ETV Bharat / bharat

ನೀರವ್​ ಹಸ್ತಾಂತರ ಪ್ರಕ್ರಿಯೆ ಪ್ರಯತ್ನ ಮುಂದುವರಿಯಲಿದೆ; ವಿದೇಶಾಂಗ ಸಚಿವಾಲಯ

ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಮರಳಿ ಕರೆತರಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

Nirav Modi
ನೀರವ್​ ಹಸ್ತಾಂತರ ಪ್ರಕ್ರಿಯೆ
author img

By

Published : Jun 24, 2021, 10:05 PM IST

ನವದೆಹಲಿ: ಭಾರತಕ್ಕೆ ಬೇಕಾಗಿರುವ ಆರೋಪಿ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಹಸ್ತಾಂತರಿಸಲು ಸಲ್ಲಿಸಿದ್ದ ಮೇಲ್ಮನವಿ ಯುಕೆ ಹೈಕೋರ್ಟ್​ನಲ್ಲಿ ವಜಾಗೊಂಡಿದೆ. ಆದರೆ ಆತನನ್ನು ಮತ್ತೆ ದೇಶಕ್ಕೆ ಕರೆತರಲು ಬೇಕಾದ ಇನ್ನಷ್ಟು ಪ್ರಯತ್ನಗಳನ್ನು ಮಾಡುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಏಪ್ರಿಲ್​ನಲ್ಲಿ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಇಲ್ಲಿನ ಹೈಕೋರ್ಟ್​ನಲ್ಲಿ ಹಸ್ತಾಂತರದ ಮೇಲ್ಮನವಿಯ ಅರ್ಜಿ ಸಲ್ಲಿಸಿದ್ದು, ಇದರ ಮೊದಲ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಆನ್‌ಲೈನ್ ಮೂಲಕ ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ, "ಹಸ್ತಾಂತರಕ್ಕಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ಯುಕೆ ಹೈಕೋರ್ಟ್​ ತಿರಸ್ಕರಿಸಿದೆ. ಈ ಬಗ್ಗೆ ನಾವು ಇನ್ನಷ್ಟು ಪ್ರಯತ್ನ ಮಾಡುತ್ತೇವೆ" ಎಂದಿದ್ದಾರೆ.

"ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಹಣ ವಂಚಿಸಿರುವ ಪ್ರಕರಣದ ಕುರಿತು ವಿಚಾರಣೆ ನಡೆಸಲು ಭಾರತಕ್ಕೆ ನೀರವ್​ ಮೋದಿ ಬೇಕಾಗಿದೆ. ಹೀಗಾಗಿ ಆತನನ್ನು ದೇಶಕ್ಕೆ ಮರಳಿ ಕರೆತರಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸುತ್ತೇವೆ" ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.