ETV Bharat / bharat

ವಿದ್ಯಾರ್ಥಿಗೆ ಬಲೆ ಹಾಕಿದ ಮಹಿಳೆ: ನಗ್ನ ವಿಡಿಯೋ ಪೋಸ್ಟ್​ ಬೆದರಿಕೆ - ನಗ್ನ ವಿಡಿಯೋ ತೆಗೆದು ಕಳುಹಿಸುವಂತೆ ಮಹಿಳೆ

ಸಾಮಾಜಿಕ ಮಾಧ್ಯಮಗಳಲ್ಲಿ ನಗ್ನ ವಿಡಿಯೋಗಳನ್ನು ಹರಿಬಿಡುವುದಾಗಿ ಬಿಬಿಎ ವಿದ್ಯಾರ್ಥಿಗೆ ಮಹಿಳೆಯೊಬ್ಬಳು ಬ್ಲ್ಯಾಕ್​ಮೇಲ್​ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Woman threatened with nude videos  nude videos of young man  Woman threatened to student in Andhra Pradesh  ವಿದ್ಯಾರ್ಥಿಗೆ ಬಲೆ ಹಾಕಿದ ಮಹಿಳೆ  ನಗ್ನ ವಿಡಿಯೋ ಫೋಸ್ಟ್​ ಮಾಡುವುದಾಗಿ ಬೆದರಿಕೆ  ಬಿಬಿಎ ವಿದ್ಯಾರ್ಥಿಗೆ ಮಹಿಳೆಯೊಬ್ಬಳು ಬ್ಲ್ಯಾಕ್​ಮೇಲ್​ ಖಾಸಗಿ ವಿಡಿಯೋಗಳನ್ನು ಸಂಗ್ರಹಿಸಿ ಬ್ಲ್ಯಾಕ್​ಮೇಲ್  ನಗ್ನ ವಿಡಿಯೋ ತೆಗೆದು ಕಳುಹಿಸುವಂತೆ ಮಹಿಳೆ  ಮಹಿಳೆಯಿಂದ ಯುವಕನಿಗೆ ಬೆದರಿಕೆ
ವಿದ್ಯಾರ್ಥಿಗೆ ಬಲೆ ಹಾಕಿದ ಮಹಿಳೆ
author img

By

Published : Sep 19, 2022, 11:43 AM IST

ಗುಂಟೂರು(ಆಂಧ್ರಪ್ರದೇಶ): ಅಮಾಯಕ ವಿದ್ಯಾರ್ಥಿಗಳನ್ನು ತಮ್ಮ ಬಣ್ಣದ ಮಾತಿನಲ್ಲಿ ಸಿಲುಕಿಸಿ ಅವರಿಂದ ಖಾಸಗಿ ವಿಡಿಯೋಗಳನ್ನು ಸಂಗ್ರಹಿಸಿ ವಂಚಿಸತ್ತಿದ್ದ ಪ್ರಕರಣವೊಂದು ಇಲ್ಲಿನ ತಾಡೇಪಲ್ಲಿ ಟೌನ್​ನಲ್ಲಿ ಬೆಳಕಿಗೆ ಬಂದಿದೆ.

ತಾಡೇಪಲ್ಲಿ ಪೊಲೀಸರ ಪ್ರಕಾರ, ಯುವಕ ತಾಡೇಪಲ್ಲಿಯ ಬಹುಮಹಡಿ ಕಟ್ಟಡದಲ್ಲಿ ತಂಗಿದ್ದು, ನಗರದ ವಿಶ್ವವಿದ್ಯಾಲಯವೊಂದರಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ. ವಿದ್ಯಾರ್ಥಿಗೆ (20 ವರ್ಷ) ಅಪರಿಚಿತ ಮಹಿಳೆಯಿಂದ ಕರೆ ಬಂದಿದೆ. ಬಳಿಕ ಇಬ್ಬರು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಮಾತಿನಲ್ಲೇ ಯುವಕನನ್ನು ಮಹಿಳೆ ಬಲೆಗೆ ಕೆಡವಿದ್ದಾಳೆ ಎನ್ನಲಾಗಿದೆ.

ಫೋನ್​ನಲ್ಲಿ ಮಾತನಾಡುತ್ತಾ ನಗ್ನ ವಿಡಿಯೋ ತೆಗೆದು ಕಳುಹಿಸುವಂತೆ ಯುವಕನಿಗೆ ಮಹಿಳೆ ಕೇಳಿದ್ದಾಳೆ. ಆತ ತನ್ನ ನಗ್ನ ವಿಡಿಯೋಗಳನ್ನು ಅವಳಿಗೆ ಕಳುಹಿಸಿದ್ದಾನೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಮಹಿಳೆ ಯುವಕನಿಗೆ ಬೆದರಿಕೆ ಹಾಕಿದ್ದಾಳೆ.

ಹಣ ಕಳುಹಿಸು, ಇಲ್ಲದಿದ್ರೆ.. ನೀನು ಕಳುಹಿಸಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ. ಹಾಗಾಗಿ ಯುವಕ ಮೊದಲು 8 ಸಾವಿರ ರೂಪಾಯಿ ಕಳುಹಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದಾಳೆ. ಇದರಿಂದ ಬೇಸತ್ತ ಸಂತ್ರಸ್ತ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ. ಎಸ್‌ಎಸ್‌ಐ ರಮೇಶ್‌ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಮಹಿಳೆಯ ಮನೆಗೆ ನುಗ್ಗಿ ಬ್ಲ್ಯಾಕ್ ಮೇಲ್; ಮೂವರು ನಕಲಿ ಪತ್ರಕರ್ತರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.