ಭೂಪಾಲಪಲ್ಲಿ(ತೆಲಂಗಾಣ) : ಜಿಲ್ಲೆಯ ಮಲ್ಹಾರ ಮಂಡಲದ ತಾಡಿಚೆರ್ಲಾದಲ್ಲಿ ಪತ್ನಿಯೇ ಪತಿಯನ್ನು ಕೊಂದಿದ್ದಾಳೆ. ಮಾಚರ್ಲ ರಾಜಯ್ಯ ಹಾಗೂ ರಾಜಕ್ಕ ದಂಪತಿ ಕಳೆದ 5 ವರ್ಷಗಳಿಂದ ಜಗಳದಲ್ಲೇ ಜೀವನ ಮಾಡಿಕೊಂಡು ಬರುತ್ತಿದ್ದರಂತೆ. ಪರಿಣಾಮ ಕೆಲವು ದಿನಗಳಿಂದ ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ದಂಪತಿಗೆ ಮೂವರು ಪುತ್ರಿಯರಿದ್ದು, ಓರ್ವ ಪುತ್ರಿ ಮೃತಪಟ್ಟಿದ್ದಾಳೆ. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಅವರಲ್ಲಿ ಒಬ್ಬಳು ತನ್ನ ಗಂಡನನ್ನು ಬಿಟ್ಟು ತಾಯಿಯೊಂದಿಗೆ ವಾಸವಿದ್ದಾಳೆ. ಈ ಎಲ್ಲಾ ಘಟನೆಯಿಂದ ಬೇಸತ್ತಿದ್ದ ಮಹಿಳೆ ಪತಿಯನ್ನು ಕೊಲ್ಲಲು ನಿರ್ಧರಿಸಿದ್ದಾಳೆ.
ಇದನ್ನೂ ಓದಿ: ಸಿದ್ದರಾಮಯ್ಯರ ಹೇಳಿಕೆ ತಿರುಚಿ ಅಪಪ್ರಚಾರ ಮಾಡುವುದೇ ಬಿಜೆಪಿಯವರ ಕೆಲಸ.. ಯು ಟಿ ಖಾದರ್
ಇಂದು ಬೆಳಗ್ಗೆ ಪತಿ ತನ್ನ ಮನೆ ಮುಂದೆ ತೆರಳುತ್ತಿದ್ದನ್ನು ಗಮನಿಸಿ ಆತನನ್ನು ಕೂಗಿ ಕರೆದಿದ್ದಾಳೆ. ಏನೋ ವಿಷಯ ಇರಬಹುದು ಎಂದು ಗಂಡ ಮನೆಯ ಎದುರುಗಡೆಯೇ ನಿಂತಿದ್ದಾನೆ. ತಕ್ಷಣವೇ ಹೊರ ಬಂದ ಆಕೆ ಆತನ ಕಣ್ಣಿಗೆ ಖಾರದ ಪುಡಿ ಎರಚಿ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ. ಪರಿಣಾಮ ರಾಜಯ್ಯ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಇನ್ನು ರಾಜಕ್ಕನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ರಾಜಯ್ಯನ ಮೃತದೇಹವನ್ನು ಮಹದೇವಪುರ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.