ಅಹಮದಾಬಾದ್: ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಗುಜರಾತ್ ಸರ್ಕಾರ ಕೂಡ ಇಂಧನ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರೂ.ಗಿಂತ ಕಡಿಮೆಯಾಗಿದೆ.
ಪಕ್ಕದ ರಾಜ್ಯ ಮಧ್ಯಪ್ರದೇಶದದಲ್ಲಿ ತೈಲ ದರ ಮೂರಂಕಿ ಇದೆ. ಇದರಿಂದಾಗಿ ಗುಜರಾತ್ ಗಡಿ ಸಮೀಪ ವಾಸಿಸುವ ಮಧ್ಯಪ್ರದೇಶದ ಜನರು ದಹೋದ್‌ನಲ್ಲಿ ಇಂಧನ ತುಂಬಿಸಿಕೊಳ್ಳಲು ಬರುತ್ತಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದ ಭಿಲಾಯ್ ಸ್ಟೀಲ್ ಘಟಕದಲ್ಲಿ ಸ್ಫೋಟ; 6 ಮಂದಿಗೆ ಗಾಯ
ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಾಹೋದ್ ಜಿಲ್ಲೆಯ ಜಲದ್ ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದೆ. ಇಲ್ಲಿಗೆ ಮಧ್ಯಪ್ರದೇಶದಿಂದ ಹೆಚ್ಚು ಜನರು ಪೆಟ್ರೋಲ್ ಮತ್ತು ಡೀಸೆಲ್ಗಾಗಿ ಬರುತ್ತಿದ್ದಾರೆ.
ಪೆಟ್ರೋಲ್ ಪಂಪ್ ಮಾಲೀಕ ಸುನೀಲ್ ಭಾಯ್ ಪ್ರಕಾರ, ಮಧ್ಯಪ್ರದೇಶಕ್ಕೆ ಹೋಲಿಸಿದರೆ ದಹೋದ್ ಜಿಲ್ಲೆಯಲ್ಲಿ ತೈಲ ಬೆಲೆ ಅಗ್ಗವಾಗಿದೆ. ಇದರಿಂದಾಗಿ ನಮ್ಮ ಪೆಟ್ರೋಲ್ ಪಂಪ್‌ನಲ್ಲಿ ಜನರ ಸಂಖ್ಯೆ ಶೇ.10ರಷ್ಟು ಹೆಚ್ಚಾಗಿದೆ. ಸದ್ಯದಲ್ಲಿಯೇ ತೈಲ ಬೆಲೆ ಇದೇ ರೀತಿ ಮುಂದುವರಿದರೆ ಮಧ್ಯಪ್ರದೇಶದಿಂದ ಜನ ಹರಿದು ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದರು.