ETV Bharat / bharat

'ರಾಂಗ್​ ಸೈಡ್​ ಡ್ರೈವ್' ಪ್ರಶ್ನಿಸಿದ್ದಕ್ಕಾಗಿ ಲೇಡಿ ಕಾನ್​​​ಸ್ಟೇಬಲ್​ಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ! - ಲೇಡಿ ಕಾನ್​​​ಸ್ಟೇಬಲ್​ಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ

ಮಗಳ ಜೊತೆ ಸ್ಕೂಟರ್ ಮೇಲೆ ತೆರಳುತ್ತಿದ್ದ ಮಹಿಳೆಯೊಬ್ಬಳು ರಾಂಗ್ ಸೈಡ್​​ನಲ್ಲಿ ಡ್ರೈವ್ ಮಾಡಿದ್ದಕ್ಕಾಗಿ ಪ್ರಶ್ನೆ ಮಾಡಿರುವ ಲೇಡಿ ಕಾನ್​​ಸ್ಟೇಬಲ್​ಗೆ ಥಳಿಸಿರುವ ಘಟನೆ ನಡೆದಿದೆ.

Woman thrashes lady constable
Woman thrashes lady constable
author img

By

Published : May 7, 2022, 9:06 PM IST

Updated : May 7, 2022, 9:18 PM IST

ಮೀರತ್​(ಉತ್ತರ ಪ್ರದೇಶ): ಪೊಲೀಸರನ್ನ ಕಂಡರೆ ಮಾರುದ್ದ ಓಡೋರೇ ಹೆಚ್ಚು. ಆದರೆ, ಇಲ್ಲೋರ್ವ ಮಹಿಳೆ ತಾನು ಮಾಡಿರುವ ತಪ್ಪಿಗೆ ಲೇಡಿ ಕಾನ್​​ಸ್ಟೇಬಲ್​ಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಉತ್ತರ ಪ್ರದೇಶದ ಮೀರತ್​​ನಲ್ಲಿ ಈ ಘಟನೆ ನಡೆದಿದೆ.

ಮೀರತ್​​ನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ತಮ್ಮ ಸ್ಕೂಟಿ ಮೇಲೆ ರಾಂಗ್​ ಸೈಡ್ ಮೂಲಕ ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಲೇಡಿ ಕಾನ್​​ಸ್ಟೇಬಲ್​ ಪ್ರಶ್ನೆ ಮಾಡಿದ್ದಾರೆ. ಆಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದರ ಬೆನ್ನಲೇ ಮಹಿಳಾ ಕಾನ್​​ಸ್ಟೇಬಲ್​ಗೆ ಚಪ್ಪಲಿಯಿಂದ ಥಳಿಸಿದ್ದಾರೆ.

ಲೇಡಿ ಕಾನ್​​​ಸ್ಟೇಬಲ್​ಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ

ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ಸೌರವ್ ಗಂಗೂಲಿ.. ಅವರ ಪತ್ನಿ ನೀಡಿದ್ರೂ ಇಂತಹದೊಂದು ಸುಳಿವು!

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮಹಿಳೆ ಮತ್ತು ಅವರ 19 ವರ್ಷದ ಮಗಳು ತಮ್ಮ ಮನೆಗೆ ಹೋಗುತ್ತಿದ್ದರು, ಮಳೆಯಿಂದಾಗಿ ಬುಧಾನ್ ಗೇಟ್ ಬಳಿಯ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಟ್ರಾಫಿಕ್ ಜಾಮ್​ ಆಗಿದೆ. ಈ ವೇಳೆ ಮಹಿಳೆ ರಾಂಗ್ ಸೈಡ್ ಮೂಲಕ ಸ್ಕೂಟಿಯನ್ನ ಹೊರತೆಗೆಯಲು ಮುಂದಾಗಿದ್ದಾರೆ.

ಇದೇ ವಿಚಾರವಾಗಿ ಮಹಿಳಾ ಪೇದೆ ಪ್ರಶ್ನೆ ಮಾಡಿದ್ದು, ಇಬ್ಬರ ನಡುವೆ ಮಾತಿಕ ಚಕಮಕಿ ಆರಂಭಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸರು ವಿಡಿಯೋ ಆಧರಿಸಿ ಎಫ್​ಐಆರ್​ ದಾಖಲಿಸುವುದಾಗಿ ಹೇಳಿದ್ದಾರೆ.

Last Updated : May 7, 2022, 9:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.