ETV Bharat / bharat

ನಡು ರಸ್ತೆಯಲ್ಲಿ ಮಹಿಳೆ ಕೊಲೆ: ಪ್ರಿಯಕರನ ಬಂಧನ - ಪ್ರಿಯಕರನಿಂದ ಮಹಿಳೆ ಕೊಲೆ

ಸಿಂಧು ಎಂಬ 50 ವರ್ಷದ ಮಹಿಳೆಯನ್ನು, ಆಕೆಯ ಪ್ರಿಯಕರ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಪೊಲೀಸರು ಆರೋಪಿ ರಾಜೇಶ್‌ ಎಂಬಾತನನ್ನು ಬಂಧಿಸಿದ್ದಾರೆ. ಸಿಂಧು, ರಾಜೇಶ್​ನಿಂದ ದೂರವಾಗುತ್ತಿದ್ದಾಳೆ ಎಂಬ ಶಂಕೆಯೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Woman hacked to death by her lover
ನಡು ರಸ್ತೆಯಲ್ಲಿ ಮಹಿಳೆ ಕೊಲೆ
author img

By

Published : Dec 15, 2022, 2:26 PM IST

ತಿರುವನಂತಪುರಂ(ಕೇರಳ): ಐವತ್ತು ವರ್ಷದ ಮಹಿಳೆಯನ್ನು ಆಕೆಯ 46 ವರ್ಷದ ಪ್ರಿಯಕರ ನಡುರಸ್ತೆಯಲ್ಲೇ ಕೊಲೆ ಮಾಡಿರುವ ಘಟನೆ ಕೇರಳದ ತಿರುವನಂತಪುರಂನ ವಜೈಲಾದಲ್ಲಿ ನಡೆದಿದೆ. ಆರೋಪಿ ರಾಜೇಶ್ ಕಿಲಿಮನೂರಿನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದ. ಆತ ನಂದಿಯೋಡು ನಿವಾಸಿ ಸಿಂಧು ಜೊತೆ 12 ವರ್ಷಗಳಿಂದ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಲಿವಿಂಗ್ ಇನ್ ರಿಲೇಷನ್​ಶಿಪ್​ನಲ್ಲಿದ್ದರು. ಕಳೆದ ಒಂದು ತಿಂಗಳಿನಿಂದ ಇಬ್ಬರು ಬೇರೆಯಾಗಿದ್ದರು. ಸಿಂಧು ಆತನಿಂದ ದೂರ ಹೋಗಲು ನಿರ್ಧರಿಸಿದ ನಂತರ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ಮತ್ತೆ ಬರಲು ಒಪ್ಪಲಿಲ್ಲ. ಹಾಗಾಗಿ ಕೊಲೆ ಮಾಡಿದ್ದಾನೆ ಎಂದು ಪೆರೂರ್ಕಡ ಠಾಣಾಧಿಕಾರಿ ಸಾಯಿಜುನಾಥ ವಿ. ರಾಜೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: ವೆಲ್ಡಿಂಗ್​​ಗೆ ಬಂದು ಆಂಟಿ ಜೊತೆ ಬಾಂಡಿಂಗ್ ಶುರು ಮಾಡ್ದ.. ಮತ್ತೊಬ್ಬನ ಹಿಂದೆ ಬಿದ್ದಿದ್ದಕ್ಕೆ ಅವಳನ್ನೇ ಅಂತ್ಯ ಮಾಡಿದ!

ರಾಜೇಶ್ ಸಿಂಧುವನ್ನು ಹಿಂಬಾಲಿಸಿ ಬಳಿಕ ಕೊಲೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆಕೆಯನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಆರೋಪಿ ರಾಜೇಶ್‌ನನ್ನು ಪೆರೂರ್ಕಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜೇಶ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.