ETV Bharat / bharat

ಫೈನಾನ್ಸ್​ ಉದ್ಯೋಗಿ ಜೊತೆ ಮಹಿಳೆ ವಿವಾಹ: ತಾಯಿ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು - ಪೊಲೀಸ್​ ಠಾಣೆ

ಇಬ್ಬರು ಹೆಣ್ಣು ಮಕ್ಕಳನ್ನು ಮೊದಲ ಗಂಡನ ಬಳಿಯೇ ಬಿಟ್ಟು ಹೋಗಿ, ಪ್ರಿಯಕರನನ್ನು ಮದುವೆಯಾದ ವಿವಾಹಿತ ಮಹಿಳೆ.

Woman married a finance employee: Children fell at mother feet and cried
ಫೈನಾನ್ಸ್​ ಉದ್ಯೋಗಿ ಜೊತೆ ಮಹಿಳೆ ವಿವಾಹ: ತಾಯಿ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು
author img

By

Published : Apr 10, 2023, 2:20 PM IST

Updated : Apr 10, 2023, 3:15 PM IST

ಫೈನಾನ್ಸ್​ ಉದ್ಯೋಗಿ ಜೊತೆ ಮಹಿಳೆ ವಿವಾಹ: ತಾಯಿ ಕಾಲಿಗೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಇಬ್ಬರು ಮಕ್ಕಳ ತಾಯಿಯೊಬ್ಬರು, ಗಂಡ ಹಾಗೂ ಮಕ್ಕಳನ್ನು ತೊರೆದು, ಪ್ರೀತಿಸಿದವನ ಜೊತೆ ವಿವಾಹವಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈಗ ಮಹಿಳೆಯ ಪತಿ ಹಾಗೂ ಇಬ್ಬರು ಪುತ್ರಿಯರು ಈ ಸಮಸ್ಯೆ ಪರಿಹರಿಸಿಕೊಡುವಂತೆ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ. ಇದೇ ವೇಳೆ, ವಿವಾಹಿತ ಮಹಿಳೆಯೂ ತನಗೆ ಹಾಗೂ ತನ್ನ ಪ್ರಿಯಕರನಿಗೆ ತನ್ನ ಮಾಜಿ ಪತಿಯಿಂದ ಪ್ರಾಣಕ್ಕೆ ಹಾನಿಯಿದೆ ಎಂದು ಎಸ್ಪಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

ರಾಜಸ್ಥಾನದ ಉದಯಪುರ ಜಿಲ್ಲೆಯ ಸಾಲುಂಬಾರ್ ಪ್ರದೇಶದಲ್ಲಿ ಮಮತಾ ಎನ್ನುವ ಮಹಿಳೆ ಗಂಡ, ಮಕ್ಕಳು ಸೇರಿ ತನ್ನೆಲ್ಲಾ ಸಂಬಂಧಗಳನ್ನು ಕಡಿದುಕೊಂಡು, ತನ್ನ ಪ್ರಿಯಕರನನ್ನು ಮದುವೆಯಾಗಿದ್ದಾರೆ. ಫೈನಾನ್ಸ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಜೊತೆ ಮಮತಾಗೆ ಪ್ರೇಮಾಂಕುರವಾಗಿದೆ. ಈ ವಿವಾಹಿತ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಫೈನಾನ್ಸ್ ಕಂಪನಿ ಉದ್ಯೋಗಿ ಜತೆ ಪ್ರೇಮಾಂಕುರ: ಸಾಲದ ಕಂತು ತೆಗೆದುಕೊಳ್ಳಲು ಗ್ರಾಮಕ್ಕೆ ಬರುತ್ತಿದ್ದ ವೇಳೆ ಈ ವಿವಾಹಿತ ಮಹಿಳೆಗೆ ಫೈನಾನ್ಸ್ ಉದ್ಯೋಗಿ ಮೇಲೆ ಪ್ರೀತಿಯಾಗಿದೆ. ಏಪ್ರಿಲ್ 2 ರಂದು ತನ್ನ ಪ್ರಿಯಕರನೊಂದಿಗೆ ಮಹಿಳೆ ಕಾನೂನು ರೀತಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಮದುವೆಯಾಗಿ 15 ವರ್ಷಗಳ ನಂತರ ಮಹಿಳೆಯ ಈ ನಿರ್ಧಾರಕ್ಕೆ ಇಡೀ ಗ್ರಾಮ, ಕುಟುಂಬ ಮತ್ತು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ. ಮಹಿಳೆಗೆ 10 ವರ್ಷ ಮತ್ತು 5 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಹೆಣ್ಣು ಮಕ್ಕಳು ತಾಯಿಗಾಗಿ ಅತ್ತು ಅತ್ತು ಸೊರಗಿದ್ದಾರೆ.

