ್ಣು ಬಿದ್ದಿದ್ದು, ನೀಚ ಕೃತ್ಯವನ್ನೇ ಮುಂದುವರೆಸುವಂತೆ ಒತ್ತಡ ಹೇರಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಆ ಮಹಿಳೆ ಈಗ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ!.

ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಇಂತಹ ವಿಲಕ್ಷಣ ಪ್ರಕರಣ ವರದಿಯಾಗಿದೆ. ವಿಚ್ಛೇದನದ ಅರ್ಜಿ ಸ್ವೀಕರಿಸಿರುವ ಕೌಟುಂಬಿಕ ನ್ಯಾಯಾಲಯದ ವಕೀಲರು ಸಹ ಈ ಕಥೆ ಕೇಳಿ ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ 36 ವರ್ಷಗಳ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ಬಂದಿದೆ ಎಂದು ಹಿರಿಯ ವಕೀಲ ಸಿದ್ಧಾಂತ್ ಕುಮಾರ್ ಹೇಳಿದರು.

ಪ್ರಕರಣದ ಸಂಪೂರ್ಣ ಮಾಹಿತಿ: ವಿವಾಹಿತ ಮಹಿಳೆ ಹುಡುಗರೊಂದಿಗೆ ಆನ್‌ಲೈನ್ ಸೆಕ್ಸ್ ಚಾಟ್‌ ಮಾಡುತ್ತಿದ್ದಳು. ಅದಕ್ಕೆ ಪ್ರತಿಯಾಗಿ ಈಕೆಗೆ ಸೋಶಿಯಲ್ ಮೀಡಿಯಾದ ಅಪ್ಲಿಕೇಶನ್​ಗಳಿಂದ ಪ್ರತಿ ತಿಂಗಳಿಗೆ 80 ಸಾವಿರದಿಂದ 10 ಲಕ್ಷ ರೂ.ವರೆಗೆ ಹಣ ಸಿಗುತ್ತಿತ್ತು. ಆದರೆ, ಮಹಿಳೆಯು ಹಣದ ಮೂಲದ ಬಗ್ಗೆ ತನ್ನ ಗಂಡನಿಗೆ ಹೇಳಿಯೇ ಇರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಹೆಂಡತಿ ಹೇಗೆ ಕೆಲಸ ಮಾಡುತ್ತಾಳೆ ಎಂಬುದೂ ಸಹ ಆಕೆಯ ಪತಿಗೆ ಗೊತ್ತಿರಲಿಲ್ಲ. ಮಹಿಳೆಯೂ ತನ್ನ ಪತಿಯನ್ನು ಪ್ರತಿ ದಾರಿ ತಪ್ಪಿಸುತ್ತಿದ್ದಳು.

ಆದರೆ, ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿಡಿಯೋಗಳು ಟ್ರೆಂಡ್ ಆಗಿವೆ ಎಂದು ಮಾತ್ರ ಈ ಮಹಿಳೆ ಪತಿಗೆ ಹೇಳುತ್ತಿದ್ದಳು. ಈ ವಿಡಿಯೋಗಳಿಗೆ ಬರುವ ಲೈಕ್ಸ್​ ಮತ್ತು ವ್ಯೂವ್ಸ್ ಆಧಾರದ ಮೇಲೆ ಆ್ಯಪ್​​ನವರು ನನಗೆ ಹಣವನ್ನು ಪಾವತಿಸುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಳು. ಆದರೆ, ವಾಸ್ತವದಲ್ಲಿ ಈ ಮಹಿಳೆ ಆನ್‌ಲೈನ್​ನಲ್ಲಿ ಅಶ್ಲೀಲ ವಿಡಿಯೋ ಆ್ಯಪ್​ಗಳ ಮೂಲಕ ಪರ ಪುರುಷರೊಂದಿಗೆ ಚಾಟ್​ ಮಾಡುತ್ತಿದ್ದಳು. ಗ್ರಾಹಕರು ಮಾತುಕತೆಯಲ್ಲಿ ತೊಡಗಿದ್ದಷ್ಟೂ ಈಕೆಗೆ ಹೆಚ್ಚು ಹಣ ಸಿಗುತ್ತಿತ್ತು.

