ಮುಂಬೈ(ಮಹಾರಾಷ್ಟ್ರ): ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಅಧ್ಯಕ್ಷರಾದ ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ವಿಧಿವಶರಾಗಿದ್ದಾರೆ. ಆದರೆ, ಅವರ ಅಕಾಲಿಕ ಸಾವಿಗೆ ಸೀಟ್ಬೆಲ್ಟ್ ಹಾಕದಿರುವುದೇ ಮುಖ್ಯ ಕಾರಣ ಎಂಬ ಗಂಭೀರ ವಿಚಾರ ತಿಳಿದುಬಂದಿದೆ. ಇದರ ಬೆನ್ನಲ್ಲೇ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಎಲ್ಲರಲ್ಲೂ ವಿಶೇಷ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ.
-
I resolve to always wear my seat belt even when in the rear seat of the car. And I urge all of you to take that pledge too. We all owe it to our families. https://t.co/4jpeZtlsw0
— anand mahindra (@anandmahindra) September 5, 2022 " class="align-text-top noRightClick twitterSection" data="
">I resolve to always wear my seat belt even when in the rear seat of the car. And I urge all of you to take that pledge too. We all owe it to our families. https://t.co/4jpeZtlsw0
— anand mahindra (@anandmahindra) September 5, 2022I resolve to always wear my seat belt even when in the rear seat of the car. And I urge all of you to take that pledge too. We all owe it to our families. https://t.co/4jpeZtlsw0
— anand mahindra (@anandmahindra) September 5, 2022
ಯಾವಾಗಲೂ ಸೀಟ್ ಬೆಲ್ಟ್ ಧರಿಸಿ: ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರೂ ಯಾವಾಗಲೂ ಸೀಟ್ ಬೆಲ್ಟ್ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದೇನೆ. ನೀವೂ ಕೂಡ ಅದೇ ರೀತಿ ಮಾಡಿ. ನಾವೆಲ್ಲರೂ ನಮ್ಮ ಕುಟುಂಬಗಳಿಗೆ ಋಣಿಯಾಗಿದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.
ಸೈರಸ್ ಮಿಸ್ತ್ರಿ 2012ರಲ್ಲಿ ಟಾಟಾ ಗ್ರೂಪ್‌ನ 6ನೇ ಅಧ್ಯಕ್ಷರಾಗಿ ನೇಮಕವಾಗಿದ್ದರು. ಆದಾಗ್ಯೂ, ಅವರನ್ನು ಟಾಟಾ ನಿರ್ದೇಶಕರ ಮಂಡಳಿಯು 2016ರ ಅಕ್ಟೋಬರ್ 24ರಂದು ವಜಾಗೊಳಿಸಿತ್ತು. ಅಲ್ಲದೇ, ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ನಡುವೆ ವಿವಾದವಿತ್ತು. ಇದರಿಂದಲೇ ಸಾಕಷ್ಟು ಸುದ್ದಿಯಾಗಿದ್ದರು. ಬಳಿಕ ಈ ವಿವಾದ ಪ್ರಕರಣ ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಡಿವೈಡರ್ಗೆ ಡಿಕ್ಕಿ ಹೊಡೆದು ದುರಂತ: ಅಹಮದಾಬಾದ್ನಿಂದ ಮುಂಬೈಗೆ ಸೈರಸ್ ಮಿಸ್ತ್ರಿ ಮರ್ಸಿಡಿಸ್ ಕಾರಿನಲ್ಲಿ ಬರುತ್ತಿದ್ದರು. ಮಧ್ಯಾಹ್ನ 3.15ರ ಸುಮಾರಿಗೆ ಮುಂಬೈನ ಸಮೀಪದ ಪಾಲ್ಘರ್ ಜಿಲ್ಲೆಯ ಸೂರ್ಯ ನದಿಯ ಸೇತುವೆ ಮೇಲೆ ಡಿವೈಡರ್ಗೆ ಕಾರು ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಮಹತ್ವದ ಸಂಗತಿಯೆಂದರೆ, ಮಿಸ್ತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೀಟ್ಬೆಲ್ಟ್ ಹಾಕಿರಲಿಲ್ಲ. ಒಂದು ವೇಳೆ ಸೀಟ್ ಬೆಲ್ಟ್ ಧರಿಸಿದ್ದಿದ್ದರೆ ಸ್ವಲ್ಪ ಅಪಾಯ ತಪ್ಪುತ್ತಿತ್ತೇನೋ ಎಂದು ಹೇಳಲಾಗುತ್ತಿದೆ.