ಗುವಾಹಟಿ( ಅಸ್ಸೋಂ): ಕಾಡಿನಿಂದ ನಾಡಿಗೆ ಲಗ್ಗೆ ಹಾಕಿರುವ ಆನೆಯ ದಂಡು ಏಕಾಏಕಿಯಾಗಿ ಗ್ರಾಮಕ್ಕೆ ಲಗ್ಗೆ ಹಾಕಿ ಅನೇಕ ಮನೆಗಳನ್ನ ನಾಶ ಮಾಡಿವೆ, ಇದರ ಬೆನ್ನಲ್ಲೇ ಭತ್ತದ ಗದ್ದೆಗಳಿಗೆ ಲಗ್ಗೆ ಹಾಕಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.
ಅಸ್ಸೋಂನ ಗೋಲಾಘಾಟ್ನಲ್ಲಿ ಈ ಘಟನೆ ನಡೆದಿದ್ದು, ಮನುಷ್ಯರ ಮೇಲೂ ಈ ಕಾಡಾನೆಗಳು ದಾಳಿ ನಡೆಸಿವೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕಾಫಿ ತೋಟದಲ್ಲಿ ರಂಪಾಟ ನಡೆಸಿವೆ.
ಮೇಲಿಂದ ಮೇಲೆ ಕಾಡಿನಿಂದ ನಾಡಿಗೆ ಬರುವ ಆನೆಯ ಹಿಂಡು ಇಲ್ಲಿನ ಜನರಿಗೆ ತೊಂದರೆ ನೀಡುತ್ತಿದ್ದು, ಗದ್ದೆಗಳಲ್ಲಿ ಬೆಳೆದ ಬೆಳೆ ನಾಶ ಮಾಡುತ್ತಿವೆ. ಇಷ್ಟಾದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.