ನಗ್ನ ವಿಡಿಯೋ ಶೇರ್​ ಮಾಡಿ ಸಂಕಷ್ಟ: ಇದರ ನಡುವೆ ಈ ಮಹಿಳೆಯು ಓರ್ವ ಯುವ ಗ್ರಾಹಕನೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿದ್ದಳು. ಅಲ್ಲದೇ, ಇಬ್ಬರ ನಡುವೆ ಪ್ರೀತಿಯೂ ಹುಟ್ಟುಕೊಂಡಿತ್ತು. ಇಷ್ಟು ದಿನಗಳ ಕಾಲ ಅಶ್ಲೀಲ ಆ್ಯಪ್​ನಲ್ಲಿ​ ಮಾತಿನ ಮೂಲಕವೇ ಪುರುಷರನ್ನು ಆಕೆ ಸೆಳೆಯುತ್ತಿದ್ದಳು. ಯಾವತ್ತೂ ಕೂಡ ತನ್ನ ನಗ್ನ ಫೋಟೋಗಳು ಅಥವಾ ವಿಡಿಯೊಗಳನ್ನು ಆ್ಯಪ್​ನಲ್ಲಿ ಪೋಸ್ಟ್ ಮಾಡಿರಲಿಲ್ಲ.

ಆದರೆ, ಈ ಆ್ಯಪ್​ನಲ್ಲೇ ಪರಿಚಯವಾಗಿ ಅತಿಯಾದ ಸಲುಗೆ ಹೊಂದಿದ್ದ ಆ ಯುವಕ ಒಂದು ದಿನ ಚಾಟ್ ಮಾಡುವಾಗ ಆಕೆಗೆ ಅರೆ ನಗ್ನವಾಗಲು ಕೋರಿಕೊಂಡಿದ್ದಾನೆ. ಅಂತೆಯೇ, ಆಕೆ ವಿಡಿಯೋ ಕಾಲ್​ನಲ್ಲಿ ಅರೆ ನಗ್ನವಾಗಿದ್ದಾಳೆ. ಇತ್ತ, ಆ ಯುವಕ ಮಹಿಳೆಯ ಅರೆನಗ್ನ ದೃಶ್ಯಗಳನ್ನು ತನ್ನಲ್ಲಿ ಸ್ಕ್ರೀನ್​ ರೆಕಾರ್ಡಿಂಗ್​ ಮಾಡಿಕೊಂಡಿದ್ದಾನೆ. ಅಲ್ಲಿಂದ ಆಕೆಗೆ ಭೇಟಿಯಾಗುವಂತೆ ಕಾಡಲು ಆರಂಭಿಸಿದ್ದಾನೆ.

ಮಹಿಳೆಗೆ ಬ್ಲ್ಯಾಕ್‌ಮೇಲ್​ ಶುರು: ಮಹಿಳೆಯ ಅರೆನಗ್ನ ದೃಶ್ಯಗಳನ್ನು ರೆಕಾರ್ಡಿಂಗ್ ಮಾಡಿಕೊಂಡಿದ್ದ ಯುವಕ ಭೇಟಿಯಾಗುವಂತೆ ಕಾಡಿದ್ದು ಮಾತ್ರವಲ್ಲದೇ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಸಹ ಶುರು ಮಾಡಿದ್ದಾನೆ. ತನ್ನ ಬಳಿಯಿರುವ ನಗ್ನ ವಿಡಿಯೋವನ್ನು ಪತಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ. ಆದರೆ, ಯಾವುದಕ್ಕೂ ಮಹಿಳೆ ಒಪ್ಪಿಕೊಂಡಿಲ್ಲ. ಕೊನೆಗೆ ಆ ಯುವಕ ಆಕೆಯ ಅರೆ ನಗ್ನ ವಿಡಿಯೋವನ್ನು ಪತಿಗೆ ಕಳುಹಿಸಿದ್ದಾನೆ.

