ETV Bharat / bharat

ಮೇ 5ರ ನಂತರ ಬಂಗಾಳದಲ್ಲಿ ಇವರಿಗೂ ಸಿಗುತ್ತೆ ಲಸಿಕೆ

ಮೇ 2 ರಂದು ಬಂಗಾಳ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಆ ಬಳಿಕ ಅಂದರೆ ಮೇ 5ರ ನಂತರ ಬಂಗಾಳದಲ್ಲಿ 18 ವರ್ಷ ಮೇಲ್ಪಟ್ಟವಲರಿಗೆ ಉಚಿತವಾಗಿ ಕೋವಿಡ್‌ ಲಸಿಕೆ ನೀಡುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

Will provide free covid-19 vaccination to above 18 yrs in bengal after may 5; CM Banerjee
ಮೇ 5ರ ನಂತರ ಬಂಗಾಳದಲ್ಲಿ ಇವರಿಗೂ ಸಿಗುತ್ತೆ ಲಸಿಕೆ
author img

By

Published : Apr 23, 2021, 4:50 AM IST

ತಪನ್‌ (ಪಶ್ಚಿಮ ಬಂಗಾಳ): ಇಡೀ ದೇಶದಲ್ಲೇ ತೀವ್ರ ಕುತೂಹಲ ಮೂಡಿಸಿರುವ ಬಂಗಾಳ ವಿಧಾನಸಭೆ ಚುನಾವಣಾ ಫಲಿತಾಂಶ ಮೇ 2 ರಂದು ಹೊರ ಬೀಳಲಿದೆ. ಮೇ 5ರ ನಂತರ ಇಲ್ಲಿನ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್‌ ಉಚಿತವಾಗಿ ನೀಡುತ್ತೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ತಪನ್‌ನಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಮಾತನಾಡಿರುವ ದೀದಿ, ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್‌ ಪ್ರಕರಣಗಳನ್ನು ತಡೆಯಲು ಉಚಿತ ವ್ಯಾಕ್ಸಿನೇಷನ್‌ ಭರವಸೆ ನೀಡಿದ್ದಾರೆ.

ಕರ್ನಾಟಕದಲ್ಲಿ ಮೇ 1 ರಿಂದಲೇ 18 ರಿಂದ 44 ವರ್ಷದವರಿಗೆ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ 400 ಕೋಟಿ ರೂಪಾಯಿ ಖರ್ಚು ಮಾಡಿ ಕೋವಿಶೀಲ್ಡ್‌ ಲಸಿಕೆಯನ್ನು ತರಿಸಿಕೊಳ್ಳಲಾಗುತ್ತಿದೆ. 1 ಕೋಟಿ ಡೋಸ್‌ಗಳನ್ನು ಶೇಖರಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು. ಏಪ್ರಿಲ್‌ 28 ರಿಂದ ಅರ್ಹರು ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳಬೇಕೆಂದು ಕೋರಿದ್ದರು.

ಇದನ್ನೂ ಓದಿ: ಹಣ ಪಡೆದು ಕೋವಿಡ್ ಪಾಸಿಟಿವ್ ವರದಿ ನೀಡ್ತಿದ್ದ ಇಬ್ಬರು ವಜಾ; ಎಫ್‌ಐಆರ್‌ ದಾಖಲು

ಗೋವಾದಲ್ಲೂ 18 ರಿಂದ 45 ವರ್ಷದೊಳಗಿನವರಿಗೆ ಉಚಿತವಾಗಿ ವ್ಯಾಕ್ಸಿನೇಷನ್‌ ನೀಡಲು 5 ಲಕ್ಷ ಡೋಸ್‌ಗಳನ್ನು ಸಂಗ್ರಹಿಸುವುದಾಗಿ ನಿನ್ನೆಯಷ್ಟೇ ಸಿಎಂ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. ಸೀರಂ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಗೋವಾ ಸರ್ಕಾರ ಖರೀದಿಸಲಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.