ತಾಯಿಯ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು: ತಾಯಿಯ ಈ ನಿರ್ಧಾರದಿಂದ ಬೇಸರಗೊಂಡ ಇಬ್ಬರು ಹೆಣ್ಣು ಮಕ್ಕಳು, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಅಮ್ಮನ ಬಳಿ ಅತ್ತು ಬೇಡಿಕೊಂಡಿರುವ ಮನಕಲುಕುವ ಸನ್ನಿವೇಶ ನಡೆದಿದೆ. ತಾಯಿಯ ಕಾಲಿಗೆ ಬಿದ್ದು, ತಾಯಿ ಜೊತೆ ನಮ್ಮನ್ನು ಬಿಟ್ಟು ಹೋಗಬೇಡ ಎಂದು ಬೇಡಿಕೊಂಡರೂ, ಮನಕರಗದ ತಾಯಿ ಇಬ್ಬರೂ ಹೆಣ್ಣುಮಕ್ಕಳನ್ನು ಬಿಟ್ಟು ಹೋಗಿರುವ ದೃಶ್ಯ ಎಲ್ಲರಲ್ಲೂ ಕಣ್ಣೀರು ಹರಿಸುವಂತೆ ಮಾಡಿದೆ.

ಇದನ್ನೂ ಓದಿ: ಪೊಲೀಸ್ ಕೇಸ್​ಗೆ ಹೆದರಿ ತಾಳಿ ಕಟ್ಟಿದವನು ರಿಜಿಸ್ಟರ್ ಮ್ಯಾರೇಜ್ ಮಾಡ್ಕೋ ಎಂದಾಗ ನಾಪತ್ತೆ!

ಉತ್ತರ ಪ್ರದೇಶದಲ್ಲೊಂದು ಘಟನೆ: ಕಳೆದ ವರ್ಷ ಉತ್ತರ ಪ್ರದೇಶದ ಶೋಹರತ್​ಗಢದ ವಿವಾಹಿತ ಮಹಿಳೆಯೊಬ್ಬಳು ಅದೇ ಗ್ರಾಮದಲ್ಲಿ ವಾಸವಾಗಿದ್ದ ತನ್ನ ಪ್ರಿಯಕರನನ್ನು ಭೇಟಿಯಾಗಲು ತೆರಳಿದ್ದರು. ಪತಿ ಉದ್ಯೋಗದ ನಿಮಿತ್ತಬೇರೊಂದು ರಾಷ್ಟ್ರದಲ್ಲಿ ನೆಲೆಸಿರುವುದರಿಂದ ಮಹಿಳೆ, ತನ್ನದೇ ಗ್ರಾಮದ ಯುವಕನ ಜೊತೆ ಪ್ರೀತಿ ಬೆಳೆಸಿಕೊಂಡು, ಆತನನ್ನು ಭೇಟಿಯಾಗಲು ಹೋಗಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಇಬ್ಬರನ್ನೂ ರೆಡ್​ಹ್ಯಾಂಡ್​ ಆಗಿ ಹಿಡಿದ್ದರು. ಮಹಿಳೆಯನ್ನು ಕಾಂಪೌಂಡ್​ಗೆ ಹಗ್ಗದಿಂದ ಕಟ್ಟಿ ಥಳಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಕೂಡ ಆಗಿತ್ತು. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಿದ್ದರು.

ಇದನ್ನೂ ಓದಿ: 8 ಮಕ್ಕಳ ಬಿಟ್ಟು, 16 ವರ್ಷದ ಪ್ರಿಯಕರನ​ ಜೊತೆ ಪರಾರಿಯಾದ್ಲು 58ರ ಮಹಿಳೆ!

Last Updated : Apr 10, 2023, 3:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.