ETV Bharat / bharat

ವ್ಯಕ್ತಿಯೊಂದಿಗೆ ಹತ್ತಿರವಾದ ಮಹಿಳೆ.. ಸಲಿಂಗ ಸಂಗಾತಿಯ ಕೊಲೆ - ಈಟಿವಿ ಭಾರತ್ ಕನ್ನಡ ಸುದ್ದಿ

ತೆಲಂಗಾಣದ ಮಂಚೇರಿಯಲ್‌ನಲ್ಲಿ ವ್ಯಕ್ತಿಯೊಬ್ಬರೊಂದಿಗೆ ಹತ್ತಿರವಾಗುತ್ತಿದ್ದ ಆಕೆಯ ಗೈನೋಫೈಲ್ ವಿರುದ್ಧ ಆರೋಪಿ ದ್ವೇಷ ಸಾಧಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ತೆಲಂಗಾಣದಲ್ಲಿ ಕೊಲೆ
ತೆಲಂಗಾಣದಲ್ಲಿ ಕೊಲೆ
author img

By

Published : Mar 17, 2023, 9:08 PM IST

ಮಂದಮರ್ರಿ (ತೆಲಂಗಾಣ) : ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮಂದಮರ್ರಿ ಪ್ರದೇಶದಲ್ಲಿ ಯುವತಿಯೊಬ್ಬಳು ತನ್ನ ಸಲಿಂಗ ಜೋಡಿಯೊಂದಿಗೆ ಸಂಬಂಧ ಹೊಂದಿದ್ದು, ನಂತರ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮಂಚೇರಿಯಲ್ ಜಿಲ್ಲೆಯ ರಾಮಕೃಷ್ಣಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಮಹೇಶ್ವರಿ ಎಂದು ಗುರುತಿಸಲಾಗಿದ್ದು, ಬಲಿಯಾದವರನ್ನು ಸಲ್ಲೂರಿ ಅಂಜಲಿ (21) ಎಂದು ಗುರುತಿಸಲಾಗಿದೆ. ಇಬ್ಬರೂ ಮಂಚೇರಿಯಾ ಜಿಲ್ಲೆಯ ಮಂದಮರ್ರಿ ಮಂಡಲದ ಮಾಮಿಡಿಗಟ್ಟು ಗ್ರಾಮದವರು. ಮಹೇಶ್ವರಿ ಬುಧವಾರ ರಾತ್ರಿ 11.30ಕ್ಕೆ ಸ್ನೇಹಿತ ಶ್ರೀನಿವಾಸ್‌ಗೆ ಕರೆ ಮಾಡಿ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಮಹೇಶ್ವರಿ ಕುತ್ತಿಗೆಯಲ್ಲಿ ಗಾಯ : ಕರೆ ಕೇಳಿ ಬೆಚ್ಚಿಬಿದ್ದ ಶ್ರೀನಿವಾಸ್, ಸ್ಥಳೀಯ ಪೊಲೀಸರೊಂದಿಗೆ ಕೂಡಲೇ ಗುಡಿಪಲ್ಲಿ ಗ್ರಾಮದ ಹೊರವಲಯದಲ್ಲಿ ಕಾರಿನಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿ ಹಾಗೂ ಸಣ್ಣಪುಟ್ಟ ಗಾಯಗಳಾಗಿರುವ ಮಹೇಶ್ವರಿ ಅವರನ್ನು ಕೂಡಲೇ ಮಂಚೇರಿಯಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಅದಾಗಲೇ ಅಂಜಲಿ ಸಾವನ್ನಪ್ಪಿದ್ದಳು. ಮಹೇಶ್ವರಿ ಕುತ್ತಿಗೆಯಲ್ಲಿ ಆಳವಾದ ಗಾಯವಾಗಿದ್ದ ಕಾರಣ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ರಾಮಕೃಷ್ಣಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ: ಮಹೇಶ್ವರಿ ಅವರ ಹೊಟ್ಟೆ ಮತ್ತು ಕುತ್ತಿಗೆಯ ಮೇಲೆ ಚಾಕುವಿನಿಂದ ಸಣ್ಣದಾಗಿ ಇರಿದಿರುವ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಜಲಿ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿ ಅಂಜಲಿ ಕುಟುಂಬಸ್ಥರು ಗುರುವಾರ ಮಂಚೇರಿಯಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಕೃಷ್ಣಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹೇಶ್ವರಿ ಮತ್ತು ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮಾಮಿಡಿಗಟ್ಟುವಿನ ಸಲ್ಲೂರಿ ಅಂಜಲಿ (21) ಮನ್ನೆಗುಡಂನಲ್ಲಿರುವ ಅಜ್ಜಿ ಮನೆಗೆ ಹೋಗುತ್ತಿದ್ದಳು. ಅಲ್ಲಿ ಅದೇ ಗ್ರಾಮದ ಪೆರುಗು ಮಹೇಶ್ವರಿ ಅಲಿಯಾಸ್ ಮಹೇಶ್ ಎಂಬಾತನ ಸಂಪರ್ಕಕ್ಕೆ ಬಂದಿದ್ದಳು ಎಂದು ತಿಳಿದು ಬಂದಿದೆ. ಅಂಜಲಿ ಎರಡು ವರ್ಷಗಳ ಹಿಂದೆ ಮಂಚೇರಿಯಲ್‌ನಲ್ಲಿ ರೂಂ ಬಾಡಿಗೆಗೆ ಪಡೆದು ಮಹೇಶ್ವರಿ, ಆಕೆಯ ಸಹೋದರಿ ಪರಮೇಶ್ವರಿ ಮತ್ತು ಸಹೋದರ ವಿಘ್ನೇಶ್ ಅವರೊಂದಿಗೆ ವಾಸವಾಗಿದ್ದರು.

