ಮುಂಬೈ(ಮಹಾರಾಷ್ಟ್ರ): ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಶನಿವಾರ ವಿವಾಹಿತ ಮಹಿಳೆಯೊಬ್ಬರು ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜ್ಯೋತಿ ಸೋನಾರ್ ಮೃತ ಮಹಿಳೆ. ನೋಡ ನೋಡುತ್ತಿದ್ದಂತೆ ಪತ್ನಿಯನ್ನು ಕಳೆದುಕೊಂಡ ಅಸಹಾಯಕ ಪತಿ ಮತ್ತು ಮಕ್ಕಳು ಕಿರುಚಾಟ ಮನಕಲಕುವಂತಿದೆ. ಈ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಘಟನೆಯ ಸಂಪೂರ್ಣ ವಿವರ: ಬಾಂದ್ರಾದ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ದಂಪತಿ ಬಂಡೆಯ ಮೇಲೆ ಕುಳಿತಿದ್ದರು. ಅವರ ಮಕ್ಕಳು ಆ ಸಂತೋಷದಾಯಕ ಕ್ಷಣವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ದುರದೃಷ್ಟಕರ ಘಟನೆಯೊಂದು ನಡೆದು ಹೋಯಿತು. ಭೀಕರ ಅಲೆ ಅಪ್ಪಳಿಸಿದಾಗ ಕಣ್ಣು ಮಿಟುಕಿಸುವುದರಲ್ಲಿ ಎಲ್ಲವೂ ಬದಲಾಯಿತು. ಬೃಹತ್ ಅಲೆಗೆ ಸಿಲುಕಿ ಮಹಿಳೆ ಕೊಚ್ಚಿಕೊಂಡು ಹೋದರು. ಆಗ ಮಕ್ಕಳು ಅಸಹಾಯಕತೆಯಿಂದ 'ಮಮ್ಮಿ' ಎಂದು ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕುಟುಂಬವು ಜುಹು ಚೌಪಾಟಿಗೆ ಭೇಟಿ ನೀಡಲು ಯೋಜಿಸಿತ್ತು. ಆದರೆ ಹೆಚ್ಚಿನ ಉಬ್ಬರವಿಳಿತದ ಕಾರಣ ಬೀಚ್‌ಗೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಆದ್ದರಿಂದ ಅವರು ತಮ್ಮ ಯೋಜನೆಯನ್ನು ಬದಲಾಯಿಸಿ ಬಾಂದ್ರಾ ಕಡೆಗೆ ಹೋಗಲು ನಿರ್ಧರಿಸಿದರು. ಬಾಂದ್ರಾ ಕೋಟೆಯನ್ನು ತಲುಪಿದ ನಂತರ ಕುಟುಂಬ ಸದಸ್ಯರು ಉತ್ಸಾಹದಿಂದ ಫೋಟೋ ತೆಗೆಯಲು ಸಮುದ್ರದ ಹತ್ತಿರ ಹೋಗಿದ್ದರು. ದಂಪತಿ ಬಂಡೆಯ ಮೇಲೆ ಕುಳಿತುಕೊಂಡಿದ್ದಾಗ ಅವರ ಮಕ್ಕಳು ದೂರದಿಂದ ಫೋಟೋಗಳನ್ನು ತೆಗೆಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಯಮ ಸ್ವರೂಪಿಯಾಗಿ ದೊಡ್ಡ ಅಲೆಯೊಂದು ಹಿಂಬದಿಯಿಂದ ಅಪ್ಪಳಿಸಿದೆ. ಅಲೆಯ ರಭಸಕ್ಕೆ ಜ್ಯೋತಿ ಸೋನಾರ್ ಕೊಚ್ಚಿ ಹೋಗಿದ್ದು, ಕೆಲವೇ ಸೆಕೆಂಡುಗಳಲ್ಲಿ ಸಾವನ್ನಪ್ಪಿದ್ದಾರೆ.
-
This is so horrible How can a person risk their life for some videos..
— Pramod Jain (@log_kyasochenge) July 15, 2023 " class="align-text-top noRightClick twitterSection" data="
The lady has swept away and lost her life in front of his kid.#bandstand #Mumbai pic.twitter.com/xMat7BGo34
">This is so horrible How can a person risk their life for some videos..
— Pramod Jain (@log_kyasochenge) July 15, 2023
The lady has swept away and lost her life in front of his kid.#bandstand #Mumbai pic.twitter.com/xMat7BGo34This is so horrible How can a person risk their life for some videos..
— Pramod Jain (@log_kyasochenge) July 15, 2023
The lady has swept away and lost her life in front of his kid.#bandstand #Mumbai pic.twitter.com/xMat7BGo34
ದುರಂತವನ್ನು ಕಂಡ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಸಮುದ್ರದಲ್ಲಿ ಮುಳುಗಿದ ಮಹಿಳೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಆಕೆಯ ಮೃತ ದೇಹವನ್ನು ಸಮುದ್ರದಿಂದ ಹೊರತೆಗೆದಿದ್ದಾರೆ.
ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಮುದ್ರಪಾಲು: ಗುಜರಾತ್ನ ಭರೂಚ್ ಜಿಲ್ಲೆಯ ವಾಗ್ರಾ ತಾಲೂಕಿನ ಮುಲ್ಲರ್ ಗ್ರಾಮದ ಗಂಧರ್ ಕರಾವಳಿಯಲ್ಲಿ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಆರು ಮಂದಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಸಮುದ್ರದ ನೀರು ಏಕಾಏಕಿ ಹೆಚ್ಚಾದ ಪರಿಣಾಮ ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಈ ವೇಳೆ ಅವರನ್ನು ರಕ್ಷಿಸಲು ಯತ್ನಿಸಿದ ಕುಟುಂಬ ಸದಸ್ಯರು ನೀರಿನಲ್ಲಿ ಮುಳುಗಿದ್ದರು. ಒಟ್ಟು 8 ಮಂದಿ ನೀರಿನಲ್ಲಿ ಮುಳುಗಿದ್ದು, ಇಬ್ಬರನ್ನು ರಕ್ಷಿಸಲಾಗಿತ್ತು. ಇನ್ನುಳಿದ 6 ಮಂದಿ ನೀರು ಪಾಲಾಗಿದ್ದರು.
ಗಂಧರ್ ಕರಾವಳಿ ಪ್ರದೇಶದ ಸಮುದ್ರದ ಉಬ್ಬರವಿಳಿತದಲ್ಲಿ ಮುಳುಗಿದ ಎಲ್ಲ 8 ಜನರನ್ನು ಭರೂಚ್‌ನ ಬ್ರಾಡ್ ಹಾರ್ಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷಿಸಿ ಮಕ್ಕಳು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ವಾಗ್ರಾದ ಮುಲ್ಲರ್ ಗ್ರಾಮದಲ್ಲಿ ವಾಸಿಸುತ್ತಿರುವ ಬಿಜೆಪಿ ಮುಖಂಡ ಬಲ್ವಂತ್ ಗೋಹಿಲ್ ಅವರ ಕುಟುಂಬದಲ್ಲಿ ಈ ದುರ್ಘಟನೆ ನಡೆದಿತ್ತು.
ಇದನ್ನೂ ಓದಿ: ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಮುದ್ರಪಾಲು..