ETV Bharat / bharat

ಮರ್ಮಾಂಗ ಕತ್ತರಿಸಿ, ಗಂಡನ ಕೊಲೆಗೈದ ಪತ್ನಿ: ಕೊಲ್ಹಾಪುರದಲ್ಲಿ ಭೀಕರ ಘಟನೆ - ಗಂಡನ ಮರ್ಮಾಂಗ ಕತ್ತರಿಸಿದ ಪತ್ನಿ

ಕುಡಿದು ಅಮಲಿನಲ್ಲಿದ್ದ ಗಂಡನ ಮರ್ಮಾಂಗ ಕತ್ತರಿಸಿರುವ ಹೆಂಡತಿ, ಆತನ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Wife cuts off husband genitals
Wife cuts off husband genitals
author img

By

Published : May 17, 2022, 10:02 PM IST

Updated : May 17, 2022, 10:46 PM IST

ಕೊಲ್ಹಾಪುರ(ಮಹಾರಾಷ್ಟ್ರ): ಪ್ರತಿದಿನ ಕುಡಿದು, ಕಟ್ಟಿಕೊಂಡ ಹೆಂಡತಿ ಜತೆ ಜಗಳವಾಡ್ತಿದ್ದ ಗಂಡನನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿದ್ದ ವೇಳೆ ಗಂಡನ ಗುಪ್ತಾಂಗ ಕತ್ತರಿಸಿರುವ ಪತ್ನಿ, ಪತಿಯನ್ನೇ ಕೊಲೆ ಮಾಡಿದ್ದಾಳೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಇದರ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ಆರೋಪಿತೆ ನಾಟಕ ಕೂಡಾ ಮಾಡಿದ್ದಾಳೆ.

ಕೊಲ್ಹಾಪುರದ ಶಾಹುವಾಡಿಯ ಮಂಗೂರವಾಡಿಯಲ್ಲಿ ಘಟನೆ ನಡೆದಿದ್ದು, ಮೃತನನ್ನ ಪ್ರಕಾಶ್​ ಪಾಂಡುರಂಗ ಕಾಂಬಳೆ (52) ಎಂದು ಗುರುತಿಸಲಾಗಿದೆ. ಕೊಲೆ ಮಾಡಿರುವ ಪತ್ನಿಯನ್ನ ವಂದನಾ ಪ್ರಕಾಶ್​ ಕಾಂಬಳೆ (50) ಎಂದು ಗುರುತಿಸಲಾಗಿದೆ. ಪೊಲೀಸರು ವಂದನಾಳನ್ನ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿದಾಗ ತಪ್ಪೊಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: ICUನಲ್ಲಿ ಚಿಕಿತ್ಸೆ ಪಡೀತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆ ಕಣ್ಣಿನ ರೆಪ್ಪೆ ಕಚ್ಚಿ, ಕೂದಲು ತಿಂದ ಮೂಸಿಕ!

ಪ್ರಕರಣದ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಪಾಟೀಲ್ ಮಾಹಿತಿ ನೀಡಿದ್ದು, ಪ್ರಕಾಶ್ ಹಾಗೂ ಪತ್ನಿ ವಂದನಾ ಶಾಹುವಾಡಿ ತಾಲೂಕಿನ ನಿವಾಸಿಗಳಾಗಿದ್ದು, ಕೆಲ ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಜಮೀನೊಂದರಲ್ಲಿ ಕೆಲಸ ಮಾಡ್ತಿದ್ದರು. ನಿತ್ಯ ಗಂಡ ಕುಡಿದು, ಹೆಂಡತಿ ಜೊತೆ ಜಗಳ ಮಾಡುವುದರ ಜೊತೆಗೆ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದನು. ನಿನ್ನೆ ಮಧ್ಯರಾತ್ರಿ ಕೂಡ ಕಿರುಕುಳ ನೀಡಿದ್ದು, ಇದರಿಂದ ಆಕ್ರೋಶಗೊಂಡ ಪತ್ನಿ ಗಂಡನ ತಲೆಗೆ ಕಲ್ಲಿನಿಂದ ಹೊಡೆದಿದ್ದು, ಬಳಿಕ ಮರ್ಮಾಂಗ ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಿದ್ದಾಳೆಂದು ತಿಳಿಸಿದ್ದಾರೆ.

Last Updated : May 17, 2022, 10:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.