ಲೆಸ್ಬಿಯನ್ ಸಂಬಂಧದಲ್ಲಿದ್ದ ಮಹೇಶ್ವರಿ - ಅಂಜಲಿ: ಅಂಜಲಿ ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಮಹೇಶ್ವರಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳು ಇತ್ತೀಚೆಗೆ ಅದನ್ನು ತೊರೆದಿದ್ದಳು. ಮಹೇಶ್ವರಿ ಅವರು ಮನ್ನೆಗುಡಂನ ವಿಆರ್‌ಎ ಮೊಂಡಿ ಅವರ ನಾಲ್ಕನೇ ಪುತ್ರಿ ಆಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಆಕೆ ವರ್ತನೆ ಭಾರಿ ಬದಲಾವಣೆ ಆಗಿತ್ತು. ಮಹೇಶ್ವರಿ ಮತ್ತು ಅಂಜಲಿ ಸಲಿಂಗ ಸಂಬಂಧದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮಂಚೇರಿಯಲ್​ನಲ್ಲಿ ಕನ್ಸಲ್ಟೆನ್ಸಿ ನಡೆಸುತ್ತಿದ್ದ ಶ್ರೀನಿವಾಸ್ ಎಂಬಾತನನ್ನು ಇತ್ತೀಚೆಗೆ ಮಹೇಶ್ವರಿ ಭೇಟಿಯಾಗಿದ್ದರು ಎನ್ನಲಾಗಿದೆ. ಬಳಿಕ ಆಕೆಯ ತಂಗಿ, ಸಹೋದರ ಹಾಗೂ ಅಂಜಲಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಎರಡು ತಿಂಗಳಿಗೆ ಅಂಜಲಿ ಶ್ರೀನಿವಾಸ್​ಗೆ ಹತ್ತಿರವಾಗಿದ್ದಳು. ಹೀಗಾಗಿ ಮಹೇಶ್ವರಿಯಿಂದ ಸ್ವಲ್ಪ ಸ್ವಲ್ಪವೇ ಅಂತರ ಕಾಪಾಡಿಕೊಂಡಿದ್ದಳು. ಅಂಜಲಿಯಿಂದ ದೂರ ಉಳಿದಿದ್ದಕ್ಕೆ ಮಹೇಶ್ವರಿ ಅವರ ವಿರುದ್ಧ ದ್ವೇಷ ಸಾಧಿಸಿ ಅಂಜಲಿಯನ್ನು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಕೊಲೆ ನಡೆದಿದೆ ಎನ್ನಲಾದ ದಿನ 10 ಗಂಟೆಗೆ ಮಹೇಶ್ವರಿ ಮಾಮಿಡಿಗಟ್ಟಿಗೆ ಭೇಟಿ ನೀಡುವ ನೆಪದಲ್ಲಿ ಅಂಜಲಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು ಎಂಬ ಮಾಹಿತಿಯೂ ಪೊಲೀಸರಿಗೆ ದೊರೆತಿದೆ.

ಇದನ್ನೂ ಓದಿ : ಮಗನಿಗೆ ಸುನ್ನತಿ ಮಾಡಿಸಿದ್ದಕ್ಕೆ ಸೊಸೆ, ಆಕೆ ತಾಯಿಯ ಬರ್ಬರ ಹತ್ಯೆ: ಪೊಲೀಸರ ಅತಿಥಿಯಾದ ಮೂವರು ಆರೋಪಿಗಳು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.