ನವದೆಹಲಿ: ಮಹಿಳೆಯೊಬ್ಬಳು ಮೆಟ್ರೋ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ದೆಹಲಿಯ ಜನಕಪುರಿ ಪಶ್ಚಿಮ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಸಿಐಎಸ್‌ಎಫ್ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಮಹಿಳೆ ರೈಲಿನ ಮುಂದೆ ಜಿಗಿಯುವುದನ್ನು ಕಂಡ ರೈಲಿನ ಚಾಲಕ ತಕ್ಷಣ ತುರ್ತು ಬ್ರೇಕ್ ಹಾಕಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಬಚಾವಾಗಿದ್ದಾಳೆ. ಅಲ್ಲದೆ ತಕ್ಷಣ ಕಾರ್ಯಪ್ರವೃತ್ತರಾದ ಸಿಐಎಸ್‌ಎಫ್ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿ, ಟ್ರ್ಯಾಕ್‌ನಿಂದ ಮೇಲೆತ್ತಿದ್ದಾರೆ.
ಟ್ರ್ಯಾಕ್ ಮೇಲೆ ಹಾರಿದ್ದರಿಂದ ಮಹಿಳೆಯ ಬಟ್ಟೆಗಳು ಹರಿದು ಹೋಗಿವೆ. ಸಿಐಎಸ್ಎಫ್ ಸಿಬ್ಬಂದಿ ತಮ್ಮ ಶರ್ಟ್ ತೆಗೆದು ಮಹಿಳೆಯ ಮೈಮುಚ್ಚಿದ್ದಾರೆ. ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಇಂದು ಬೆಳಗ್ಗೆ ಶುಭ ಸುದ್ದಿ, ಮಧ್ಯಾಹ್ನ ಅಥವಾ ಸಂಜೆ ನೂತನ ಸಚಿವರ ಪ್ರಮಾಣವಚನ: ಸಿಎಂ