ETV Bharat / bharat

Stone Baby : ಬರೋಬ್ಬರಿ 35 ವರ್ಷ ಗರ್ಭಿಣಿಯಾಗಿದ್ದ ಮಹಿಳೆ : ಹೊಟ್ಟೆಯಲ್ಲಿದ್ದದ್ದು ‘ಕಲ್ಲಿನ ಮಗು’ - 35 ವರ್ಷಗಳ ಕಾಲ ಗರ್ಭಿಣಿಯಾಗಿದ್ದ ಅಲ್ಜೇರಿಯಾದ ಮಹಿಳೆ

ಅಲ್ಜೇರಿಯಾದ ಮಹಿಳೆಯೊಬ್ಬರು 35 ವರ್ಷಗಳಿಂದ ಕಲ್ಲಿನ ಮಗುವನ್ನು ತಮ್ಮ ಹೊಟ್ಟೆಯಲ್ಲಿ ಹೊತ್ತಿದ್ದರೂ ಸತ್ಯಾಂಶ ಮಾತ್ರ 73 ವರ್ಷದ ಮುದುಕಿಯಾದಾಗ ಬೆಳಕಿಗೆ ಬಂದಿದೆ..

stone baby
ಕಲ್ಲಿನ ಮಗು
author img

By

Published : Dec 28, 2021, 5:27 PM IST

ಮಹಿಳೆಯರ ಗರ್ಭಧಾರಣೆಯ ಸಮಯ 9 ತಿಂಗಳೆಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೂ ಕೆಲವೊಮ್ಮೆ 7 ಅಥವಾ 8 ತಿಂಗಳಿಗೇ ಮಗು ಹುಟ್ಟುತ್ತವೆ.

ಇನ್ನು ಪುರಾಣದ ವಿಚಾರಕ್ಕೆ ಹೋದರೆ, ಮಹಾಭಾರತದಲ್ಲಿ ಗಾಂಧಾರಿ ಸುಮಾರು ಎರಡು ವರ್ಷಗಳ ಕಾಲ ಗರ್ಭಿಣಿಯಾಗಿದ್ದಳು ಎಂದು ಹೇಳಲಾಗಿದೆ. ಆದರೆ, ಇಲ್ಲೊಬ್ಬ ಮಹಿಳೆ ಬರೋಬ್ಬರಿ 35 ವರ್ಷಗಳ ಕಾಲ ಗರ್ಭಿಣಿಯಾಗಿದ್ದರು ಎಂದರೆ ನೀವು ನಂಬಲೇಬೇಕಿದೆ.

ಹೌದು.., ಇದು ವಿಚಿತ್ರ ಹಾಗೂ ಬೆಚ್ಚಿ ಬೀಳಿಸುವ ಸುದ್ದಿಯಾದರೂ ಸತ್ಯ. ವೈದ್ಯಕೀಯ ವಿಜ್ಞಾನದ ಜಗತ್ತಿನಲ್ಲಿ ಅನೇಕ ಬಾರಿ ವಿಚಿತ್ರ ಘಟನೆಗಳು ಸಂಭವಿಸುತ್ತವೆ. ಇದನ್ನು ಕಂಡು ವೈದ್ಯರೇ ಬೆಚ್ಚಿ ಬೀಳುತ್ತಾರೆ. ಅಲ್ಜೇರಿಯಾದಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ.

stone baby
ಕಲ್ಲಿನ ಮಗು

ಅಲ್ಜೇರಿಯಾದ ಮಹಿಳೆಯೊಬ್ಬರಿಗೆ (ಈಗ ಅವರು 73 ವರ್ಷದ ವೃದ್ಧೆ) ಆಗಾಗ್ಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ, ಅವರಿಗೆ ಯಾವುದೇ ಅಪಾಯಕಾರಿ ಸನ್ನಿವೇಶಗಳು ಎದುರಾಗಿರಲಿಲ್ಲ.