ವಿಡಿಯೋ ನೋಡಿದ ಪತಿ, ನೀಚ ಬುದ್ಧಿ ಪ್ರದರ್ಶನ: ಪತ್ನಿಯ ವಿಡಿಯೋ ಸ್ವೀಕರಿಸಿದ ಪತಿ ತನ್ನ ನೀಚ ಬುದ್ಧಿ ಪ್ರದರ್ಶಿಸಿದ್ದಾನೆ. ಈ ಆ್ಯಪ್​ಗಳ ಮೂಲಕ ಪುರುಷರನ್ನು ಪತ್ನಿ ಟಾರ್ಗೆಟ್ ಮಾಡಿದ್ದಳು ಎಂದೂ ತಿಳಿದುಕೊಂಡಿದ್ದಾನೆ. ಅಲ್ಲಿಂದ ತನ್ನ ಹೆಂಡತಿಯನ್ನೇ ಸಂಪಾದನೆಯ ಸಾಧನವನ್ನಾಗಿಸಲು ಆತ ಬಯಸಿದ್ದಾನೆ. ಅಂದಿನಿಂದ ತನ್ನ ಸ್ನೇಹಿತರೊಂದಿಗೆ ರಾತ್ರಿ ಕಳೆಯುವಂತೆ ಪತ್ನಿಗೆ ಒತ್ತಡ ಹೇರಲು ಆರಂಭಿಸಿದ್ದಾನೆ.

ಅಲ್ಲದೇ, ಬ್ಯಾಂಕ್​ ಉದ್ಯೋಗಿಯಾಗಿರುವ ಆತ ಪತ್ನಿಗೆ ಬ್ಯಾಂಕ್​ ಖಾತೆಗೆ ಬಿದ್ದಿದ್ದ ಹಣದ ಮೇಲೂ ಕಣ್ಣು ಬಿದ್ದಿದೆ. ಪತ್ನಿಗೆ ಸೇರಿದ್ದ ಎಲ್ಲ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿಸಿದ್ದಾನೆ. ಜೊತೆಗೆ ಬೇರೆೊಬ್ಬರಿಗೆ ಸಹಕರಿಸಲು ಒತ್ತಡ ಹೆಚ್ಚಾದಂತೆ ಮಹಿಳೆಯು ಪಾಪಿ ಪತಿಯ ಹಿಡಿತದಿಂದ ಪಾರಾಗಲು ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.

ತಪ್ಪು ಅರಿತುಕೊಂಡ ಮಹಿಳೆ: ದಂಪತಿಯ ವಿಚ್ಛೇದನದ ಪ್ರತಿಯೊಂದು ಪ್ರಕರಣದಲ್ಲೂ ವಿಭಿನ್ನವಾದ ಕಾರಣಗಳು ಇರುತ್ತವೆ. ಆದರೆ, ಶನಿವಾರ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲು ಬಂದ ಈ ಫೈಜಾಬಾದ್ ಜಿಲ್ಲೆಯ ನಿವಾಸಿಯಾದ ಮಹಿಳೆಯ ಕಥೆಯನ್ನೆಲ್ಲ ಹೇಳಿದಾಗ ನಮಗೆ ಅಚ್ಚರಿ, ಆಘಾತವಾಯಿತು. ನ್ಯಾಯಾಲಯದಲ್ಲಿ ನಡೆಸಿದ ಕೌನ್ಸಿಲಿಂಗ್​ನಲ್ಲಿ ಮಹಿಳೆ ಹಣದ ವಿಚಾರದಲ್ಲಿ ತಾನೂ ಕೂಡ ದೊಡ್ಡ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ವಕೀಲ ಸಿದ್ಧಾಂತ್ ಹೇಳಿದ್ದಾರೆ.

ಇದನ್ನೂ ಓದಿ: ಮಾತನಾಡಲು ನಿರಾಕರಿಸಿದ ಯುವತಿಗೆ ಸ್ಕ್ರೂಡ್ರೈವರ್​ನಿಂದ 51 ಬಾರಿ ಚುಚ್ಚಿ ಕೊಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.