ಸಾಮಾನ್ಯವಾಗಿ ಆನೆ ಬಹುತೇಕರಿಗೆ ಇಷ್ಟವಾಗುವ ಪ್ರಾಣಿ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಆಹಾರ ಹುಡುಕುತ್ತಾ ಕಾಡಿನಿಂದ ನಾಡಿನತ್ತ ಮುಖ ಮಾಡುತ್ತಿವೆ. ಒಮ್ಮೊಮ್ಮೆ ರಸ್ತೆಗಳಲ್ಲಿ ಸಂಚರಿಸುವಾಗ ಒಂಟಿ ಸಲಗ ಪ್ರತ್ಯಕ್ಷವಾಗುವುದುಂಟು. ಎಷ್ಟೋ ಬಾರಿ ಹೀಗೆ ಮಾರ್ಗಮಧ್ಯೆ ಆನೆಗಳು ಕಾಣಿಸಿಕೊಂಡರೂ ಯಾರಿಗೂ ತೊಂದರೆ ಕೊಡದೇ ಅವುಗಳ ಪಾಡಿಗೆ ಸಾಗುತ್ತವೆ. ಆದರೆ ಕೆಲವೊಮ್ಮೆ ಮಾತ್ರ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಬಿಡುತ್ತವೆ.
ಹೌದು, ಇಲ್ಲೊಂದೆಡೆ ಮಿನಿ ಟೂರಿಸ್ಟ್ ಬಸ್ವೊಂದನ್ನು ಅಡ್ಡ ಹಾಕಿದ ದೈತ್ಯ ಕಾಡಾನೆಯೊಂದು ತನ್ನ ಸೊಂಡಿಲಿನಲ್ಲಿ ಬಸ್‌ನ ಬಾಗಿಲು ತಳ್ಳಿ ಹತ್ತಲು ಪ್ರಯತ್ನಿಸಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉಮಾಶಂಕರ್ ಸಿಂಗ್ ಎಂಬುವರು ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. "ಟಾಟಾ ಬಸ್‌ನ ಬಾಗಿಲುಗಳು ತುಂಬಾ ಚಿಕ್ಕದಾಗಿದ್ದು, 'ಬಿಗ್ ರೈಡ್' ಹತ್ತಲು ಸಾಧ್ಯವಾಗಲಿಲ್ಲ" ಎಂದು ತಮಾಷೆಯಾಗಿ ಶೀರ್ಷಿಕೆ ನೀಡಿದ್ದಾರೆ.
-
टाटा की बस के दरवाज़े इतने छोटे हैं कि ‘बड़ी सवारी’ चढ़ ही नहीं पायी! 😅
— Umashankar Singh उमाशंकर सिंह (@umashankarsingh) October 22, 2022 " class="align-text-top noRightClick twitterSection" data="
pic.twitter.com/jqcKp3W9Km
">टाटा की बस के दरवाज़े इतने छोटे हैं कि ‘बड़ी सवारी’ चढ़ ही नहीं पायी! 😅
— Umashankar Singh उमाशंकर सिंह (@umashankarsingh) October 22, 2022
pic.twitter.com/jqcKp3W9Kmटाटा की बस के दरवाज़े इतने छोटे हैं कि ‘बड़ी सवारी’ चढ़ ही नहीं पायी! 😅
— Umashankar Singh उमाशंकर सिंह (@umashankarsingh) October 22, 2022
pic.twitter.com/jqcKp3W9Km
ಇದನ್ನೂ ಓದಿ: 'ನಂಗೂ ಸ್ವಲ್ಪ ಪಾಠ ಹೇಳಿ ಕೊಡಿ ಮೇಸ್ಟ್ರೇ...' ಶಾಲೆಗೆ ಬಂದ ಗಜರಾಜ!
ವೈರಲ್ ಆಗಿರುವ ವಿಡಿಯೋದಲ್ಲಿ, ಹೆದ್ದಾರಿಯಲ್ಲಿ ಆನೆಯೊಂದು ಚಲಿಸುತ್ತಿರುವ ಬಸ್ ತಡೆದು ನಿಲ್ಲಿಸುತ್ತದೆ. ನಂತರ ತನ್ನ ಸೊಂಡಿಲಿನಿಂದ ಬಾಗಿಲು ತೆರೆಯಲು ಪ್ರಯತ್ನಿಸಿದೆ. ಆನೆ ಬಸ್ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಚಾಲಕ ನಿಧಾನವಾಗಿ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ್ದಾನೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲ.
ಇದನ್ನೂ ಓದಿ: ರಾಮನಗರದಲ್ಲಿ ಬಸ್ಗೆ ಅಡ್ಡಬಂದ ಆನೆ.. ಭಯಗೊಂಡು ಕಿರುಚಾಡಿದ ಪ್ರಯಾಣಿಕರು
ಈ ವಿಡಿಯೋ ನೋಡಿದ ನೆಟಿಜನ್ ಕಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ವಿಡಿಯೋ ಶೇರ್ ಮಾಡಿ,"ಪ್ರತಿಯೊಬ್ಬರು ದೀಪಾವಳಿ ರಜಾ ದಿನಗಳಲ್ಲಿ ಸಾಧ್ಯವಾದಷ್ಟು ಬೇಗ ಮನೆಗೆ ತಲುಪಲು ಬಯಸುತ್ತಾರೆ" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಕಾಡಿನಿಂದ ಬಂದ ಆನೆಯೊಂದನ್ನು ಮರಳಿ ಕಾಡಿಗಟ್ಟಿದ ನಾಯಿಗಳು.. ವಿಡಿಯೋ