ETV Bharat / bharat

ಭಾರತದಲ್ಲಿ ಇಲ್ಲದಿದ್ದರೆ ಪಾಕ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುವುದು: ಕೇಜ್ರಿವಾಲ್​ ಟಾಂಗ್​! - ಕೇಜ್ರಿವಾಲ್​ ತ್ರಿವರ್ಣ ಧ್ವಜ

ವಿಪಕ್ಷಗಳಿಗೆ ಟಾಂಗ್ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​​ ಭಾರತದಲ್ಲಿ ಸಾಧ್ಯವಾಗದೇ ಹೋದರೆ ಪಾಕ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುವುದು ಎಂದು ತಿರುಗೇಟು ನೀಡಿದ್ದಾರೆ.

Kejriwal
Kejriwal
author img

By

Published : Mar 12, 2021, 8:11 PM IST

ನವದೆಹಲಿ: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ತ್ರಿವರ್ಣಧ್ವಜ ಹಾರಿಸಲಾಗುವುದು ಎಂದು ಕೇಜ್ರಿವಾಲ್​​ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದು, ಇದಕ್ಕೆ ವಿರೋಧ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಟಾಂಗ್​ ನೀಡಿದ್ದಾರೆ.

ಭಾರತದಲ್ಲಿ ಇಲ್ಲದಿದ್ದರೆ ಅದನ್ನು ಪಾಕಿಸ್ತಾನದಲ್ಲಿ ಹಾರಿಸಲಾಗುವುದು ಎಂದು ಟಾಂಗ್​ ನೀಡಿರುವ ಕೇಜ್ರಿವಾಲ್​, ದೇಶಪ್ರೇಮದ ಬಗ್ಗೆ ಯಾವುದೇ ರಾಜಕೀಯ ಗುದ್ದಾಟ ಇರಬಾರದು, ದೇಶ ಎಲ್ಲರಿಗೂ ಸೇರಿದೆ ಎಂದಿದ್ದಾರೆ.

ವಿಧಾನಸಭೆಯಲ್ಲಿ ಕೇಜ್ರಿವಾಲ್ ಮಾತು

ಬಜೆಟ್​ ವೇಳೆ ನಗರದಾದ್ಯಂತ 500 ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ರಾಷ್ಟ್ರಧ್ವಜ ನೋಡಿದಾಗಲೆಲ್ಲಾ, ಗಡಿಯಲ್ಲಿ ಹೋರಾಡುವ ಸೈನಿಕರ ನೆನಪು ಬರಬೇಕು ಎಂದಿದ್ದರು. ಆದರೆ ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.

ಇಂದು ಮಾತನಾಡಿದ ಕೇಜ್ರಿವಾಲ್​, ನೀವು ನಮ್ಮ ನಿರ್ಧಾರಕ್ಕೆ ಬೆಂಬಲ ನೀಡಬೇಕು. ದೇಶಭಕ್ತಿಯ ಬಗ್ಗೆ ಯಾವುದೇ ರಾಜಕೀಯ ಇರಬಾರದು. ದೇಶ ಎಲ್ಲರಿಗೂ ಸೇರಿದೆ. ಭಾರತದಲ್ಲಿ ಇಲ್ಲದಿದ್ದರೆ ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುವುದು ಎಂದು ಬಿಜೆಪಿ, ಕಾಂಗ್ರೆಸ್​ಗೆ ವಿಧಾನಸಭೆಯಲ್ಲಿ ತಿರುಗೇಟು ನೀಡಿದರು.

ಇದೇ ವೇಳೆ 2048ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಬಿಡ್​ ಮಾಡಲಾಗುವುದು ಹಾಗೂ 2047ರ ವೇಳೆಗೆ ತಲಾ ಆದಾಯ ಸಿಂಗಾಪುರದ ಮಟ್ಟಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿರುವುದಕ್ಕೆ ದೆಹಲಿ ಸರ್ಕಾರವನ್ನು ಅಪಹಾಸ್ಯ ಮಾಡಲಾಗುತ್ತಿದೆ. ನಾವು ಅದನ್ನು ಖಂಡಿತವಾಗಿ ಸಾಧಿಸುತ್ತೇವೆ. ಒಲಿಂಪಿಕ್ಸ್​​ಗೆ ಬಿಡ್​ ಮಾಡಲು ನಾವು ಕೇಂದ್ರ ಮತ್ತು ಭಾರತ ಒಲಿಂಪಿಕ್​ ಸಂಘ ಸಂಪರ್ಕಿಸುತ್ತೇವೆ ಎಂದಿದ್ದಾರೆ.

ಕಳೆದ ಒಂದೂವರೆ ತಿಂಗಳಲ್ಲಿ ಬಹುತೇಕ ಎಲ್ಲ ರಾಜ್ಯ ಮತ್ತು ಕೇಂದ್ರ ಕೂಡ ಕೊರತೆ ಬಜೆಟ್ ಮಂಡನೆ ಮಾಡಿವೆ. ಆದರೆ ಇಂತಹ ಕಠಿಣ ಕಾಲದಲ್ಲೂ ನಾವು ಹೆಚ್ಚುವರಿ ಬಜೆಟ್​ ಮಂಡನೆ ಮಾಡಿದ್ದು, ಈ ಸಾಧನೆ ಮಾಡಿರುವ ಏಕೈಕ ರಾಜ್ಯ ದೆಹಲಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.