ರೋಹ್ಟಕ್ (ಹರಿಯಾಣ): ನಗರದಲ್ಲಿ ಕೊಲೆಯ ಪ್ರಕರಣವೊಂದು ಸಂಚಲನ ಮೂಡಿಸಿದೆ. ಕಳೆದ ವರ್ಷ ವ್ಯಾಸಂಗಕ್ಕಾಗಿ ಕೆನಡಾಕ್ಕೆ ತೆರಳಿದ್ದ ಯುವತಿಯನ್ನು ಆಕೆಯ ಗೆಳೆಯ 2022ರ ಜೂನ್‌ನಲ್ಲಿ ಕೊಲೆ ಮಾಡಿ, ಮೃತದೇಹವನ್ನು ಹೊಲವೊಂದರಲ್ಲಿ ಹೂತು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿಯನ್ನು ಆರೋಪಿ ಗುಂಡಿಕ್ಕಿ ಕೊಲೆ ಮಾಡಿ ಹೊಲದಲ್ಲಿ ಹೂತಾಕಿದ್ದನು ಎಂದು ತಿಳಿದು ಬಂದಿದ್ದು, ಕೊಲೆ ಆರೋಪಿಯನ್ನು ಏಪ್ರಿಲ್ 2 ರಂದು ಉತ್ತರ ಪ್ರದೇಶದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ: ಆರೋಪಿ ಸುನೀಲ್ಗೆ ಮದುವೆಯಾಗಿದ್ದು, ಮೋನಿಕಾ (23) ಅವರನ್ನು ಹತ್ಯೆ ಮಾಡಿದ್ದಾನೆ. ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಕಳೆದ ವರ್ಷ ಮೇನಲ್ಲಿ ಕೆನಡಾದಿಂದ ವಾಪಸಾದ ನಂತರ ಸುನೀಲ್ ಮತ್ತು ಮೋನಿಕಾ ಗಾಜಿಯಾಬಾದ್‌ನ ದೇವಸ್ಥಾನದಲ್ಲಿ ವಿವಾಹವಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಐಇಎಲ್ಟಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮೋನಿಕಾ 2022 ರ ಜನವರಿಯಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದರು ಎಂದು ಭಿವಾನಿ ಪೊಲೀಸ್ ಠಾಣಾ ಅಧಿಕಾರಿ ರವೀಂದ್ರಕುಮಾರ್ ತಿಳಿಸಿದ್ದಾರೆ.
ಗೃಹ ಸಚಿವ ಅನಿಲ್ ವಿಜ್ಗೆ ದೂರು: ರೋಹ್ಟಕ್‌ನ ಬಲಾಂದ್ ಗ್ರಾಮದ ನಿವಾಸಿ ಮೋನಿಕಾ ಸೋನಿಪತ್‌ನ ಗುಮಾಡ್ ಹಳ್ಳಿಯಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಓದಲು ಬಂದಿದ್ದರು. ಇಲ್ಲಿ ಗ್ರಾಮದ ನಿವಾಸಿ ಸುನೀಲ್ ಎಂಬಾತನ ಜತೆ ಪ್ರೇಮ ಸಂಬಂಧ ಹೊಂದಿದ್ದರು. ಬಳಿಕ ಮೋನಿಕಾ ಕೆನಡಾಕ್ಕೆ ಹೋಗಿ ನಾಪತ್ತೆಯಾಗಿದ್ದರು. ಜನವರಿ 2022 ರಲ್ಲಿ ಮೋನಿಕಾ ಅವರ ಚಿಕ್ಕಮ್ಮ ಪೊಲೀಸರಿಗೆ ದೂರು ನೀಡಿದ್ದರು. ನವೆಂಬರ್ 2022 ರಲ್ಲಿ ಮೋನಿಕಾ ಕುಟುಂಬದ ಸದಸ್ಯರು ಮತ್ತೊಮ್ಮೆ ಪೊಲೀಸ್ ಠಾಣೆಯಲ್ಲಿ ಈ ವಿಷಯದ ಬಗ್ಗೆ ದೂರು ನೀಡಿದರು ಮತ್ತು ಗೃಹ ಸಚಿವ ಅನಿಲ್ ವಿಜ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದರು.
ತನಿಖೆ ರೋಹ್ಟಕ್ ರೇಂಜ್ ಐಜಿಗೆ ಹಸ್ತಾಂತರ: ಗೃಹ ಸಚಿವ ಅನಿಲ್ ವಿಜ್ ಅವರು ಈ ಸಂಪೂರ್ಣ ವಿಷಯವನ್ನು ಅರಿತುಕೊಂಡು ಅದರ ತನಿಖೆಯನ್ನು ರೋಹ್ಟಕ್ ರೇಂಜ್ ಐಜಿಗೆ ಹಸ್ತಾಂತರಿಸಿದರು. ರೋಹ್ಟಕ್ ಐಜಿ ಮತ್ತು ಭಿವಾನಿ ಸಿಐಎ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ತನಿಖೆಗೆ ಒಳಪಡಿಸಿದ್ದರು. ಸಿಐಎ ತಂಡ ಮೊದಲು ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ನಂತರ ಸುನಿಲ್ ಹೆಸರು ಕಾಣಿಸಿಕೊಂಡಾಗ ಅವರನ್ನು ವಿಚಾರಣೆಗೊಳಪಡಿಸಿದ್ದರು.
ಆರೋಪಿ ಸುನೀಲ್ ಮೊದಲಿಗೆ ಈ ವಿಷಯದಲ್ಲಿ ತಪ್ಪುದಾರಿಗೆಳೆಯುತ್ತಿದ್ದ. ಆದರೆ ಪೊಲೀಸರು ಸುನೀಲ್ನನ್ನು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ನಡೆಸಿದ ಕೂಡಲೇ ಮೋನಿಕಾರ ಕೊಲೆಯ ರಹಸ್ಯ ಬಯಲಿಗೆ ಬಂದಿತು. ಬುಧವಾರ ತಡರಾತ್ರಿ ಭಿವಾನಿ ಕ್ರೈಂ ಬ್ರಾಂಚ್ ತಂಡವು ಸೋನಿಪತ್ ಪೊಲೀಸರ ಸಹಾಯದಿಂದ ಸುನಿಲ್ ಅವರ ತೋಟದ ಮನೆಯಲ್ಲಿ ಮೋನಿಕಾ ಶವವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ.
ಸುನೀಲ್ ಕುಡಿತದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಸುನೀಲ್ ವಿರುದ್ಧ ಸುಮಾರು 6ಕ್ಕೂ ಹೆಚ್ಚು ಪ್ರಕರಣಗಳಿವೆ. ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಮತ್ತು ಹೊಡೆದಾಟದ ಕೇಸ್ಗಳು ದಾಖಲಾಗಿವೆ. ಇದೀಗ ಭಿವಾನಿ ಕ್ರೈಂ ಬ್ರಾಂಚ್ ತಂಡ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದೆ.
ಓದಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಸಹಕಾರ ಆರೋಪ : 16 ಶಿಕ್ಷಕರು ಅಮಾನತು