ಕೆಲ ದಿನಗಳ ಹಿಂದೆ ಹೊಟ್ಟೆನೋವೆಂದು ಆಸ್ಪತ್ರಗೆ ಹೋದಾಗ ವೈದ್ಯರು ಎಕ್ಸ್​-ರೇ ಮಾಡಿದ್ದಾರೆ. ಅವರ ಹೊಟ್ಟೆಯಲ್ಲಿ ಬೃಹತ್​ ಗಾತ್ರದ ಕಲ್ಲು ಇದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: Video- ಯಮನನ್ನೇ ಸೋಲಿಸಿದ ವ್ಯಕ್ತಿ.. ಸಿಡಿಲು ಬಡಿದ್ರೂ ಬಚಾವ್​​ ಆದ ಭೂಪ!

ಬಳಿಕ ನಡೆಸಿದ ತಪಾಸಣೆಗಳಲ್ಲಿ ಅವರ ಹೊಟ್ಟೆಯಲ್ಲಿ 4.5 ಪೌಂಡ್ ತೂಕದ (ಸುಮಾರು ಎರಡು ಕೆಜಿ) 7 ತಿಂಗಳ ಭ್ರೂಣ ಇರುವುದು ತಿಳಿದು ಬಂದಿದೆ. ಆದರೆ, ಆ ಭ್ರೂಣ ಕಲ್ಲಾಗಿ ಮಾರ್ಪಟ್ಟಿದೆ.

ಇದಕ್ಕೆ ವೈದ್ಯರು ‘ಕಲ್ಲಿನ ಮಗು’ ಎಂದು ಹೆಸರಿಟ್ಟಿದ್ದಾರೆ. 35 ವರ್ಷಗಳಿಂದ ಇವರು ಕಲ್ಲಿನ ಮಗುವನ್ನು ತಮ್ಮ ಹೊಟ್ಟೆಯಲ್ಲಿ ಹೊತ್ತಿದ್ದರೂ ಸತ್ಯಾಂಶ ಮಾತ್ರ 73 ವರ್ಷದ ಮುದುಕಿಯಾದಾಗ ಬೆಳಕಿಗೆ ಬಂದಿದೆ.

ಹೇಗೆ ರೂಪುಗೊಳ್ಳತ್ತೆ ಈ ‘ಕಲ್ಲಿನ ಮಗು’?

ಗರ್ಭಾವಸ್ಥೆ ವಿಫಲವಾದಾಗ ಸಾಕಷ್ಟು ರಕ್ತ ಪೂರೈಕೆ ಇಲ್ಲದೇ ಭ್ರೂಣವನ್ನು ಹೊರ ಹಾಕಲು ದೇಹಕ್ಕೆ ಯಾವುದೇ ಮಾರ್ಗವಿಲ್ಲದೆ ಇರುವಾಗ ಭ್ರೂಣವು ನಿಧಾನವಾಗಿ ಕಲ್ಲಾಗಿ ಪರಿವರ್ತನೆಯಾಗುತ್ತಾ ಹೋಗುತ್ತದೆ.

ಇದಕ್ಕೆ 'ಲಿಥೋಪಿಡಿಯನ್' ಎಂದು ಕರೆಯಲಾಗುತ್ತದೆ. ಇದು ಯಾವುದೇ ಬಾಹ್ಯ ಲಕ್ಷಣಗಳಿಲ್ಲದೆ, ಪತ್ತೆಯಾಗದೆ ಅನೇಕ ವರ್ಷಗಳ ಕಾಲ ಮಹಿಳೆಯರ ಹೊಟ್ಟೆಯಲ್ಲಿಯೇ ಇರುತ್ತದೆ.

ಅಲ್ಜೇರಿಯಾದ ಈ ವೃದ್ಧೆ ಕೂಡ 1981ರಲ್ಲಿ ಗರ್ಭಧರಿಸಿ, ಗರ್ಭಪಾತಕ್ಕೆ ಒಳಗಾಗಿದ್ದರು. ಆದರೆ, ಈ ರೀತಿ ಪ್ರಕರಣ ಇದೇ ಮೊದಲೇನಲ್ಲ. ಜಗತ್ತಿನಾದ್ಯಂತ ಇಂತಹ 290 ಲಿಥೋಪಿಡಿಯನ್ ಪ್ರಕರಣಗಳು ವರದಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.