ETV Bharat / bharat

ಲೂಡೋ ಗೇಮ್​​: ತನ್ನನ್ನು ತಾನೇ ಪಣಕ್ಕಿಟ್ಟ ನಾರಿ.. ಆಟ ಸೋತ ಮಹಿಳೆ ಭೂಮಾಲೀಕನ ತೆಕ್ಕೆಯಲ್ಲಿ ಸೆರೆ - ತನ್ನನ್ನು ತಾನೇ ಪಣಕ್ಕಿಟ್ಟ ನಾರಿ

ತನ್ನನ್ನು ತಾನೇ ಪಣಕ್ಕಿಟ್ಟು ಲೂಡೋ ಆಟದಲ್ಲಿ ಸೋತ ಮಹಿಳೆ. ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಘಟನೆ.

Pratapgarh
ಸಾಂಕೇತಿಕ ಚಿತ್ರ
author img

By

Published : Dec 5, 2022, 10:10 AM IST

ಪ್ರತಾಪ್‌ಗಢ (ಯುಪಿ): ಲೂಡೋ ಆಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಮಹಿಳೆ ಕೊನೆಗೆ ತನ್ನನ್ನು ತಾನೇ ಪಣಕ್ಕಿಟ್ಟು ಸುದ್ದಿಯಾಗಿದ್ದಾಳೆ. ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮಹಿಳೆಯ ಪತಿ, ನಾನು ಆರು ತಿಂಗಳ ಕಾಲ ರಾಜಸ್ಥಾನದ ಕ್ವಾರಿಯಲ್ಲಿ ಕೆಲಸ ಮಾಡಲು ತೆರಳಿದ್ದೆ. ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಕಾಲಕಾಲಕ್ಕೆ ಬ್ಯಾಂಕ್​​ ಖಾತೆಯ ಮೂಲಕ ಹಣ ಕಳುಹಿಸುತ್ತಿದ್ದೆ. ನನ್ನ ಪತ್ನಿಗೆ ಜೂಜಾಟವೆಂದರೆ ಇಷ್ಟ. ನಾನು ಕಳುಹಿಸಿದ ಹಣದಿಂದ ಆಕೆ ಜೂಜಾಡುತ್ತಿದ್ದಳು. ಅವಳಿಗೆ ಹಣವಿಲ್ಲದಿದ್ದಾಗ ತನ್ನನ್ನು ತಾನೇ ಪಣಕ್ಕಿಟ್ಟು ಸೋತಿದ್ದಾಳೆ. ಅಲ್ಲದೇ ಜಮೀನುದಾರನೊಂದಿಗೆ ವಾಸಿಸಲು ನಿರ್ಧರಿಸಿದ್ದಾಳೆ ಎಂದು ಅಳಲು ತೋಡಿಕೊಂದಿದ್ದಾರೆ.

ಪತ್ನಿಯ ಈ ನಿರ್ಧಾರದಿಂದ ಕಂಗೆಟ್ಟ ಪತಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಿರ್ದಯಿಯಾದ ಅಮ್ಮ.. ಹೆತ್ತ ಮಗನನ್ನೇ ಕೊಂದು ಅಂಗಳದಲ್ಲಿ ಶವ ಹೂತಿಟ್ಟ ತಾಯಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.