ಮಥುರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾ ರೈಲ್ವೆ ನಿಲ್ದಾಣದಲ್ಲಿ ಹಠಾತ್ ಹೃದಯಾಘಾತಕ್ಕೆ ಒಳಗಾದ ಪತಿಯು ಪತ್ನಿಯ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದಾರೆ. ಪತಿಗೆ ಉಂಟಾದ ಹೃದಯಾಘಾತದಿಂದ ಧೃತಿಗೆಡದೇ ಕಾರ್ಡಿಯೋಪಲ್ಮನರಿ ರೆಸಸಿಟೇಷನ್ (Cardiopulmonary resuscitation -ಸಿಪಿಆರ್) ಕೊಟ್ಟು ಮರು ಜೀವ ತುಂಬಿದ್ದಾರೆ.
ಶನಿವಾರ ಬೆಳಗ್ಗೆ ಮಥುರಾ ಜಂಕ್ಷನ್‌ನಲ್ಲಿ 70 ವರ್ಷದ ಕೇಶವನ್ ಎಂಬುವವರಿಗೆ ಹೃದಯಾಘಾತವಾಗಿತ್ತು. ಆಗ ಜೊತೆಗಿದ್ದ ಪತ್ನಿ ದಯಾ ಬುದ್ದಿವಂತಿಕೆಯಿಂದ ಸುಮಾರು 10 ನಿಮಿಷಗಳ ಕಾಲ ತನ್ನ ಬಾಯಿಯ ಮೂಲಕ ಪತಿಗೆ ಉಸಿರು ತುಂಬಿದರು. ಇದರಿಂದಾಗಿ ಗಂಡನ ಹೃದಯ ಬಡಿತ ಮತ್ತು ಉಸಿರಾಟವು ಮುಂದುವರೆಯಿತು. ಇದೇ ವೇಳೆ ರೈಲ್ವೆ ನಿಲ್ದಾಣದಲ್ಲಿ ಆರ್‌ಪಿಎಫ್ ಸಿಬ್ಬಂದಿ ಕೂಡ ನೆರವಿಗೆ ಬಂದಿದ್ದಾರೆ. ಆರ್‌ಪಿಎಫ್ ಸಿಬ್ಬಂದಿ ಆತನ ಕೈ ಕಾಲುಗಳಿಗೆ ಮಸಾಜ್ ಮಾಡುತ್ತಲೇ ಇದ್ದರು. ಈ ಪ್ರಯತ್ನದ ಫಲವೇ ಹೃದಯಾಘಾತವಾದರೂ ಕೇಶವನ್ ಪ್ರಾಣ ಉಳಿಸಿದೆ.
ಕೇಶವನ್ ಅವರಿಗೆ ಪ್ರಜ್ಞೆ ಬಂದ ತಕ್ಷಣ ಆರ್‌ಪಿಎಫ್ ಸಿಬ್ಬಂದಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಜಾಮುದ್ದೀನ್- ಕೊಯಮತ್ತೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಕೇಶವನ್ ಮತ್ತು ದಯಾ ದಂಪತಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಒಂದೇ ಹುದ್ದೆಗೆ 22 ಸಾವಿರ ಅರ್ಜಿಗಳು.. 43 ಪರೀಕ್ಷಾ ಕೇಂದ್ರಗಳ ಸ್ಥಾಪನೆ.. ಯಾವುದು ಆ ಖಾಲಿ ಪೋಸ್ಟ್?