ಪುಣೆ (ಮಹಾರಾಷ್ಟ್ರ): ಮೊಕ್ಕಾ (Maharashtra control of organized act) ಕಾಯ್ದೆಯಡಿ ಪೊಲೀಸರ ವಶದಲ್ಲಿದ್ದ ಮಹಿಳೆಯೊಬ್ಬರು ಇಲ್ಲಿನ ಸಾಸೂನ್ ಆಸ್ಪತ್ರೆಯ 8ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ದೀಪ್ತಿ ಕೇಲ್ ಎಂದು ಗುರುತಿಸಲಾಗಿದೆ.
ಈ ಆತ್ಮಹತ್ಯೆ ಪ್ರಕರಣ ಕೋಲಾಹಲಕ್ಕೆ ಕಾರಣವಾಗಿದೆ. ಇಲ್ಲಿನ ಉದ್ಯಮಿ ಬಲ್ವಂತ್ ಮರಾಠೆ ಆತ್ಮಹತ್ಯೆ ಪ್ರಕರಣ ಸಂಬಂಧ ದೀಪ್ತಿ ಕೇಲ್ ಹಾಗೂ ನೀಲೇಶ್ ಶೆಲರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆಕೆಯ ಮೇಲೆ ಉದ್ಯಮಿಯ ಆತ್ಮಹತ್ಯೆಗೆ ಪ್ರಚೋಧಿಸಿರುವ ಆರೋಪವಿದೆ. ಆದರೆ, ಆಕೆಯ ಬಂಧನದ ಬಳಿಕೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಪರೀಕ್ಷೆಯಲ್ಲಿ ಕೊರೊನಾ ದೃಢವಾಗಿತ್ತು.
ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್ ವಾರ್ಡ್ನಲ್ಲಿ ಇರಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ ಆಸ್ಪತ್ರೆಯ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.